ಶಿವಮೊಗ್ಗ: ವಿವಿಧ ಸಂಘಟನೆಗಳಿಂದ ಪ್ರತೆ್ಯೀಕ ಪ್ರತಿಭಟನೆ
ಶಿವಮೊಗ್ಗ,ಎ.20: ಶಿವಮೊಗ್ಗ ನಗರದಲ್ಲಿ ವಿವಿಧ ವಿಷಯ ಮುಂದಿಟ್ಟುಕೊಂಡು ಎನ್‌ಎಸ್‌ಯುಐ, ರಾಜ್ಯ ರೈತ ಸಂಘ, ಹಿಂದೂ ಜನಜಾಗೃತಿ ಸಮಿತಿಯು ಡಿ.ಸಿ. ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದವು. ಮತ್ತೊಂದೆಡೆ ದ್ವಿತೀಯ ಪಿಯು ಉಪನ್ಯಾಸಕರು ವೌಲ್ಯಮಾಪನ ಕಾರ್ಯಕ್ಕೆ ಹಿಂದಿರುಗಿದ್ದಕ್ಕೆ ಗೋಪಿ ವೃತ್ತದಲ್ಲಿ ಸಮಾಜವಾದಿ ಟ್ರಸ್ಟ್ ಸಂಭ್ರಮಾಚರಣೆ ಮಾಡಿತು. ಎನ್‌ಎಸ್‌ಯುಐ:
ಸಹ್ಯಾದ್ರಿ ಕಾಲೇಜು ಉಪನ್ಯಾಸಕ ಡಾ. ಮೇಟಿ ಮಲ್ಲಿಕಾರ್ಜುನ ವಿರುದ್ಧ ದೇಶದ್ರೋಹದ ಆರೋಪ ಹೊರಿಸುವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಧಮನಿಸುವ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕು ಎಂದು ಎನ್‌ಎಸ್‌ಯುಐ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಪತ್ರ ಅರ್ಪಿಸಿದರು. ಸಾಗರ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಡಾ. ಮೇಟಿ ಮಲ್ಲಿಕಾರ್ಜುನರವರು ಜವಾಬ್ದಾರಿಯುತವಾಗಿಯೇ ಮಾತನಾಡಿದ್ದಾರೆ. ಆದರೆ ಇದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಪಕ್ಷದವರು ಅನಾವಶ್ಯಕವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ. ವಾದವನ್ನು ಪ್ರತಿವಾದದಿಂದ ಎದುರಿಸಬೇಕೇ ವಿನಃ ವಿವಾದ ಮಾಡುವುದರಿಂದಲ್ಲ ಎಂಬುವುದನ್ನು ಅರಿತುಕೊಳ್ಳಬೇಕಾಗಿದೆ ಎಂದು ಸಂಘಟನೆ ತಿಳಿಸಿದೆ. ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಮುಖಂಡರಾದ ಸಿ.ಜಿ.ಮಧುಸೂಧನ್, ಕೆ. ಚೇತನ್, ಜಿಲ್ಲಾಧ್ಯಕ್ಷ ಡಿ.ಎಲ್.ಶ್ರೀಜಿತ್, ನಗರಾಧ್ಯಕ್ಷ ಎಚ್.ಎಸ್.ಬಾಲಾಜಿ, ಪಾಲಿಕೆ ಸದಸ್ಯ ವಿಶ್ವನಾಥ್ ಕಾಶೀ, ಪುರಲೆ ಮಂಜು ಮತ್ತಿತರರು ಉಪಸ್ಥಿತರಿದ್ದರು.
ರೈತ ಸಂಘ: ಭ್ರಷ್ಟಾಚಾರಿಗಳ ನಿದ್ದೆಗೆಡಿಸಿರುವ ಲೋಕಾಯುಕ್ತ ಸಂಸ್ಥೆ ದುರ್ಬಲಗೊಳಿಸುವ ಉದ್ದೇಶದಿಂದ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ.) ರಚನೆ ಮಾಡಲಾಗಿದೆ. ತಕ್ಷಣವೇ ರಾಜ್ಯ ಸರಕಾರ ಎ.ಸಿ.ಬಿ. ರದ್ದುಪಡಿಸಬೇಕು. ಲೋಕಾಯುಕ್ತ ಸಶಕ್ತಗೊಳಿಸುವ ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ರಾಜ್ಯ ಸರಕಾರಕ್ಕೆ ಒತ್ತಾಯಿಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಅರ್ಪಿಸಿತು. ರಾಜ್ಯದ ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಎಸಿಬಿ ರಚನೆ ಮಾಡಲಾಗಿದ್ದು, ಇದು ಅಕ್ಷಮ್ಯ ಅಪರಾಧವಾಗಿದೆ. ಯಾವುದೇ ಕಾರಣಕ್ಕೂ ಎಸಿಬಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಸಂಘಟನೆ ತಿಳಿಸಿದೆ. ಹಾಗೆಯೇ ಜಿಲ್ಲೆಯ ಶಿಕಾರಿಪುರ ತಾಲೂಕಿನ ಮಲ್ಲಾಪುರ ದೊಡ್ಡಕೆರೆ ಒತ್ತುವರಿ ತೆರವುಗೊಳಿಸಬೇಕು. ಅರಣ್ಯ ಸಂರಕ್ಷಣೆಗೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದೆ. ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ವೈ.ಜಿ.ಮಲ್ಲಿಕಾರ್ಜುನ್, ವಸಂತ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಹಿಂದೂ ಆಂದೋಲನ:
ರಾಜ್ಯ ಸರಕಾರವು ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಓಲೈಕೆಗೆ ದೊಡ್ಡ ಪ್ರಮಾಣದ ಅನುದಾನ ಮೀಸಲಿರಿಸಿದೆ. ಅತೀ ಹೆಚ್ಚಿನ ತೆರಿಗೆ ಪಾವತಿಸುವ ಹಿಂದೂಗಳ ಕಲ್ಯಾಣಕ್ಕೆ ಹಾಗೂ ದೇವಾಲಯ ಅಭಿವೃದ್ಧ್ದಿಗೆ ಅನುದಾನ ಮೀಸಲಿರಿಸಿಲ್ಲ. ಇದು ಸರಕಾರದ ತಾರತಮ್ಯ ಧೋರಣೆಗೆ ಸಾಕ್ಷಿಯಾಗಿದೆ ಎಂದು ರಾಷ್ಟ್ರೀಯ ಹಿಂದೂ ಆಂದೋಲನ ಸಮಿತಿ ಆರೋಪಿಸಿದೆ. ಪ್ರತಿಭಟನೆಯಲ್ಲಿ ವಿಜಯ್ ರೇವಣ್ಕರ್, ಮಂಜುನಾಥ್ ಪೂಜಾರಿ, ಜಗನ್ನಾಥ್, ರಾಕೇಶ್, ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು.
nಸಂಭ್ರಮಾಚರಣೆ: