×
Ad

ಅಂಬೇಡ್ಕರ್ ವೃತ್ತ ನವೀಕರಣಕ್ಕೆ ಜಿಲ್ಲಾಧಿಕಾರಿಗೆ ಮನವಿ

Update: 2016-04-16 21:23 IST

ಚಿಕ್ಕಮಗಳೂರು, ಎ.16: ಬೇಲೂರು ಮತ್ತು ಬೈಪಾಸ್ ರಸ್ತೆಗೆ ಸಾಗುವ ಹಿರೇಮಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತವನ್ನು ನವೀಕರಿಸಿಕೊಡುವಂತೆ ಒತ್ತಾಯಿಸಿ ನವಚೇತನ ಯುವಕ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಅವರು ಸಂಘದ ಅಧ್ಯಕ್ಷ ರೇವನಾಥ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮಾತನಾಡಿ, ಬೇಲೂರು ರಸ್ತೆ ಡಾಂಬರೀಕರಣ ಮಾಡಿ ಅಭಿವೃದ್ಧಿಪಡಿಸುತ್ತಿರುವುದು ಸ್ವಾಗತಾರ್ಹವಾದುದು. ಆದರೆ ಈ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಹಿರೇ ಮಗಳೂರು ಬಳಿ ಇದ್ದ ಅಂಬೇಡ್ಕರ್ ವೃತ್ತ ಹಾನಿಯಾಗಿದೆ. ಕೂಡಲೆ ಅದನ್ನು ದುರಸ್ತಿ ಪಡಿಸಿ ವಿನೂತನ ಮಾದರಿಯಲ್ಲಿ ನಿರ್ಮಿಸುವಂತೆ ಒತ್ತಾಯಿಸಿದರು.

ಚಿಕ್ಕಮಗಳೂರಿನಿಂದ ಈ ಮಾರ್ಗದಲ್ಲಿ ತೆರಳುವ ಕೆಎಸ್ಸಾರ್ಟಿಸಿ ಮತ್ತು ನಗರಸಾರಿಗೆ ಬಸ್‌ಗಳು ಟಿಕೆಟ್ ನೀಡುವಾಗ ಪೈ ಛತ್ರ ಎಂದು ನಮೂದಿಸಲಾಗಿದೆ. ಅದನ್ನು ಬದಲಿಸಿ ಹಿರೇಮಗಳೂರು ಅಂಬೇಡ್ಕರ್‌ವೃತ್ತ ಎಂದು ನಮೂದಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು. ಕೂಡಲೆ ವೃತ್ತವನ್ನು ದುರಸ್ತಿಗೆ ಸಾರಿಗೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿದ್ದರೆ ಮುಂದೆ ಗ್ರಾಮಸ್ಥರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೇವನಾಥ್ ತಿಳಿಸಿದ್ದಾರೆ.

ಈ ವೇಳೆ ಉಪಾಧ್ಯಕ್ಷ ಸೋಮಸುಂದರ್, ಪ್ರಸಾದ್, ಜನಕರಾಜ್, ಜಗದೀಶ್, ಮಂಜು ನಾಥ್, ರಘು, ಸಂಜಯ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News