×
Ad

ಯುವ ಜನತೆ ವಚನಕಾರರ ಮಹತ್ವ ಅರಿಯಲಿ: ು ಶಾಸಕ ವೈ.ಎಸ್.ವಿ. ದತ್ತ

Update: 2016-04-12 22:28 IST

ಕಡೂರು, ಎ. 12: ಆದ್ಯ ವಚನಕಾರ ದೇವರ ದಾಸಿಮಯ್ಯ ಅವರಿಗೆ 21 ನೆ ಶತಮಾನದಲ್ಲಿ ಮಹತ್ವ ಕಡಿಮೆಯಾಗುತ್ತಿದೆ. ಇಂದಿನ ಯುವ ಜನತೆ ಈ ವಚನಕಾರರ ಮಹತ್ವ ಅರಿಯಬೇಕೆಂದು ಶಾಸಕ ವೈ.ಎಸ್.ವಿ. ದತ್ತ ಕರೆ ನೀಡಿದರು.
ಅವರು ಮಂಗಳವಾರ ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ, ತಾಲೂಕು ದೇವಾಂಗ ಸಮಾಜ, ಯುವ ನೇಕಾರ ಸಂಘ ಏರ್ಪಡಿಸಿದ್ದ ದೇವರ ದಾಸಿಮಯ್ಯನವರ ಜಯಂತಿ ಮಹೋತ್ಸವದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
12 ನೆ ಶತಮಾನದ ಬಸವಣ್ಣ ಮತ್ತು ಇತರೆ ವಚನಕಾರರು ಕ್ರಾಂತಿಕಾರ ಮನೋಭಾವನೆ ಹೊಂದಿದ್ದರು. ಪುರೋಹಿತಶಾಹಿಗಳನ್ನು ಧಿಕ್ಕರಿಸಿದ ಬಸವಣ್ಣನವರ ಅನುಭವ ಮಂಟಪ ಹೊಸ ಸಮಾಜವನ್ನು ಕಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಿತು ಎಂದರು.
ಮೇಲ್ವರ್ಗದ ದೌರ್ಜನ್ಯ, ವೌಡ್ಯ, ತಪ್ಪು ಕಲ್ಪನೆಗಳಿಗೆ ತಿಲಾಂಜಲಿ ನೀಡಿ ಕಾಯಕಕ್ಕೆ ಮಹತ್ವ ನೀಡಿ ಶ್ರಮಜೀವಿಗಳು ಮುಂದೆ ಬರಲೆಂದು ಅನುಭವ ಮಂಟಪದ ಶರಣರು ಸಮಾಜ ತಿದ್ದುವ ಕೆಲಸವನ್ನು ಮಾಡಿದರು. ಇದರಲ್ಲಿ ದೇವರ ದಾಸಿಮಯ್ಯ ಅವರ ಶ್ರಮವೂ ಮುಖ್ಯ. ಮೇಲ್ವರ್ಗದ ಪಿತೂರಿಯಿಂದ ಕೂಡಲಸಂಗಮದಲ್ಲಿ ಬಸವಣ್ಣ ಐಕ್ಯವಾಗುವ ಮುನ್ನ ಸಣ್ಣ ಸಣ್ಣ ಸಮುದಾಯಗಳು ಸಮಾಜದಲ್ಲಿ ಉತ್ತುಂಗಕ್ಕೆ ಬರಬೇಕು ಎಂದು ಈ ಸಮಾಜಗಳಿಗೆ ಶಕ್ತಿ ತುಂಬಿದ್ದರು ಎಂದು ಹೇಳಿದರು.
  ದೇವಾಂಗ ನೌಕರ ಸಮಾಜದ ಅಧ್ಯಕ್ಷ ಬೆಂಕಿ ರಂಗಶೆಟ್ಟಿ ಮಾತನಾಡಿ, ದೇವರ ದಾಸಿಮಯ್ಯನವರ ಜಯಂತಿ ಮಹೋತ್ಸವ ಆಚರಣೆಗೆ ಸರಕಾರ ಮನ್ನಣೆ ನೀಡಿರುವುದಕ್ಕೆ ಅಭಿನಂದಿಸಿದರು.
ಮಲೆನಾಡು ದೇವಾಂಗ ಸಮಾಜದ ಅಧ್ಯಕ್ಷ ಅರೇಕಲ್ ಪ್ರಕಾಶ್ ಮಾತನಾಡಿ, ದೇವಾಂಗ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸರಕಾರ ಸೇರಿಸಿದ್ದರೂ ಅಲ್ಲಿ ಬಲಿಷ್ಟ ಸಮಾಜಗಳಿರುವುದರಿಂದ ಈ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ವಿಷಾಧಿಸಿದರು.
ಕಾರ್ಯಕ್ರಮವನ್ನು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷೆ ತಹಶೀಲ್ದಾರ್ ಎಂ. ಭಾಗ್ಯ ಉದ್ಘಾಟಿಸಿ ಮಾತನಾಡಿದರು.
 ಈ ಸಂದಭರ್ ಪುರಸಭೆ ಅಧ್ಯಕ್ಷೆ ಅನಿತಾ ರಾಜಕುಮಾರ್, ತಾಲೂಕು ದೇವಾಂಗ ಸಮಾಜದ ಅಧ್ಯಕ್ಷ ಕೃಷ್ಣಮೂರ್ತಿ, ನೇಕಾರ ಸಮಾಜದ ಅಧ್ಯಕ್ಷ ಎ.ಆರ್. ಕಾಂತರಾಜ್, ಯುವ ದೇವಾಂಗ ನೇಕಾರ ಸಮಾಜದ ಅಧ್ಯಕ್ಷ ಹರೀಶಕುಮಾರ್, ಪುರಸಬೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಕೆ.ಅರ್. ಪುನೀತ್, ಹರೀಶ್, ಮಲ್ಲಿಕ್, ದೀಪು, ರಂಗನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News