ಸೊರಬ ವಿದ್ಯುತ್ ಉಪಕೇಂದ್ರ ಅವ್ಯವಸ್ಥೆಯ ಆಗರ
ಸೊರಬ,ಎ.12: ಸರಕಾರಗಳು ಸ್ವಚ್ಛ್ಚ ಭಾರತ ಮಿಷನ್ ಅಡಿಯಲ್ಲಿ ಸುತ್ತ ಮುತ್ತಲಿನ ಪ್ರದೇಶ ಸೇರಿದಂತೆ ಸರಕಾರಿ ಕಚೇರಿಗಳ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸುತ್ತಿದ್ದರೆ, ಇತ್ತ ಸೊರಬ ಪಟ್ಟಣದ ಸಾಗರ ರಸ್ತೆಯಲ್ಲಿರುವ ಕೆಪಿಟಿಸಿಎಲ್‌ನ 110 ಕೆ.ವಿ ವಿದ್ಯುತ್ ಉಪಕೇಂದ್ರ ಅವ್ಯವಸ್ಥೆಯ ಆಗರವಾಗಿದ್ದು, ಮೋಜು-ಮಸ್ತಿಯ ತಾಣವಾಗುವ ಜೊತೆಗೆ ಮದ್ಯದ ಖಾಲಿ ಬಾಟಲಿಗಳಿಂದ ತುಂಬಿದೆ. ವಿದ್ಯುತ್ ಉಪಕೇಂದ್ರದಲ್ಲಿ 8 ಮಂದಿ ಗುತ್ತಿಗೆ ಆಧಾರಿತ ನೌಕರರು ವಿವಿಧ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರದ ಉಸ್ತುವಾ ರಿಯನ್ನು ಪ್ರಭಾರಿ ಎಇಇ ರಮೇಶ್ ಗುಗ್ರಿ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕ ಆಸ್ಪತ್ರೆ, ಕೋರ್ಟ್ ಆವರಣ, ಮಹಿಳಾ ಹಾಸ್ಟೆಲ್, ಪಾಲಿಟೆಕಿ
್ನಕ್ ಕಾಲೇಜು, ಪೊಲೀಸ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿಗಳ ವಸತಿ ಗೃಹಗಳ ಸಮೀಪದಲ್ಲಿ ಇರುವುದರಿಂದ ನಿತ್ಯ ಸಾವಿರಾರು ಮಂದಿ ಸಂಚರಿಸುವ ರಸ್ತೆ ಪಕ್ಕದಲ್ಲಿಯೇ ವಿದ್ಯುತ್ ಉಪಕೇಂದ್ರದಲ್ಲಿ ಅಸ್ವಚ್ಛತೆಯ ದರ್ಶನವಾಗುತ್ತದೆ. ಸಾರ್ವಜನಿಕರಿಗೆ ನಿಷೇಧಿತ ಪ್ರದೇಶವಾಗಿರುವುದು ಮದ್ಯಪ್ರಿಯ ಕೆಲ ಸಿಬ್ಬಂದಿಗೆ ಹೇಳಿ ಮಾಡಿಸಿದಂಥ ಸೂಕ್ತ ಸ್ಥಳವಾಗಿದ್ದು, ನಿತ್ಯವೂ ಮದ್ಯದ ಅಮಲಿನಲ್ಲಿ ಕಾರ್ಯನಿರ್ಹಿಸುತ್ತಾರೆ ಎನ್ನಲಾಗುತ್ತಿದೆ.
ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾದ ಇಂತಹ ಸ್ಥಳದಲ್ಲಿ ಪ್ರಜ್ಞ್ಞಾಹೀನರಾಗಿ ಕಾರ್ಯನಿರ್ವಹಿಸಿ ಅವಘಡಗಳು ಸಂಭವಿಸಿದಲ್ಲಿ ಯಾರು ಹೊಣೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ರಾತ್ರಿ ಸಮಯದಲ್ಲಿ ಕಂಠ ಪೂರ್ತಿ ಮದ್ಯ ಸೇವಿಸಿ ಕುಡಿದ ಅಮಲಿನಲ್ಲಿ ಕಚೇರಿಯ ಮುಂಭಾಗ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು, ಪಾಸ್ಟಿಕ್ ಲೋಟಗಳು, ಆಹಾರ ಪದಾರ್ಥಗಳ ಉಳಿದ ತ್ಯಾಜ್ಯವನ್ನು ರಾಶಿ ರಾಶಿ ಗುಡ್ಡೆಯಂತೆ ಎಸೆದಿದ್ದರೂ ಉಪಕೇಂದ್ರದ ಉಸ್ತುವಾರಿಯನ್ನು ನಿರ್ವಹಿಸುತ್ತಿರುವವರು ವೌನ ವಹಿಸಿರುವುದು ಎಷ್ಟು ಸರಿ ಎಂಬ ಪ್ರಶ್ನೆಯ ಜೊತೆಗೆ ಪಟ್ಟಣದ ಹೃದಯ ಭಾಗದಲ್ಲಿರುವ ಸರಕಾರಿ ಕಚೇರಿಯೊಂದರ ದುಸ್ಥಿತಿಗೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂಬುದು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಪತ್ರಕರ್ತರ ಜೊತೆ ಉದ್ಧಟತನದಿಂದ ವರ್ತಿಸಿದ ಅಧಿಕಾರಿ :