×
Ad

ಎಸ್ಸೆಸ್ಸೆಫ್‌ನಿಂದ ಸಾಮೂಹಿಕ ಮುಂಜಿ ಕಾರ್ಯಕ್ರಮ

Update: 2016-04-16 21:25 IST

ಚಿಕ್ಕಮಗಳೂರು, ಎ.16: ಧಾರ್ಮಿಕ, ಲೌಕಿಕ ವಿದ್ಯಾಭ್ಯಾಸ ಸೇರಿದಂತೆ ಸಾಮಾಜಿಕ ಚಟುವಟಿಕೆಗಳ ಮೂಲಕ ಬಡವರಿಗೆ ನೆರವಾಗುತ್ತಿರುವುದು ಸಂಘದ ಸದುದ್ದೇಶವಾಗಿದೆ ಎಂದು ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಮುನೀರ್ ಅಹ್ಮದ್ ತಿಳಿಸಿದ್ದಾರೆ.

ಅವರು ಶನಿವಾರ ನಗರ ಹೊರವಲಯದ ಉಪ್ಪಳ್ಳಿಯಲ್ಲಿ ಎಸ್ಸೆಸ್ಸೆಫ್ ಹಮ್ಮಿಕೊಂಡಿದ್ದ ಸಾಮೂಹಿಕ ಮುಂಜಿ ಕಾರ್ಯಕ್ರಮದಲ್ಲಿ ಹಣ್ಣುಹಂಪಲು ವಿತರಿಸಿ ಮಾತನಾಡಿದರು. ಅಲ್ಪಸಂಖ್ಯಾತ ಜನಾಂಗದ ಬಡವರ್ಗದ ಕುಟುಂಬಗಳಿಗೆ ಸ್ಪಂದಿಸುವ ಸಲುವಾಗಿ ಕಳೆದ ಹಲವು ವರ್ಷಗಳಿಂದ ಸರಳ ಸಾಮೂಹಿಕ ವಿವಾಹ, ಮುಂಜಿ, ಧಾರ್ಮಿಕ ವಿದ್ಯಾಭ್ಯಾಸ ಸೇರಿದಂತೆ ಹತ್ತುಹಲವು ಸಾಮಾಜಿಕ ಕಳಕಳಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಡವರಿಗೆ ನೆರವಾಗುವ ಕಾರ್ಯ ಎಸ್ಸೆಸ್ಸೆಫ್ ಸಂಘಟನೆ ಮಾಡುತ್ತಿದೆ ಎಂದರು.

ದಾನಿ ಖಾದರ್ ಮಾತನಾಡಿ, ಯಾವುದೇ ಸಂಘಟನೆಗಳು ಸಮಾಜದ ಹಿತಕಾಯುವಲ್ಲಿ ಪ್ರಮುಖಪಾತ್ರ ವಹಿಸಬೇಕು. ಬಡವರನ್ನು ಗುರುತಿಸಿ ದೇವರು ಮೆಚ್ಚುವ ರೀತಿ ನಮ್ಮ ಕೈಲಾದ ಮಟ್ಟಿಗೆ ಪ್ರಾಮಾಣಿಕವಾಗಿ ಸೇವೆ ಮಾಡಿದಾಗ ಜೀವನದಲ್ಲಿ ಸಾರ್ಥಕತೆ ಕಾಣಬಹುದು. ಸಾಮಾಜಿಕ ಸೇವಾ ಕಾರ್ಯದಲ್ಲಿ ಮಾನವತೆ, ಸಹೋದರ ಸಂಬಂಧಗಳ ಅರಿವನ್ನು ಕಾಣಬಹುದು ಎಂದು ನುಡಿದರು.

ಈ ಸಮಯದಲ್ಲಿ ತ್ವಾಹಾ ಸಅದಿ, ಯೂಸುಫ್ ಹಾಜಿ, ಉಸ್ಮಾನ್ ಹಂಡಗುಳಿ, ಹಾಮಿಮ ತಂಙಳ್, ಮುಫ್ತಿ ಅಹ್ಮದ್, ಹಫೀಝ್, ಇರ್ಷಾದ್, ಖಾದರ್, ಔರಂಗ್ ಅತೀಕ್, ಫೈರೋಝ್, ಇಬ್ರಾಹೀಂ, ಶಂಸುದ್ದೀನ್, ಶೇಖ್, ಸುಫ್ಯಾನ್, ತಸ್ಲೀಂ, ಮುಸ್ತಫಾ ಜುಹರಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News