ಸ್ಮಿತಾ ಮಾಕಳ್ಳಿ ಸೇರಿದಂತೆ ಐವರಿಗೆ ಪ್ರಶಸ್ತಿ
Update: 2016-04-20 23:24 IST
ಬೆಂಗಳೂರು, ಎ.20: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೊಡಮಾಡುವ 2015ರ ಸಾಲಿನ ಅರಳು ಪ್ರಶಸ್ತಿಗೆ ಸಾಹಿತಿಗಳಾದ ಪರಶುರಾಮ ಶಿವಶರಣ, ಅಂಕುರ್ ಬೆಟಗೇರಿ, ಸ್ಮಿತಾ ಮಾಕಳ್ಳಿ, ಕೆ.ಬಿ.ಅಮಾತೆಣ್ಣವರ, ಕಲ್ಮೇಶ ಭೀ. ಬಡಿಗೇರ ಆಯ್ಕೆ ಯಾಗಿದ್ದಾರೆ.
ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್, ಹಂಪಿ ವಿವಿ ಕುಲಪತಿ ಡಾ.ಮಲ್ಲಿಕಾ ಘಂಟಿ, ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರ ರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪಕಾರ್ಯದರ್ಶಿ ಗಳಿದ್ದು, ಅರ್ಹ ಸಾಹಿತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಸಾಂಸ್ಕೃತಿಕ ಮತ್ತು ಮಾಧ್ಯಮ ಸಲಹಾ ಸಮಿತಿಯ ಸಂಚಾಲಕ ಎಂ.ಎಸ್.ಗುಣಶೀಲನ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.