×
Ad

ರೋಗಿ, ವೆದ್ಯರ ನಡುವಿನ ಕಂದಕ ಕಡಿಮೆಯಾಗಲಿ: ಸಚಿವ ಯು. ಟಿ. ಖಾದರ್

Update: 2016-04-23 21:32 IST

ಶಿವಮೊಗ್ಗ, ಎ. 23: ನಗರದ ಸರಕಾರಿ ಮೆಡಿಕಲ್ ಕಾಲೇಜ್ ಆವರಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಮ್ಮೇಳನಕ್ಕೆ ಆರೋಗ್ಯ ಇಲಾಖೆ ಸಚಿವ ಯು. ಟಿ. ಖಾದರ್ ಶನಿವಾರ ದೀಪ ಬೆಳಗಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು. ತದನಂತರ ಸಮಾರಂಭವನ್ನುದ್ದೇಶಿಸಿ ಮಾತ ನಾಡಿದ ಅವರು, ಸರಕಾರಿ ವೈದ್ಯರು ಬೇಡಿಕೆಗಳ ನ್ನು ಸರಕಾರದ ಮುಂದಿಡುವುದಕ್ಕಿಂತ ಮೊದಲು ಆಸ್ಪತ್ರೆಗೆ ಬರುವ ಜನರ ಅಪೇಕ್ಷೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕು ಆಸ್ಪತ್ರೆಗಳು ಅಚ್ಚುಕಟ್ಟಾಗಿಟ್ಟುಕೊ ಳ್ಳುವಲ್ಲಿ ಗಮನಹರಿಸಬೇಕು. ಸಮಾವೇಶಕ್ಕೆ ಬಂದ ಉತ್ಸಾಹವನ್ನು ಆಸ್ಪತ್ರೆಯ ಕೆಲಸದಲ್ಲೂ ತೋರಿಸ ಬೇಕು. ಇದರಿಂದ ಜನತೆಗೆ ಉತ್ತಮ ಸಂದೇಶ ನೀಡಿ ದಂತಾಗುತ್ತದೆ ಎಂದು ಕಿವಿಮಾತು ಹೇಳಿದರು. ತಾವು ವೈದ್ಯನಲ್ಲದಿದ್ದರೂ ಸಹ ಆಸ್ಪತ್ರೆಗೆ ಆಗಮಿ ಸುವ ಜನರ ಅಪೇಕ್ಷೆ ಏನೆಂಬುವುದನ್ನು ಚೆನ್ನಾಗಿ ಅರಿತುಕೊಂಡಿದ್ದೇನೆ. ವೈದ್ಯರಾದವರು ಇದನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ. ಆಸ್ದತ್ರೆಗೆ ಬರುವವರು ವೈದ್ಯರ ಸಹಕಾರವನ್ನು ಬಯಸುತ್ತಾರೆ. ರೋಗಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಬಂಧಿತರಿಂದ ನೀಡುವ ಮೂಲಕ ರೋಗಿಯೊಟ್ಟಿಗೆ ಬರುವವರ ಉದ್ವಿಗ್ನತೆಯನ್ನು ಕಡಿಮೆ ಮಾಡ ಬೇಕು. ಇದರಿಂದ ಆಸ್ಪತ್ರೆಗಳ ಮೇಲೆ ನಡೆಯುವ ದಾಳಿ ಅಥವಾ ವೈದ್ಯರ ಮೇಲಿನ ಹಲ್ಲೆ ತಪ್ಪಿಸಲು ಸಾಧ್ಯವಿದೆ ಎಂದರು.

ಇತ್ತೀಚೆಗೆ ಹೆಲ್ತ್‌ಕೇರ್ ಕುರಿತು ಹೆಚ್ಚಿನ ಜನ ಜಾಗೃತಿ ಮೂಡುತ್ತಿದೆ. ಆಸ್ಪತ್ರೆಗಳಲ್ಲಿ ವೈದ್ಯರು ಸರಿಯಾಗಿ ಜನರ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ತಮ್ಮ ಸಮಸ್ಯೆಗೆ ವೈದ್ಯರು ಸ್ಪಂದಿಸಿಲ್ಲ ಅಥವಾ ತಮ್ಮನ್ನು ಸರಿಯಾಗಿ ಗಮನಿಸಿಲ್ಲ ಎಂಬ ಸಂಶಯ ಬಂದರೆ ರೋಗಿಗಳು ಮತ್ತೆ ಆ ಆಸ್ಪತ್ರೆ ಬರುವುದಿಲ್ಲ. ರೋಗಿ ಮತ್ತು ವೈದ್ಯರ ನಡುವಿನ ಕಂದಕ ಕಡಿಮೆಯಾಗಬೇಕು. ಈ ನಿಟ್ಟಿನಲ್ಲಿ ವೈದ್ಯರು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಸಮಾವೇಶದಲ್ಲಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್, ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಶಾಸಕ ಕೆ.ಬಿ. ಪ್ರಸನ್ನಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ರಾಜ್ಯ ಸರಕಾರಿ ವೈದ್ಯರ ಸಂಘದ ಅಧ್ಯಕ್ಷ ಡಾ.ಟಿ.ಎ. ವೀರಭದ್ರಯ್ಯ, ಕಾರ್ಯದರ್ಶಿ ಡಾ. ಜಿ.ಎ. ಶ್ರೀನಿವಾಸ್ ಖಜಾಂಚಿ ಡಾ. ಕೆ.ಎನ್.ಚಂದ್ರಮೋಹನ್, ಗೌರವಾಧ್ಯಕ್ಷ ಡಾ. ಎಚ್.ಎನ್. ರವೀಂದ್ರ, ಇಲಾಖೆಯ ನಿರ್ದೇಶಕಿ ವಿಮಲಾ ಗೌಡ ಆರ್. ಪಾಟೀಲ್, ಶಿವಮೊಗ್ಗ ಮೆಡಿಕಲ್ ಕಾಲೇಜ್ ನಿರ್ದೇಶಕ ಡಾ. ಬಿ.ವಿ. ಸುಶೀಲ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ಸರಕಾರಿ ವೈದ್ಯರ ಸಂಘದ ಜಿಲ್ಲಾಧ್ಯಕ್ಷ ಡಾ. ಆರ್. ರಘುನಂದನ್ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News