×
Ad

ಎನ್ನೆಸ್ಸೆಸ್‌ಗೆ 4 ಕೋಟಿ ರೂ. ವಿಶೇಷ ಅನುದಾನ: ಸಚಿವ ಅಭಯಚಂದ್ರ ಜೈನ್

Update: 2016-04-13 21:56 IST

ಶಿವಮೊಗ್ಗ, ಎ. 13: ರಾಜ್ಯ ಸರಕಾರವು ಇದೇ ಮೊದಲ ಬಾರಿಗೆ ರಾಷ್ಟ್ರೀಯ ಸೇವಾ ಯೋಜನೆಗೆ 4 ಕೋಟಿ ರೂ. ವಿಶೇಷ ಅನುದಾನವನ್ನು ಈ ಬಾರಿಯ ಬಜೆಟ್‌ನಲ್ಲಿ ನೀಡಿದೆ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಕುವೆಂಪು ವಿವಿ ಮಟ್ಟದ ಎನ್ನೆಸ್ಸೆಸ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ನಂತರ ಅವರು ಮಾತನಾಡಿದರು.

 ಎನ್ನೆಸ್ಸೆಸ್‌ನ್ನು ಪಠ್ಯಕ್ರಮಕ್ಕೆ ಅಳವಡಿಸಬೇಕಾದ ಅಗತ್ಯತೆ ಇದೆ. ರಾಜ್ಯದಲ್ಲಿ ಈ ಹಿಂದೆಂದೂ ಆಗದ ಸಾಧನೆಯನ್ನು ಇತ್ತೀಚೆಗೆ ಎನ್ನೆಸ್ಸೆಸ್ ಮಾಡಿದೆ. ಸೇವಾ ಮನೋಭಾವ ಹೆಚ್ಚುತ್ತಿರುವ ಈ ದಿನಗಳಲ್ಲಿ ಯುವಕರು ಆಸಕ್ತಿಯಿಂದ ಎನ್ಸೆಸ್ಸೆಸ್‌ಗೆ ಹೆಚ್ಚೆಚ್ಚು ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.

 ಫಲಾಪೇಕ್ಷೆ ಇಲ್ಲದೆ ದುಡಿಯುವ ಏಕೈಕ ಕ್ಷೇತ್ರ ಇದಾಗಿದೆ. ವಿಶಿಷ್ಟ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಆದರ್ಶಪ್ರಾಯರಾಗಲು ಇದು ಉತ್ತಮ ವೇದಿಕೆಯಾಗಿದೆ. ಸಮಾಜದ ಅಭಿವೃದ್ಧಿಯ ಜೊತೆಗೆ ರಾಷ್ಟ್ರೀಯ ಅಭಿವೃದ್ಧಿಗೂ ತಮ್ಮ ಕಾಣಿಕೆ ನೀಡಲು ಇದರಲ್ಲಿ ಅವಕಾಶವಿದೆ. ಜೊತೆಗೆ ತನ್ನ ವ್ಯಕ್ತಿತ್ವವನ್ನೇ ಬದಲಾಯಿಸಿಕೊಂಡು ಉತ್ತಮ ಮನುಷ್ಯನಾಗಲು ಇದು ಸಹಾಯಕಾರಿ ಎಂದರು.

ರಾಜ್ಯ ಮಹಿಳಾ ವಿವಿಯ ನಿವೃತ್ತ ಪ್ರಾಧ್ಯಾಪಕ ಮತ್ತು ರಾಜ್ಯ ಎನ್ನೆಸ್ಸೆಸ್ ಮಾಜಿ ಅಧಿಕಾರಿ ಪ್ರೊ. ಎಂ. ಬಿ. ದಿಲ್‌ಶಾದ್ ಮಾತನಾಡಿ, ಎನ್ನೆಸ್ಸೆಸ್‌ನ್ನು ಸ್ವೀಕಾರ ಮಾಡಿದವನಲ್ಲಿ ಅಸಾಧಾರಣ ಬೆಳವಣಿಗೆ ಆಗುತ್ತದೆ. ಆತನ ಮನೋಭಾವ ಬದಲಾಗುತ್ತದೆ. ಸೇವೆಯ ಮೂಲಕವೇ ತನ್ನನ್ನು ಸಮಾಜಕ್ಕೆ ಅರ್ಪಿಸಿಕೊಳ್ಳುವ ಏಕೈಕ ಮಾರ್ಗ ಇದಾಗಿದೆ. ಜಾತಿ, ಧರ್ಮದ ವಾಸನೆ ಇಲ್ಲದೆ ಭ್ರಾತೃತ್ವ ಬೆಳೆಯಲು ಇದು ವೇದಿಕೆಯಾಗಿದೆ ಎಂದರು.

<ಪ್ರಶಸ್ತಿ ವಿಜೇತರು ಅತ್ಯುತ್ತಮ ಎನ್ನೆಸ್ಸೆಸ್ ಘಟಕ- ಜೆಸಿಬಿಎಂ ಕಾಲೇಜು ಶೃಂಗೇರಿ, ಅತ್ಯುತ್ತಮ ಎನ್ನೆಸ್ಸೆಸ್ ಅಧಿಕಾರಿ ಶೃಂಗೇರಿ ಜೆಸಿಬಿಎಂ ಕಾಲೇಜಿನ ಎ. ಜಿ. ಪ್ರಶಾಂತ್.

ಅತ್ಯುತ್ತಮ ಎನ್ನೆಸ್ಸೆಸ್ ಸ್ವಯಂಸೇವಕ ಕುವೆಂಪು ವಿವಿ ಸ್ನಾತಕೋತ್ತರ ಘಟಕದ ಮನ್ಸೂರ್ ಅಹ್ಮದ್, ಅತ್ಯುತ್ತಮ ಸ್ವಯಂಸೇವಕಿ- ಸಾಗರ ಇಂದಿರಾಗಾಂಧಿ ಮಹಿಳಾ ಕಾಲೇಜಿನ ಎಂ. ಪಲ್ಲವಿ ಮತ್ತು ಯಗಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಿ. ಪ್ರೀತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News