ಶೌಚಾಲಯಗಳ ಕಾಮಗಾರಿ ಪೂರ್ಣಗೊಳಿಸಿ: ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್

Update: 2016-04-20 16:21 GMT

ಮಡಿಕೇರಿ, ಎ.20: ವೀರಾಜಪೇಟೆ ತಾಲೂಕು ಪಂಚಾಯತ್ ವ್ಯಾಪ್ತಿಯ 10 ಗ್ರಾಪಂ ಗಳಲ್ಲಿ ಬಾಕಿ ಉಳಿದಿರುವ 1,088 ಶೌಚಾಲಯಗಳನ್ನು ಆಗಸ್ಟ್ ಅಂತ್ಯಕ್ಕೆ ಪೂರ್ಣಗೊಳಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೈಜೋಡಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಅವರು ಕರೆ ನೀಡಿದ್ದಾರೆ.

ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒಗಳೊಂದಿಗೆ ವೀರಾಜಪೇಟೆಯಲ್ಲಿ ಬುಧವಾರ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ವಾರ್ಡ್‌ವಾರು ಕ್ಯಾಟ್(ಕ್ಯಾಚ್ಮೆಂಟ್ ಏರಿಯಾ ಟೀಂ) ಮಾದರಿಯಲ್ಲಿ 3 ಜನ ಸದಸ್ಯರನ್ನು ಆಯ್ಕೆಮಾಡಿ ಒಂದು ವಾರದೊಳಗೆ ವಾರ್ಡ್‌ವಾರು ಸಮೀಕ್ಷೆ ಪೂರ್ಣಗೊಳಿಸಿ ಎ.ಬಿ.ಸಿ.ಡಿ.ಇ.ಎಫ್ ಮಾದರಿಯಲ್ಲಿ ವರ್ಗೀಕರಣಗೊಳಿಸಿ ಜಿಪಂಗೆ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಪಂ ಉಪ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಕಾರ್ಯನಿರ್ವಹಣಾಧಿಕಾರಿ ಫಡ್ನೇಕರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಇಬ್ರಾಹೀಂ, ಲಕ್ಷ್ಮೀಕಾಂತ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News