ನಾಳೆ ವಿದ್ಯುತ್ ವ್ಯತ್ಯಯ
Update: 2016-04-20 21:57 IST
ಮಡಿಕೇರಿ, ಎ.20: ಮಡಿಕೇರಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಭಾಗಮಂಡಲ ಮತ್ತು ಮೇಕೇರಿ ಫೀಡರ್‌ನ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಹಾಗೂ ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ಎ.22ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಭಾಗಮಂಡಲ ಮತ್ತು ಮೇಕೇರಿ ಫೀಡರ್‌ನಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಕಡಗದಾಳು, ಮೇಕೇರಿ, ಕಗ್ಗೋಡ್ಲು, ಅಪ್ಪಂಗಲ, ಚೇರಂಬಾಣೆ, ಮದೆನಾಡು, ಜೋಡುಪಾಲ, ಬೆಟ್ಟತ್ತೂರು, ಬೆಟ್ಟಗೇರಿ, ಕಾರುಗುಂದ ಹೆರವನಾಡು, ಚೆಟ್ಟಿಮಾನಿ, ಭಾಗಮಂಡಲ, ಕಾಟಕೇರಿ ಕೋರಂಗಾಲ ಮತ್ತು ಸುತ್ತಮುತ್ತಲ ವ್ಯಾಪ್ತಿಯ ಹಾಗೂ ಇದೇ ಅವಧಿಯಲ್ಲಿ ಮಡಿಕೇರಿ ನಗರ ವ್ಯಾಪ್ತಿಯ ಮಂಗಳಾದೇವಿನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.