ಶಿವಮೊಗ್ಗದ ಕೆಗಾರಿಕಾ ಅಭಿವೃದಿ್ಧಗೆ ಅಗತ್ಯ ನೆರವು
ಶಿವಮೊಗ್ಗ, ಎ.14: ಶಿವಮೊಗ್ಗ ನಗರದಲ್ಲಿ ಹೊಸದಾಗಿ ಕಾರ್ಯಾರಂಭಗೊಳ್ಳಲ್ಲಿರುವ ಕೈಗಾರಿಕೆಗಳಿಗೆ ಅಗತ್ಯವಾದ ಎಲ್ಲ ಮೂಲಸೌಲಭ್ಯ, ಆಡಳಿತಾತ್ಮಕ ಅನುಮೋದನೆಗಳನ್ನು ತ್ವರಿತಗತಿಯಲ್ಲಿ ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬಕ್ಕೆ ಆಸ್ಪದವಾಗದಂತೆ ಎಚ್ಚರವಹಿಸಬೇಕು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆಯವರು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗುರುವಾರ ಬೆಳಗ್ಗೆ ತಮ್ಮ ತವರೂರು ಉತ್ತರ ಕನ್ನಡಕ್ಕೆ ತೆರಳುವ ಮಾರ್ಗ ಮಧ್ಯೆ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ (ಡಿ.ಐ.ಸಿ.)ದ ಅಧಿಕಾರಿಗಳೊಂದಿಗೆ ಅನೌಪಚಾರಿಕ ಸಮಾಲೊಚನೆ ನಡೆಸಿದರು. ಜಿಲ್ಲೆಯ ಕೈಗಾರಿಕಾ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಇನ್ವೆಸ್ಟ್ ಕರ್ನಾಟಕ ಹಾಗೂ ಈ ಹಿಂದಿನ ಬಂಡವಾಳ ಹೂಡಿಕೆದಾರರ ಸಮಾವೇಶ ದಲ್ಲಿ ಶಿವಮೊಗ್ಗದಲ್ಲಿ ಕೈಗಾರಿಕೆ ಸ್ಥಾಪನೆಗೆ ಮುಂದಾದ ಉದ್ಯಮಿಗಳಿಗೆ ಅಗತ್ಯವಾದ ಭೂಮಿ ನೀಡಿ. ಹಾಗೆಯೇ ಏಕಹಂತದಲ್ಲಿ ಸ್ಥಳೀಯ ಆಡಳಿತಾತ್ಮಕ ಅನುಮೋದನೆ ನೀಡಿ. ಯಾವುದೇ ಕಾರಣಕ್ಕೂ ಮೂಲಸೌಲಭ್ಯ ಕೊರತೆ, ಆಡಳಿತಾತ್ಮಕ ಅನು ಮೋದನೆ ವಿಳಂಬ ಕಾರಣದಿಂದ ಉದ್ಯಮಿದಾರರು ಬಂಡವಾಳ ಹೂಡಿಕೆಯಿಂದ ಹಿಂದೆ ಸರಿಯು ವಂತಾಗಬಾರದು ಎಂದು ತಿಳಿಸಿದರು. ಇನ್ವೆಸ್ಟ್ ಕರ್ನಾಟಕಕ್ಕೆ ಸಂಬಂಧಿಸಿದಂತೆ ಎ. 16 ರಂದು ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿ, ಪ್ರಗತಿ ಪರಿಶೀಲನೆ ನಡೆಸಲಾಗುವುದು. ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದ ಉದ್ಯಮಿದಾರರಿಗೆ ಕಲ್ಪಿಸಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಹೆಚ್.ಆರ್.ರಾಜಪ್ಪ ಸೇರಿದಂತೆ ಸ್ಥಳೀಯ ಅಧಿಕಾರಿ-ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಜಿಲ್ಲೆಯ ಕೈಗಾರಿಕಾ ಬೆಳವಣಿಗೆಯ ಬಗ್ಗೆ ಸಚಿವರಿಗೆ ಸಮಗ್ರ ಮಾಹಿತಿ ನೀಡಿದರು. ಪ್ರಸ್ತಾವನೆ ಸಲ್ಲಿಸಿ
ಶಿವಮೊಗ್ಗ ನಗರದ ಕೈಗಾರಿಕಾ ವಸಾಹತುಗಳನ್ನು ಮೇಲ್ದರ್ಜೆಗೇರಿಸಲು, ಅಗತ್ಯ ಮೂಲಸೌಕರ್ಯ ಕಲ್ಪಿಸಲು ಅಗತ್ಯವಾದ ಅನುದಾನ ನೀಡಲಾಗುವುದು. ಈ ಕುರಿತಂತೆ ಸಮಗ್ರವಾದ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸು ವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶಿವಮೊಗ್ಗ ನಗರದ ಹೊರವಲಯ ದೇವಾಕಾತಿಕೊಪ್ಪ ಹಾಗೂ ಸಿದ್ಲಿಪುರ ಕೈಗಾರಿಕಾ ವಸಾಹತು ಪ್ರದೇಶದ ಅಭಿವೃದ್ಧಿಯ ಬಗ್ಗೆ ಸಚಿವರು ಕೂಲಂಕಷ ಮಾಹಿತಿ ಕಲೆ ಹಾಕಿದರು. ಲಭ್ಯವಿರುವ ನಿವೇಶನಗಳ ಸಂಖ್ಯೆ, ಸಂದಾ ಯವಾಗಿರುವ ಅರ್ಜಿಗಳ ವಿವರ, ಹಂಚಿಕೆಯಾಗಿರುವ ನಿವೇಶನ, ವಸಾಹತು ಅಭಿವೃದ್ಧಿ ಕಾಮಗಾರಿಯ ಬಗ್ಗೆ ಡಿಐಸಿ ಅಧಿಕಾರಿಗಳು ಸವಿವರವಾದ ಮಾಹಿತಿ ನೀಡಿದರು.