ಮುಖ್ಯಮಂತ್ರಿಗೆ ಎಚ್.ಡಿ.ದೇವೇಗೌಡ ಪತ್ರ

Update: 2016-04-15 17:19 GMT

ಬೆಂಗಳೂರು, ಎ.15: ಕಾಲೇಜು ಉಪನ್ಯಾಸಕರ ಹಾಗೂ ಪ್ರಾಂಶುಪಾಲರ ಸಂಘವು ಸಮಾನ ವೇತನ ಹಾಗೂ ಕುಮಾರ್‌ನಾಯಕ್ ವರದಿ ಜಾರಿಗೆ ಒತ್ತಾಯಿಸಿ 14 ದಿನಗಳಿಂದ ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಮುಷ್ಕರ ಕೈಗೊಂಡಿರುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮಾಜಿ ಪ್ರಧಾನಿ ದೇವೇಗೌಡರು ಪತ್ರ ಬರೆದಿದ್ದಾರೆ.
ಮೂರು ದಿನಗಳಿಂದ ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದು, ಕೆಲವು ಉಪನ್ಯಾಸಕರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಶಿಕ್ಷಕರು ಮತ್ತು ಉಪನ್ಯಾಸಕರು ಸಮಾಜದ ಆಸ್ತಿಯಾಗಿದ್ದು, ಇವರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ಪ್ರತಿಯೊಂದು ಸರಕಾರದ ಕರ್ತವ್ಯ ಎಂದು ಅವರು ತಿಳಿಸಿದರು.
ಉಪನ್ಯಾಸಕರನ್ನು ಅವರ ಬೇಡಿಕೆಗಾಗಿ ಪ್ರತಿಭಟನೆಗೆ ಇಳಿಸುವುದು ಯಾವುದೇ ಸರಕಾರಕ್ಕೆ ಶೋಭೆ ತರುವುದಿಲ್ಲ. ಇವರ ಬೇಡಿಕೆಗಳು ಸರಕಾರದ ಮಟ್ಟದಲ್ಲಿ ಮಾತುಕತೆಯ ಮೂಲಕ ಬಗೆಹರಿಯಬೇಕಾಗಿತ್ತು. ಇವರ ಬೇಡಿಕೆಗಳನ್ನು ಜಾರಿಗೊಳಿಸಿದರೆ ಸರಕಾರಕ್ಕೆ ಆರ್ಥಿಕವಾಗಿ ಹೆಚ್ಚು ತೊಂದರೆಯಾಗುವುದಿಲ್ಲ ಎಂದು ದೇವೇಗೌಡ ಅಭಿಪ್ರಾಯಪಟ್ಟರು.
ಸುಮಾರು 10 ವರ್ಷಗಳಿಂದಲೂ ತಮ್ಮ ನ್ಯಾಯಯುತ ಬೇಡಿಕೆ ಜಾರಿಗಾಗಿ ಉಪನ್ಯಾಸಕರು ಒತ್ತಾಯಿಸುತ್ತಿದ್ದು, ಮಾನವೀಯತೆಯ ದೃಷ್ಟಿಯಿಂದ ಇವರ ಬೇಡಿಕೆಗಳನ್ನು ಪರಿಗಣಿಸಿ ಜಾರಿಗೊಳಿಸಬೇಕು. ಹಾಗೂ ಉಪನ್ಯಾಸಕರ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲು ಸರಕಾರ ಮುಂದಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News