‘ನಿರುದ್ಯೋಗ ನಿರ್ಮೂಲನೆಯಲ್ಲಿ ಬ್ಯಾಂಕ್‌ಗಳ ಪಾತ್ರ ಮಹತ್ವದ್ದು’
ದಾವಣಗೆರೆ,ಎ.17: ಕರರು ಮೊದಲು ತಮ್ಮ ಕಾಯಕಕ್ಕೆ ಆದ್ಯತೆ ನೀಡಿ, ನಂತರ ತಮ್ಮ ಬೇಡಿಕೆ ಈಡೇರಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಡಾ. ಶಿವಮೂರ್ತಿ ಶಿವಚಾರ್ಯ ಶ್ರೀಗಳು ತಿಳಿಸಿದ್ದಾರೆ.
ನಗರದ ಶಾಮನೂರು ಶಿವನೌ ಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ವಿಜಯ ಬ್ಯಾಂಕ್ ಅಸೋಸಿಯೇಷನ್‌ನ 10ನೆ ಪ್ರಾದೇಶಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತ ನಾಡಿದರು. ಜಪಾನ್ ದೇಶದಲ್ಲಿ ಕಂಪೆನಿಗಳ ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ಹೆಚ್ಚಿನ ಕೆಲಸ ಮಾಡಿ ಕಂಪೆನಿಗೆ ಲಾಭ ತಂದು, ನಂತರ ತಮ್ಮ ಬೇಡಿಕೆ ಈಡೇರಿಸಿಕೊಳ್ಳುತ್ತಾರೆ. ಆದರೆ, ಭಾರತದಲ್ಲಿ ಕೆಲಸ ಬಂದ್ ಮಾಡಿ ಪ್ರತಿಭ ಟನೆ ನಡೆಸುತ್ತಿರುವುದು ವಿಷಾದನೀಯ ಎಂದ ಅವರು, ಯಾವುದೇ ನೌಕರರು ತಮ್ಮ ಮಾತೃ ಸಂಸ್ಥೆಗೆ ಧಕ್ಕೆಯಾಗದಂತೆ, ಸಂಸ್ಥೆಯ ಆದಾಯ ಹೆಚ್ಚಿಸಿ ನಂತರ ಬೇಡಿಕೆಗಳನ್ನು ಇಟ್ಟಾಗ ಸರಳವಾಗಿಯೇ ಬೇಡಿಕೆಗಳು ಈಡೇರುತ್ತವೆ ಎಂದರು.
ವಿಜಯ ಬ್ಯಾಂಕ್ ನಿಂದ ಸಿರಿಗೆರೆಯಲ್ಲಿ ಗ್ರಾಮೀಣ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಿಂದ ಒಂದು ಸುಸಜ್ಜಿತವಾದ ಆ್ಯಂಬುಲೆನ್ಸ್ ನೀಡಿರುವುದನ್ನು ಸ್ಮರಿಸಬಹುದಾಗಿದೆ ಎಂದು ಹೇಳಿದರು.
ನಂತರ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ಬಡತನ, ನಿರುದ್ಯೋಗ ನಿರ್ಮೂಲನೆಯಲ್ಲಿ ಬ್ಯಾಂಕ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ದುಡಿಮೆ ಮಾಡಲು ಇಚಿ್ಛಸುವ ಯಾವುದೇ ವ್ಯಕ್ತಿಗೆ ಬ್ಯಾಂಕೊಂದು ಸಾಲ ನೀಡಿ ಪ್ರೋತ್ಸಾಹಿಸಿದರೆ ಸಹಜವಾಗಿ ಬಡತನ, ನಿರುದ್ಯೋಗ ಮಾಯವಾಗುತ್ತದೆ. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಲ ನೀಡುವ ಮೂಲಕ ರೈತರನ್ನು, ಕಾರ್ಮಿಕರನ್ನು, ವ್ಯಾಪಾರಿಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ವಿಜಯ ಬ್ಯಾಂಕ್‌ನ ಗೋಪಾಲಕೃಷ್ಣ, ಕೆ.ಆರ್. ರಾಮಕೃಷ್ಣ ಪೂಂಜಾ, ಮುರುಗೇಂದ್ರಪ್ಪ, ರವಿ, ಮಂಜುನಾಥಶೆಟ್ಟಿ, ಎಚ್.ಆರ್. ಲಿಂಗಸ್ವಾಮಿ ಮತ್ತು ಬ್ಯಾಂಕ್‌ನ ಎಲ್ಲಾ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.