ಕೇಂದ್ರಗಳ ಸುತ್ತ ನಿಷೇಧಾಜ್ಞೆ
Update: 2016-04-12 23:20 IST
ಬೆಂಗಳೂರು, ಎ. 12: ಪ್ರಸ್ತುತ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ವೌಲ್ಯಮಾಪನ ಪ್ರಕ್ರಿಯೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ವೌಲ್ಯಮಾಪನ ಕೇಂದ್ರಗಳ ಸುತ್ತ 200 ಮೀ.ಅಂತರದಲ್ಲಿ ನಿಷೇಧಾಜ್ಞೆ ಎ.18ರಿಂದ ಜಾರಿ ಮಾಡಲಾಗಿದೆ.
ಅಂದು ಬೆಳಗ್ಗೆ 6 ಗಂಟೆಯಿಂದ ವೌಲ್ಯಮಾಪನ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಬೆಂಗಳೂರು ವ್ಯಾಪ್ತಿಯಲ್ಲಿರುವ ಆರ್.ವಿ.ಬಾಲಕಿಯರ ಪ್ರೌಢಶಾಲೆ, ನ್ಯಾಷನಲ್ ಪ್ರೌಢಶಾಲೆ, ಹೊಂಬೇಗೌಡ ಬಾಲಕರ ಪ್ರೌಢಶಾಲೆ, ರಾಣಿ ಸರಳಾದೇವಿ ಪ್ರೌಢಶಾಲೆ, ಸೆಂಟ್‌ಜಾನ್ ಪ್ರೌಢಶಾಲೆ, ನ್ಯೂ ಕೇಂಬ್ರಿಡ್ಜ್ ಪ್ರೌಢಶಾಲೆ ಹಾಗೂ ಬೆಂಗಳೂರು ಪ್ರೌಢಶಾಲೆಗಳ ಸುತ್ತ-ಮುತ್ತ ಪರೀಕ್ಷಾ ಪಾವಿತ್ರತೆಯನ್ನು ಕಾಪಾಡುವ ದೃಷ್ಟಿಯಿಂದ ನಿಷೇಧಿತ ಪ್ರದೇಶಗಳೆಂದು ಘೋಷಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.