ತಡೆಯಾಜ್ಞೆಗೆ ಹೈಕೋರ್ಟ್ ನಿರಾಕರಣೆ
Update: 2016-04-13 23:20 IST
ಬೆಂಗಳೂರು, ಎ.13: ನ್ಯಾ.ಸುಭಾಷ್ ಬಿ. ಅಡಿ ಪ್ರಕರಣಕ್ಕೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಈ ಸಂಬಂಧ ನ್ಯಾ.ಸುಭಾಷ್ ಬಿ.ಅಡಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಕುಮಾರ್ ಮತ್ತು ನ್ಯಾ.ಬಿ.ವೀರಪ್ಪ ಅವರಿದ್ದ ವಿಭಾಗೀಯ ಪೀಠ. ಈ ಆದೇಶ ನೀಡಿದೆ.
ಈಗಾಗಲೇ ಸರಕಾರಕ್ಕೆ ಶಾಸನಸಭೆಯಲ್ಲಿ ಲೋಕಾಯುಕ್ತ, ಉಪಲೋಕಾಯುಕ್ತರ ಪದಚ್ಯುತಿ ಪ್ರಕ್ರಿಯೆ ಕೈಗೊಳ್ಳುವುದಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸೂಚಿಸಲಾಗಿದ್ದು, ಈ ಸಂದರ್ಭದಲ್ಲಿ ನ್ಯಾ.ಸುಭಾಷ್ ಬಿ. ಅಡಿ ಪ್ರಕರಣಕ್ಕೆ ತಡೆಯಾಜ್ಞೆ ನೀಡಲು ಬರುವುದಿಲ್ಲ ಎಂದು ನ್ಯಾಯಪೀಠ ಸಮರ್ಥಿಸಿಕೊಂಡಿತು.
ಅಲ್ಲದೆ, ಪ್ರತಿವಾದಿಯಾಗಿ ಅರ್ಜಿ ಸಲ್ಲಿಸಿರುವ ತನ್ವೀರ್ ಸೇಠ್, ಬೂದಿಹಾಳ ವಿಚಾರಣೆ ಸಮಿತಿ ಮುಂದೆ ಹಾಜರಾಗಲು ಸೂಚಿಸಿ ವಿಚಾರಣೆಯನ್ನು ಎ.22ಕ್ಕೆ ಮುಂದೂಡಿತು.