×
Ad

ಇಂದಿನಿಂದ ಉಪವಾಸ ಸತ್ಯಾಗ್ರಹ

Update: 2016-04-12 23:19 IST

ಬೆಂಗಳೂರು, ಎ.12: ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಉಪನ್ಯಾಸಕರ ಜೊತೆ ಸಚಿವರು ನಡೆಸಿದ್ದ 5ನೆ ಸುತ್ತಿನ ಮಾತುಕತೆಯೂ ಮುರಿದು ಬಿದ್ದಿದೆ. ಹೀಗಾಗಿ ಬುಧವಾರದಿಂದ ಉಪವಾಸ ಸತ್ಯಾಗ್ರಹ ನಡೆಸಲು ಉಪನ್ಯಾಸಕರ ಸಂಘ ನಿರ್ಧರಿಸಿದೆ.

ಮಂಗಳವಾರ ನಗರದ ಸರ್ವ ಶಿಕ್ಷಣ ಅಭಿಯಾನದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯ ನಂತರ ಮಾಧ್ಯಮಗಳೊಂದಿಗೆ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಮಾತನಾಡಿ, ಸಭೆ ವಿಫಲವಾಗಿದೆ ಎಂದು ಹೇಳಲಾಗುವುದಿಲ್ಲ. ನಾವಿಟ್ಟಿರುವ ಬೇಡಿಕೆಗಳನ್ನು ಪೂರೈಸಲು ಸಚಿವರು ಒಂದು ಹೆಚ್ಚೆ ಮುಂದೆ ಬಂದಿದ್ದಾರೆ. ಅಲ್ಲದೆ ಇಂದಿನ ಸಭೆ ಸಕಾರಾತ್ಮಕವಾದದ್ದು ಎಂದು ಹೇಳಿದರು. ನಮ್ಮ ಮೂಲ ವೇತನ ಹೆಚ್ಚಳಕ್ಕೆ ಸಚಿವರು ಮನಸ್ಸು ಮಾಡಿದ್ದಾರೆ. ಅಲ್ಲದೆ ನಾಳೆ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಂಭವವಿದೆ. ಆದರೆ ನಮ್ಮ ಎಲ್ಲ ಬೇಡಿಕೆಗಳು ಈಡೇರಿಸಲು ಸರಕಾರ ಹಿಂದೆ ಸರಿದಿರುವ ಪರಿಣಾಮ ನಾಳೆಯಿಂದ ಉಪವಾಸ ಸತ್ಯಾಗ್ರಹವನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

  ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಉಪನ್ಯಾಸಕರ ಮೂಲ ವೇತನ ಹೆಚ್ಚಳಕ್ಕೆ 45-50 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಆದರೆ ಉಪನ್ಯಾಸಕರು ವೇತನ ಹೆಚ್ಚಳಕ್ಕೆ ಪಟ್ಟುಹಿಡಿದ್ದಿದ್ದಾರೆ. ಉಪನ್ಯಾಸಕರ ಎಲ್ಲ ಬೇಡಿಕೆಗಳನ್ನು ಒಂದೇ ಬಾರಿಗೆ ಈಡೇರಿಸಲು ಸಾಧ್ಯವಾಗುವುದಿಲ್ಲ. ಈ ಕುರಿತು ಮುಖ್ಯಮಂತ್ರಿ ಜೊತೆಯಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿ ವೌಲ್ಯಮಾಪನದಲ್ಲಿ ಭಾಗವಹಿಸಿ ಎಂದು ಮನವರಿಕೆ ಮಾಡಲಾಗಿದೆ ಎಂದರು. ಎ.14ರಿಂದ ವೌಲ್ಯಮಾಪನ ಆರಂಭ: ಎ.14ರಿಂದ ಪಿಯು ವೌಲ್ಯಮಾಪನ ಮಾಡಲು ನಿರ್ಧರಿಸಲಾಗಿದೆ. ಇಷ್ಟರೊಳಗೆ ಉಪನ್ಯಾಸಕರು ಪ್ರತಿಭಟನೆಯನ್ನು ಕೈಬಿಡುವ ವಿಶ್ವಾಸ ನನ್ನಲಿದೆ. ವೌಲ್ಯಮಾಪನ ಮಾಡಲು 10ರಿಂದ 15ದಿನಗಳು ಸಾಕು. ಉಪನ್ಯಾಸಕರು ವೌಲ್ಯಮಾಪನಕ್ಕೆ ಹಾಜರಾಗುವುಂತೆ ಮನವೊಲಿಸಲಾಗುವುದು ಎಂದು ತಿಳಿಸಿದರು.
 ಒಂದು ವೇಳೆ ಪ್ರತಿಭಟನಾನಿರತ ಉಪನ್ಯಾಸಕರು ವೌಲ್ಯಮಾಪನಕ್ಕೆ ಹಾಜರಾಗದಿದ್ದರೂ ಭಯವಿಲ್ಲ. ನನ್ನ ಸಂಪರ್ಕದಲ್ಲಿ 12 ಸಾವಿರ ಉಪನ್ಯಾಸಕರಿದ್ದಾರೆ. ಅವರೇ ಸ್ವತಃ ದೂರವಾಣಿ ಮೂಲಕ ಕರೆ ಮಾಡಿ ವೌಲ್ಯ ಮಾಪನದಲ್ಲಿ ಭಾಗವಹಿಸುತ್ತೇವೆ ಎಂದು ತಿಳಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಪದವಿಪೂರ್ವ ಉಪನ್ಯಾಸಕರು ಹಾಗೂ ಪ್ರಿನ್ಸಿಪಾಲರಿಗೆ ಪ್ರತಿಭಟ ನೆಯನ್ನು ಕೈಬಿಡುವಂತೆ ಈಗಾಗಲೇ ಹಲವು ಬಾರಿ ಮನವಿಯನ್ನು ಮಾಡಿಕೊಂಡಿದ್ದು, ಬುಧವಾರವೂ ಪದಾಧಿಕಾರಿ ಗಳೊಂದಿಗೆ ಸಂಧಾನ ಸಭೆ ನಡೆಯಲಿದೆ. ಸಂಧಾನ ಸಭೆ ವಿಫಲವಾದರೆ ಅನಿವಾರ್ಯವಾಗಿ ಎಸ್ಮಾ ಜಾರಿಯ ಬಗ್ಗೆ ಚಿಂತನೆಯನ್ನೂ ನಡೆಸಲಾಗುವುದು.
-ಕಿಮ್ಮನೆ ರತ್ನಾಕರ, ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News