ಕನ್ನಡ ಸಾಹಿತ್ಯವು ಮನೆಮನೆಗೆ ತಲುಪಲಿ: ಹಾಲೇಶ್ ನವುಲೆ
ಸೊರಬ, ಎ. 16: ಕನ್ನಡ ಸಾಹಿತ್ಯದ ಚಟುವಟಿಕೆಗಳು ವರ್ಷಪೂರ್ತಿ ನಡೆಯಬೇಕಾದರೆ, ವ್ಯಕ್ತಿಗಿಂತ ಸಂಘಟನೆ ಮುಖ್ಯವಾಗುತ್ತದೆ ಎಂದು ಕಸಾಪ ತಾಲೂಕು ನೂತನ ಅಧ್ಯಕ್ಷ ಹಾಲೇಶ್ ನವುಲೆ ನುಡಿದರು. ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು. ಶತಮಾನದ ಇ
ತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್‌ನ ಬೆಳವಣಿಗೆ ಹಾಗೂ ಕನ್ನಡ ಸಾಹಿತ್ಯವು ಮನೆಮನೆಗೆ ತಲುಪುವಲ್ಲಿ ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಿದೆ. ಸದಸ್ಯರೆಲ್ಲಾ ಒಗ್ಗೂಡಿ ಸಾಹಿತ್ಯಕ್ಕೆ ಪೂರಕವಾದ ಕೆಲಸ ನಿರ್ವಹಿಸಲು ಮುಂದಾಗೋಣ ಎಂದು ಕರೆ ನೀಡಿದ ಅವರು, ತಾಲೂಕಿನ ಕಸಾಪದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದರು. ್ರಾಮೀಣ ಪ್ರದೇಶದಲ್ಲಿ ಉತ್ತಮ ಬರಹಗಾರರು, ಸಾಹಿತ್ಯ ಪ್ರೇಮಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಜೊತೆಯಲ್ಲಿ ಗ್ರಾಮೀಣ ಜನರನ್ನು ಸಾಹಿತ್ಯದೆಡೆ ಸೆಳೆಯಲು ‘ಸಾಹಿತ್ಯದ ನಡೆ ಗ್ರಾಮದ ಕಡೆ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗುವುದು ಎಂದ ಅವರು, ಕಸಾಪವು ಜಾತ್ಯಾತೀತ, ಪಕ್ಷಾತೀತವಾದ ಸಂಘಟನೆಯಾಗಿದ್ದು, ತಮ್ಮ ಅಧಿಕಾರಾವಧಿಯಲ್ಲಿ ಸಾಹಿತ್ಯ ಪೂರಕವಾಗಿ ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಪರಿಷತ್ತನ್ನು ಕಟ್ಟುವ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವ
ಹಿಸುವುದಾಗಿ ತಿಳಿಸಿದರು. ತಾಲೂಕಿನಲ್ಲಿ ಕಸಾಪ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಿದ ಜಿಲ್ಲಾಧ್ಯಕ್ಷ ಡಿ.ಬಿ. ಶಂಕರಪ್ಪ ಅವರು ತಮ್ಮ ಸೇವೆಯನ್ನು ಗುರುತಿಸಿ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ತಾಲೂಕಿನಲ್ಲಿ ಸಾಹಿತ್ಯ ಪರಿಷತ್‌ನ್ನು ಕಟ್ಟುವಲ್ಲಿ ಜಿಲ್ಲಾಧ್ಯಕ್ಷರ ಮಾರ್ಗದರ್ಶನ ಹಾಗೂ ಸಲಹೆಯನ್ನು ಪಡೆದು ಕಾರ್ಯನಿರ್ವಹಿಸುವುದಾಗಿ ತಿಳಿಸಿದ ಅವರು, ತಮ್ಮನ್ನು ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ತಾಲೂಕು ಸೇರಿದಂತೆ ಜಿಲ್ಲಾ ಹಾಗೂ ರಾಜ್ಯ ಸಮಿತಿಯವರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಪಾಣಿ ಶಿವಾನಂದಪ್ಪ ಕನ್ನಡ ಧ್ವಜ ನೀಡುವ ಮೂಲಕ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಸಾಪ ಪ್ರಮುಖರಾದ ಪ್ರಕಾಶ ಮಡ್ಲೂರು, ಕೆ.ಸಿ. ಶಿವಕುಮಾರ್, ಕಾಳಿಂಗರಾಜ್, ಮುಕ್ತಾಬಾಯಿ ಭಟ್, ಆರ್.ಎಸ್. ಇಂದಿರಾ, ಶಶಿಕಲಾ, ಸಣ್ಣಬೈಲು ಪರಶುರಾಮಪ್ಪ, ಧವನ ಓಮೇಶ್, ಮಲ್ಲಿಕಾರ್ಜುನ್, ಓಂಕಾರಪ್ಪ, ರೇಣುಕಮ್ಮ ಗೌಳಿ ಮತ್ತಿತರರಿದ್ದರು.