×
Ad

ಮೈಸೂರು: ವೃದ್ಧೆ ಕಾಣೆ

Update: 2016-04-23 23:57 IST

ಮೈಸೂರು, ಎ.23: ವಾಯು ವಿಹಾರಕ್ಕೆಂದು ತೆರಳಿದ ವೃದ್ಧೆ ಕಾಣೆಯಾಗಿದ್ದಾರೆ.

ಮೈಸೂರಿನ ಹೆಬ್ಬಾಳ 1ನೆ ಹಂತದ ನಿವಾಸಿ ಕುಲಕರ್ಣಿ ಎಂಬವರ ತಾಯಿ ವೆಂಕಟಲಕ್ಷ್ಮಮ್ಮ (74) ಕಳೆದ ಶುಕ್ರವಾರ ಸಂಜೆ 6ರ ಸುಮಾರಿಗೆ ವಾಯು ವಿಹಾರಕ್ಕೆ ತೆರಳಿದವರು ಮನೆಗೆ ಹಿಂದಿರುಗಿಲ್ಲ.ಸುಮಾರು 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕ್ರೀಂ ಬಣ್ಣದ ಸೀರೆ ಧರಿಸಿದ್ದ ವೆಂಕಟಲಕ್ಷ್ಮಮ್ಮ ಕನ್ನಡ ಮಾತನಾಡುತ್ತಾರೆ. ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇವರ ಬಗ್ಗೆ ಮಾಹಿತಿ ಇರುವವರು ಹತ್ತಿರದ ಪೊಲೀಸ್ ಠಾಣೆ , ಪೊಲೀಸ್ ಕಂಟ್ರೋಲ್ ರೂಮ್ ಅಥವಾ ದೂರವಾಣಿ ಸಂಖ್ಯೆ 9964292088 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News