ಇಬ್ಬರು ಯುವಕರು ನೀರುಪಾಲು
Update: 2016-04-23 21:57 IST
ಸಾಗರ, ಎ. 23: ತಾಲೂಕಿನ ಶರಾವತಿ ಹಿನ್ನೀರಿನ ಪ್ರದೇಶ ವಾದ ಅಂಬಾರಗೋಡ್ಲು ದಡದಲ್ಲಿ ಈಜಲು ಇಳಿದ ಇಬ್ಬರು ಯುವಕರು ಕಾಲುಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಮೃತಪಟ್ಟ ಯುವಕರನ್ನು ಬೆಂಗಳೂರಿನ ವಿದ್ಯಾನಗರ ಪ್ರಥಮದರ್ಜೆ ಕಾಲೇಜಿನ ತೃತೀಯ ಬಿ.ಕಾಂ. ವಿದ್ಯಾ ರ್ಥಿಗಳಾದ ರಾಜೇಶ್ (21) ಮತ್ತು ಪ್ರತಾಪ್ (21) ಎಂದು ಗುರುತಿಸಲಾಗಿದೆ. ಬೆಂಗಳೂರಿನ ವಿದ್ಯಾನಗರ ಪ್ರಥಮ ದರ್ಜೆ ಕಾಲೇಜಿನ ಐವರು ವಿದ್ಯಾರ್ಥಿನಿಯರು ಸೇರಿ 11 ವಿದ್ಯಾರ್ಥಿಗಳು ಶನಿವಾರ ಸಿಗಂದೂರು ಕ್ಷೇತ್ರಕ್ಕೆ ಪ್ರವಾಸ ಬಂದಿದ್ದರು. ದೇವಸ್ಥಾನಕ್ಕೆ ಹೋಗುವ ಮೊದಲು ನೀರಿಗೆ ಇಳಿದು ಸ್ನಾನ ಮಾಡುತ್ತಿದ್ದಾಗ ರಾಜೇಶ್ ಮತ್ತು ಪ್ರತಾಪ್ ಕಾಲುಜಾರಿ ನೀರಿಗೆ ಬಿದ್ದಿದ್ದಾರೆ. ತಕ್ಷಣ ಮೀನುಗಾರರು ನೀರಿಗೆ ಇಳಿದು ಶವವನ್ನು ಮೇಲಕ್ಕೆ ತಂದಿದ್ದಾರೆ. ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.