ಖಾಸಗಿ ಸಿಟಿಬಸ್‌ಗಳ ಆಟಾಟೋಪಕ್ಕೆ ನಾಗರಿಕರು ಬಲಿ
ಶಿವಮೊಗ್ಗ, ಎ. 13: ಶಿವಮೊಗ್ಗ ನಗರದಲ್ಲಿ ಕೆಲ ಖಾಸಗಿ ಸಿಟಿ ಬಸ್‌ಗಳ ಆಟಾಟೋಪ ಮುಂದುವರಿದಿದೆ. ಕೆಲ ಚಾಲಕರ ಮಿತಿಮೀರಿದ ವೇಗ, ನಿರ್ಲಕ್ಷ್ಯಕ್ಕೆ ಅಮಾಯಕ ನಾಗರಿಕರು ಸಾವು-ನೋವಿಗೆ ತುತ್ತಾಗುವಂತಾಗಿದೆ. ಮಂಗಳವಾರ ಸಂಜೆ ಕೂಡ ನಗರದಲ್ಲಿ ಇಬ್ಬರು ನಾಗರಿಕರು ಸಿಟಿ ಬಸ್ ವೇಗಕ್ಕೆ ಸಿಲುಕಿ ಬಲಿಯಾಗಿದ್ದಾರೆ. ಇದು ನಾಗರಿಕ ವಲಯದ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳ ಹಿಂದಷ್ಟೆ, ಖಾಸಗಿ ಸಿಟಿ ಬಸ್ ಚಾಲಕನ ಮಿತಿಮೀರಿದ ವೇಗಕ್ಕೆ ವಿದ್ಯಾನಗರ ಬಡಾವಣೆಯ ಬಳಿ ಸೈಕಲ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ಅಮಾಯಕ ಬಾಲಕನೋರ್ವ ಬಲಿಯಾಗಿದ್ದ. ಇದು ಸ್ಥಳೀಯ ನಿವಾಸಿಗಳನ್ನು ರೊಚ್ಚಿಗೇಳುವಂತೆ ಮಾಡಿತ್ತು. ವಿದ್ಯಾನಗರ ಬಡಾವಣೆಯಲ್ಲಿ ಖಾಸಗಿ ಸಿಟಿ ಬಸ್‌ಗಳ ಓಡಾಟ ಬೇಡ. ಇದಕ್ಕೆ ಬದಲಾಗಿ ಸರಕಾರಿ ಸಿಟಿ ಬಸ್ ಓಡಿಸಿ ಎಂದು ಜಿಲ್ಲಾಡಳಿತಕ್ಕೆ ನಾಗರಿಕರು ಆಗ್ರಹಿಸಿದ್ದರು. ಹಾಗೆಯೇ ಕೆಲ ಚಾಲಕ ಹಾಗೂ ಸಿಬ್ಬಂದಿದುಂಡಾವರ್ತನೆಯ ಬಗ್ಗೆಯೂ
ಾಗರಿಕರು ಆರೋಪಗಳ ಸುರಿಮಳೆಗೈದಿದ್ದರು. ಬೇಕಾಬಿಟ್ಟಿಯಾಗಿ ಬಸ್ ಓಡಿಸಲಾಗುತ್ತದೆ. ಮಹಿಳಾ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. ಸೌಜನ್ಯದಿಂದ ನಡೆದುಕೊಳ್ಳುವುದಿಲ್ಲ ಎಂಬಿತ್ಯಾದಿ ಆಪಾದನೆ ಮಾಡಿದ್ದರು. ನಾಗರಿಕರ ಆಕ್ರೋಶದಿಂದ ಎಚ್ಚೆತ್ತ ಕೆಲ ಖಾಸಗಿ ಸಿಟಿ ಬಸ್ ಮಾಲಕರು ಕೂಡ ತಮ್ಮ ಸಿಬ್ಬಂದಿಗೆ ಬುದ್ಧಿ ಹೇಳುವ ಭರವಸೆಯಿತ್ತಿದ್ದರು. ಮೀರಿದ ವೇಗ: ಈ ಘಟನೆಯ ನಂತರವೂ ನಗರದಲ್ಲಿ ಕೆಲ ಸಿಟಿ ಬಸ್‌ಗಳ ಆಟಾಟೋಪದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಜನನಿಬಿಡ, ವಾಹನ ದಟ್ಟಣೆಯಿರುವ ರಸ್ತೆಗಳಲ್ಲಿಯೂ ಮಿತಿಮೀರಿದ ವೇಗದಲ್ಲಿ, ಪೈಪೋಟಿಯ ಮೇಲೆ ಬಸ್‌ಗಳ ಚಾಲನೆ ಮಾಡಲಾಗುತ್ತಿದೆ. ನಿರ್ಲಕ್ಷ್ಯ, ಅಜಾಗರೂಕತೆಯಿಂದ ಬಸ್ ಓಡಿಸಲಾಗುತ್ತಿದೆ. ಇದರಿಂದ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಜೀವ ಕೈಯಲ್ಲಿಹಿಡಿದು ರಸ್ತೆಯಲ್ಲಿ ಸಂಚರಿಸುವಂತಹ ಸ್ಥಿತಿಯಿದೆ ಎಂದು ನಾಗರಿಕರು ದೂರುತ್ತಿದ್ದಾರೆ. ಸಿಟಿ ಬಸ್‌ನ ಮಿತಿಮೀರಿದ ವೇಗದ ಕಾರಣ ದಿಂದಲೇ ಮಂಗಳವಾರ ಸವಳಂಗ ರಸ್ತೆಯಲ್ಲಿ ಸಂಭವಿ ಸಿದ ರಸ್ತೆ ಅಪಘಾತದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಚಾಲಕ ಹಾಗೂ ಹಿಂಬದಿ ಸವಾರ ಅಸುನೀಗಿದ್ದಾರೆ. ಬಸ್ ಚಾಲಕನನಿರ್ಲಕ್ಷ್ಯ, ಅಜಾಗರೂಕ ಚಾಲನೆಯೇ ಈ ಅವಘಡಕ್ಕೆಕಾರಣವಾಗಿದೆ ಎಂಬುದು ನಾಗರಿಕರ ಆರೋಪವಾಗಿದೆ. ನಗರ ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿ ಸಿಟಿ ಬಸ್‌ಗಳು ಜೀವನಾಡಿಯ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಸಾವಿರಾರು ಪ್ರಯಾಣಿಕರು ಪ್ರತಿನಿತ್ಯ ಸಿಟಿ ಬಸ್‌ಗಳಲ್ಲಿ ಸಂಚರಿಸುತ್ತಾರೆ. ಕಡಿಮೆ ಪ್ರಯಾಣ ದರದಲ್ಲಿ ನಗರದ ಒಂದೆಡೆಯಿಂದ ಮತ್ತೊಂದೆಡೆಗೆ ತೆರಳಲು ಸಾಕಷ್ಟು ಸಹಕಾರಿಯಾಗಿವೆ. ಆದರೆ ಈ ಸಿಟಿ ಬಸ್‌ಗಳೇ ನಾಗರಿಕರ ಜೀವಕ್ಕೆ ಎರವಾಗುತ್ತಿರುವುದು ಆತಂಕಕಾರಿಯಾದ ಸಂಗತಿಯಾಗಿದೆ ಎಂದು ನಾಗರಿಕರು ಹೇಳುತ್ತಿದ್ದಾರೆ.
ಕ್ರಮ ಕೆಗೊಳ್ಳಲಿ
ಮಿತಿಮೀರಿದ ವೇಗದಲ್ಲಿ ಸಂಚರಿಸುವ ಖಾಸಗಿ ಸಿಟಿ ಬಸ್‌ಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಪೊಲೀಸ್ ಹಾಗೂ ಆರ್‌ಟಿಒರವರು ನಿರಂತರವಾಗಿ ಮಾಡಬೇಕು. ಇನ್ನಾದರೂ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಬೇಕು. ಅಮಾಯಕ ನಾಗರಿಕರು ಸಾವು ನೋವಿಗೆ ಬಲಿಯಾಗುವುದನ್ನು ತಪ್ಪಿಸಬೇಕು ಎಂಬುವುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.