ಶಿವಮೊಗ್ಗ ನಗರದ ಹೊರವಲಯ ತ್ಯಾವರೆಕೊಪ್ಪ ಗ್ರಾಮದಲ್ಲಿರುವ ಹುಲಿ-ಸಿಂಹಧಾಮಕ್ಕೆ ಬನ್ನೇರುಘಟ್ಟದಿಂದ ಬರಲಿವೆ 4 ಸಿಂಹಗಳು
ಶಿವಮೊಗ್ಗ, ಎ. 23: ಶಿವಮೊಗ್ಗ ನಗರದ ಹೊರವಲಯ ತ್ಯಾವರೆಕೊಪ್ಪ ಗ್ರಾಮದಲ್ಲಿರುವ ಹುಲಿ-ಸಿಂಹಧಾಮಕ್ಕೆ ಬೆಂಗ ಳೂರು ಸಮೀಪದ ಬನ್ನೇರುಘಟ್ಟ ಉದ್ಯಾನವನದಲ್ಲಿರುವ ನಾಲ್ಕು ಸಿಂಹಗಳನ್ನು ತರಲು ನಿರ್ಧರಿಸಲಾಗಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆ ಸಿದ್ಧಪಡಿಸಿ ರಾಜ್ಯ ಮೃಗಾ ಲಯ ಪ್ರಾಧಿಕಾರದ ಮೂಲಕ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ. ‘ಕೇಂದ್ರ ಮೃಗಾಲಯ ಪ್ರಾಧಿಕಾರ ಅನುಮತಿ ನೀಡುತ್ತಿ ದ್ದಂತೆ ಬನ್ನೇರುಘಟ್ಟದಿಂದ ತ್ಯಾವರೆಕೊಪ್ಪಕ್ಕೆ ಸಿಂಹಗಳನ್ನು ತರಲಾಗುವುದು. ಈಗಾಗಲೇ ಈ ನಾಲ್ಕು ಸಿಂಹಗಳಿಗೆ ಪ್ರತ್ಯೇಕ ಕೇಜ್‌ಗಳ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಅಧೀಕ್ಷಕ ರಘುರಾಂ ದೇವಾಡಿಗರು ತಿಳಿಸಿದ್ದಾರೆ. ಶನಿವಾರ ನಗರದಲ್ಲಿರುವ ಕಚೇರಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕೆಲ ತಿಂಗಳುಗಳ ಹಿಂದೆ ವಯೋ ಸಹಜ ಕಾರಣದಿಂದ ತ್ಯಾವರೆಕೊಪ್ಪದಲ್ಲಿದ್ದ ಹೆಣ್ಣು ಸಿಂಹವೊಂದು ಅಸುನೀಗಿತ್ತು. ಪ್ರಸ್ತುತ ಸಿಂಹಾಧಾಮದಲ್ಲಿ ಎರಡು ಸಿಂಹಗಳಿವೆ. ಈ ಹಿನ್ನೆಲೆಯಲ್ಲಿ ಬನ್ನೇರುಘಟ್ಟದಿಂದ ತಲಾ ಒಂದು ಗಂಡು, ಹೆಣ್ಣು ಹಾಗೂ ಎರಡು ಮರಿ ಸೇರಿದಂತೆ ನಾಲ್ಕು ಸಿಂಹಗಳನ್ನು ತರಲು ನಿರ್ಧರಿಸಲಾಗಿತ್ತು. ಈಗಾಗಲೇ ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಕಳುಹಿಸಿ ಕೊಡಲಾಗಿದೆ. ಅಲ್ಲಿಂದ ಅನುಮತಿ ಸಿಗುತ್ತಿದ್ದಂತೆ ಸಿಂಹಗಳ ಸ್ಥಳಾಂತರ ಪ್ರಕ್ರಿಯೆ ನಡೆಯಲಿದೆ ಎಂದರು. ಇದೀಗ ಸಿಂಹಾಧಾಮದಲ್ಲಿ 8 ಹುಲಿ, 20 ಚಿರತೆಗಳಿವೆ ಎಂದು ತಿಳಿಸಿದ ಅವರು, ‘ಸಿಂಹಗಳನ್ನು ಹೊರ ತುಪಡಿಸಿದರೆ ಬೇರೆ ವನ್ಯಮೃಗಗಳನ್ನು ತರುವ ಯಾವುದೇ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಪ್ರಸ್ತುತ ಬೇಸಿಗೆಗೆ ಜಿಲ್ಲೆಯಲ್ಲಿ ಬಿಸಿಲ ಬೇಗೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಅರಣ್ಯದಲ್ಲಿರುವ ವನ್ಯಮೃಗಗಳಿಗೆ ಕುಡಿ ಯುವ ನೀರಿನ ಅಭಾವವಾಗದಂತೆ ಸೂಕ್ತ ಮುನ್ನೆ ಚ್ಚರಿಕೆ ಕ್ರಮಗಳನ್ನು ಇಲಾಖೆಯವತಿಯಿಂದ ಕೈಗೊಳ್ಳಲಾಗಿದೆ. ನೀರಿನ ಅಭಾವವಾಗದಂತೆ ಎಚ್ಚರ
ಜಿಲ್ಲೆಯ ಅಭಯಾರಣ್ಯ, ಕಿರು ಅರಣ್ಯಗಳ ಸುತ್ತಮುತ್ತ ಲಿರುವ ಹಿನ್ನೀರು ಹಾಗೂ ಇತರ ಜಲಮೂಲಗಳಲ್ಲಿ ನೀರಿನ ಸಂಗ್ರಹವಿದೆ. ಹಾಗೆಯೇ ಈ ಹಿಂದೆ ಅರಣ್ಯದಲ್ಲಿ ಬೇಸಿಗೆಯ ವೇಳೆ ವನ್ಯಮೃಗಗಳಿಗೆ ಅನುಕೂಲವಾಗಲಿ ಎಂದು ನಿರ್ಮಾಣ ಮಾಡಿರುವ ನೀರಿನ ತೊಟ್ಟಿಗಳಿಗೆ ಕಾಲಕಾಲಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ.
-ರಘುರಾಂ ದೇವಾಡಿಗ, ಅರಣ್ಯಾಧಿಕಾರಿ