×
Ad

ಮೌಲ್ಯಮಾಪನಕ್ಕೆ ಗೈರು ಹಾಜರಾಗದಿರಲು ಸೂಚನೆ

Update: 2016-04-19 22:00 IST

ಕಾರವಾರ, ಎ. 19: ಎಸೆಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ ಕಾರ್ಯ ಪ್ರಾರಂಭವಾಗಲಿದ್ದು, ಕರ್ತವ್ಯಕ್ಕೆ ನಿಗದಿಪಡಿಸಿರುವ ಎಲ್ಲಾ ಶಿಕ್ಷಕರು ಕಡ್ಡಾಯವಾಗಿ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಡಿಡಿಪಿಐ ಕಾರವಾರ ತಿಳಿಸಿದ್ದಾರೆ.

ಮೌಲ್ಯಮಾಪನ ಕಾರವಾರ ಶೈಕ್ಷಣಿಕ ಜಿಲ್ಲೆಯ ಆರು ಕೇಂದ್ರಗಳಲ್ಲಿ ನಡೆಯಲಿದೆ. ಕಾರವಾರದ ಹಿಂದೂ ಪ್ರೌಢಶಾಲೆ, ಬಾಲಮಂದಿರ ಪ್ರೌಢಶಾಲೆ ಮತ್ತು ಸೈಂಟ್ ಮೈಕಲ್ ಪ್ರೌಢಶಾಲೆ, ಕುಮಟಾ ತಾಲೂಕಿನ ಗಿಬ್ ಪ್ರೌಢಶಾಲೆ, ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ನಿರ್ಮಲಾ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ನಡೆಯಲಿದೆ. ಈಗಾಗಲೇ ಮೌಲ್ಯಮಾಪನಕ್ಕಾಗಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಯಿಂದ ಶಿಕ್ಷಕರಿಗೆ ನೇಮಕಾತಿ ಆದೇಶ ಕಳುಹಿಸಲಾಗಿದೆ.

ಮೌಲ್ಯಮಾಪನ ಕಾರ್ಯವು ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮ 1983 ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಯಮ 2012 ಅನ್ವಯ ಕಡ್ಡಾಯವಾಗಿರುತ್ತದೆ. ಮೌಲ್ಯಮಾಪನ ಕಾರ್ಯದಿಂದ ಯಾರಿಗೂ ಈ ಕಚೇರಿಯಿಂದ ವಿನಾಯಿತಿ ನೀಡಲಾಗಿರುವುದಿಲ್ಲ. ಅನಾರೋಗ್ಯದ ಕಾರಣಗಳಿದ್ದಲ್ಲಿ ವೈದ್ಯಕೀಯ ಮಂಡಳಿಯ ಪ್ರಮಾಣ ಪತ್ರ ಹಾಜರುಪಡಿಸಬೇಕು. ಇಲ್ಲದಿದ್ದರೆ ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮ 1957 ಪ್ರಕಾರ ಶಿಸ್ತು ಕ್ರಮ ಜರಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News