×
Ad

ಪೊಕ್ಸೊ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಲಿ: ಹೈ.ನ್ಯಾ.ಕುಮಾರ್

Update: 2016-04-17 22:18 IST

 ದಾವಣಗೆರೆ,ಎ.17: ನಮ್ಮ ಯುವ ಸಮುದಾಯವನ್ನು ಶತ್ರು ರಾಷ್ಟ್ರಗಳು ಮಾದಕ ವಸ್ತುಗಳ ಚಟಕ್ಕೆ ದಾಸರನ್ನಾಗಿಸುವ ವ್ಯವಸ್ಥಿತ ಸಂಚು ನಡೆಸುತ್ತಿದ್ದು, ಯುವಕರು ಮಾದಕ ವ್ಯಸನಿಗಳಾಗದೆ ಎಚ್ಚೆತ್ತುಕೊಳ್ಳಬೇಕು ಎಂದು ಹೈಕೋರ್ಟ್ ನ್ಯಾ. ಎನ್. ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಎಂಬಿಎ ಕಾಲೇಜು ಆವರಣದಲ್ಲಿ ರವಿವಾರ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಎನ್‌ಡಿಪಿಎಸ್ ಫೊಕ್ಸೊ ಕಾಯ್ದೆಗಳ ಕುರಿತು ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಿನೇದಿನೇ ಬಲಾಢ್ಯವಾಗುತ್ತಿರುವ ನಮ್ಮ ದೇಶವನ್ನು ಹತ್ತಿಕ್ಕುವ ಉದ್ದೇಶದಿಂದ ಶತ್ರುರಾಷ್ಟ್ರಗಳು ನೇರವಾಗಿ ಎದುರಿಸಲು ಸಾಧ್ಯವಾಗದೆ ನಮ್ಮ ಯುವಜನಾಂಗವನ್ನು ಮಾದಕ ವಸ್ತುಗಳ ದಾಸರನ್ನಾಗಿ ಮಾಡುತ್ತಿದ್ದಾರೆ ಎಂದರು.

ಮಾದಕ ವಸ್ತುಗಳ ಪಿಡುಗುಗಳ ಪ್ರಕರಣವನ್ನು ಇತರೆ ಪ್ರಕರಣಗಳಂತೆ ಪರಿಗಣಿಸದೆ ಗಂಭೀರ ಕ್ರಮ ಕೈಗೊಳ್ಳುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಬೇಕಿದ್ದು, ಮಾದಕ ವಸ್ತು ಮಾರಾಟ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಸುಪ್ರೀಂಕೋರ್ಟ್ ಆದೇಶ ದಂತೆ ಪೊಲೀಸ್‌ರು, ರಾಜಕಾರಣಿಗಳು ಮತ್ತು ದಂಧೆ ಕೋರರ ಹಣದ ಪ್ರಭಾವಕ್ಕೆ ಒಳಗಾಗಿ ಇಂತಹ ಪ್ರಕರಣ ನಿರ್ಲಕ್ಷಿಸಬಾರದು ಎಂದು ಎಚ್ಚರಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದಕ ವಸ್ತುಗಳ ಸಾಗಣೆ ಮಾಡುವ ವ್ಯವಸ್ಥಿತ ಜಾಲವೇ ಹರಡಿಕೊಂಡಿದೆ. ನಮ್ಮ ದೇಶದ ಯುವ ಜನಾಂಗ ಇದಕ್ಕೆ ಬಲಿಯಾಗುತ್ತ್ತಿದೆ. ಆದ್ದರಿಂದ ಅಧಿಕಾರಿಗಳು ಇದನ್ನು ನಿಯಂತ್ರಿಸಬೇಕು ಎಂದು ತಿಳಿಸಿದರು. ಅನೇಕ ಕಡೆಗಳಲ್ಲಿ ವೇಶ್ಯಾವಾಟಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ವೇಶ್ಯವಾಟಿಕೆ ನಡೆಸುವವರ ಮೇಲೆ ಪ್ರಕರಣ ದಾಖಲಾ  

 ಗುತ್ತಿಲ್ಲ. ಆದ್ದರಿಂದ ಇಂತಹ ಪ್ರಕರಣ ಗಂಭೀರವಾಗಿ ಪರಿಗಣಿಸಿ ವೇಶ್ಯಾವಾಟಿಕೆ ನಡೆಸುವವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ಫೊಕ್ಸೊ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು. ಜಿಲ್ಲಾಧಿಕಾರಿ ಎಸ್.ಟಿ. ಅಂಜನ್ ಕುಮಾರ್ ಮಾತನಾಡಿ, ಮಹಿಳೆಯರನ್ನು ಸಮಾನತೆಯಿಂದ ಕಂಡಾಗ ಮಾತ್ರ ಸಂವಿಧಾನದಲ್ಲಿರುವ ಸಮಾನತೆ ಮತ್ತು ಸ್ವಾತಂತ್ರ ಕಾಣಲು ಸಾಧ್ಯ ಎಂದು ತಿಳಿಸಿದರು. ಜಿಲ್ಲಾ ನ್ಯಾಯಾಧೀಶರಾದ ನ್ಯಾ. ಎಂ. ಶ್ರೀದೇವಿ , ಹೈ ಕೋರ್ಟ್ ನ್ಯಾ. ಎಲ್. ನಾರಾಯಣಸ್ವಾಮಿ, ನ್ಯಾ. ಚನ್ನಬಸಪ್ಪ ಮುರ್ಗುರ, ಎಸ್.ಬಿ. ವಸ್ತ್ರಮಠ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಎಸ್. ಗುಳೇದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News