ಯಡಿಯೂರಪ್ಪ ವಿರುದ್ಧದ ಪ್ರಕರಣಗಳನ್ನು ಕೈ ಬಿಟ್ಟ ಹೈಕೋರ್ಟ್‌; ಮೇಲ್ಮನವಿ ಸಲ್ಲಿಸಲು ಸರಕಾರಕ್ಕೆ ಕಾನೂನು ಇಲಾಖೆ ಸಲಹೆ

Update: 2016-04-13 05:01 GMT

ಬೆಂಗಳೂರು, ಎ.13: ಮಾಜಿ ಮುಖ್ಯ ಮಂತ್ರಿ ಬಿಎಸ್‌ ಯಡಿಯೂರಪ್ಪ ವಿರುದ್ಧದ ಪ್ರಕರಣಗಳನ್ನು ಹೈಕೋರ್ಟ್‌ ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌‌ಗೆ ಮೇಲ್ಮನವಿ ಸಲ್ಲಿಸಲು ಸರಕಾರಕ್ಕೆ ಅವಕಾಶ ಇದ್ದರೂ ಸರಕಾರ ಮೌನ ವಹಿಸಿರುವ ಹಿನ್ನೆಲೆಯಲ್ಲಿ ಕಾನೂನು ಇಲಾಖೆಯು ಸರಕಾರವನ್ನು ಎಚ್ಚರಿಸಿದೆ.
ಯಡಿಯೂರಪ್ಪ ವಿರುದ್ಧ ಮೇಲ್ಮನವಿ ಸಲ್ಲಿಸಲು ದೂರುದಾರರಿಗೆ ಅವಕಾಶ ಇದ್ದರೂ ಅವರು ಒಂದು ವೇಳೆ ಮೇಲ್ಮನವಿ ಸಲ್ಲಿಸದಿದ್ದರೆ ಸರಕಾರ ಸಲ್ಲಿಸಬೇಕಾಗುತ್ತದೆ. ಆದರೆ ಸರಕಾರ ಈ ಬಗ್ಗೆ ಗಮನ ಹರಿಸದಿದ್ದರೆ , ಯಡಿಯೂರಪ್ಪ ಜೊತೆ ಸರಕಾರ ಶಾಮೀಲಾಗಿರುವ ಆರೋಪವನ್ನು ಎದುರಿಸಬೇಕಾಗುತ್ತದೆ. ಈ  ಕಾರಣದಿಂದಾಗಿ ಕಾನೂನು ಇಲಾಖೆ ಸರಕಾರವನ್ನು ಎಚ್ಚರಿಸಿ, ಮೇಲ್ಮನವಿ ಸಲ್ಲಿಸಲು ಸಲಹೆ ನೀಡಿದೆ.
ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಯಡಿಯೂರಪ್ಪ ವಿರುದ್ಧ ಸರಕಾರ , ಸುಪ್ರೀಂಕೊರ್ಟ್‌ಗೆ  ಮೇಲ್ಮನವಿ ಸಲ್ಲಿಸಿದರೆ ಯಡಿಯೂರಪ್ಪ ಮತ್ತೆ ಸಮಸ್ಯೆಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News