×
Ad

ಬಯಲು ಮುಕ್ತ ಶೌಚಾಲಯ ಸರಕಾರದ ಗುರಿ: ಸಚಿವ ಡಾ.ಶಾಮನೂರು ಶಿವಶಂಕರಪ್ಪ

Update: 2016-04-24 21:34 IST

ದಾವಣಗೆರೆ, ಎ. 24: ಮುಂಬರುವ 2018ರೊಳಗೆ ಬಯಲು ಮುಕ್ತ ಶೌಚ ರೂಪಿಸುವುದು ನಮ್ಮ ಸರಕಾರದ ಗುರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

   ತಾಲೂಕಿನ ಕೈದಾಳೆ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ತಾಪಂ ಮತ್ತು ಗ್ರಾಪಂ ಆಶ್ರಯದಲ್ಲಿ ಏರ್ಪಡಿಸಿದ್ದ ಪಂಚಾಯತ್ ರಾಜ್ ದಿವಸ್ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ದೇಶದಲ್ಲಿಯೇ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತ್‌ಗಳಿಗೆ ಹೆಚ್ಚಿನ ಅಧಿಕಾರ ನೀಡಿದ ಕೀರ್ತಿ ನಮ್ಮ ಸರಕಾರಕ್ಕೆ ಸಲ್ಲುತ್ತದೆ. ನಮ್ಮ ಸರಕಾರ ರಮೇಶ್ ಕುಮಾರ್ ವರದಿಯ ಶಿಫಾರಸಿನಂತೆ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಜಿಪಂ, ತಾಪಂ ಹಾಗೂ ಗ್ರಾಪಂಗಳಿಗೆ ಹೆಚ್ಚಿನ ಅಧಿಕಾರ ನೀಡಿದೆ. ಅಲ್ಲದೆ, 14ನೆ ಹಣಕಾಸಿನ ಅನುದಾನ ನೇರವಾಗಿ ಗ್ರಾಪಂಗಳಿಗೆ ಹರಿದು ಹೋಗುವಂತೆ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಪಂಚಾಯತ್‌ಗಳಿಗೆ ಇಡೀ ದೇಶದಲ್ಲಿಯೇ ಇಂತಹ ಆಡಳಿತ ನೀಡಿದ ಹೆಗ್ಗಳಿಕೆ ನಮ್ಮ ಸರಕಾರದ್ದಾಗಿದೆ ಎಂದು ಹೇಳಿದರು.

 ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಜಿಲ್ಲೆ1ಯಲ್ಲಿ 600 ಶುದ್ಧ ಕುಡಿಯುವ ನೀರು ಘಟಕಗಳ ನಿರ್ಮಿಸಲು ಯೋಜನೆ ರೂಪಸಿಲಾಗಿದೆ. ಆದರೆ, ಅಧಿಕಾರಿಗಳ ವಿಳಂಬ ಧೋರಣೆಯಿಂದ ಈವರೆಗೂ ಕೇವಲ 120 ಘಟಕಗಳು ಮಾತ್ರ ಕಾರ್ಯಾರಂಭ ಮಾಡಿವೆ. ಅಧಿಕಾರಿಗಳ ಈ ಧೋರಣೆಯಿಂದಲೇ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಆದ್ದರಿಂದ ಇನ್ನುಳಿದ ಎಲ್ಲಾ ಘಟಕಗಳನ್ನು ಒಂದು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಿ ಜನರಿಗೆ ನೀರು ಪೂರೈಸಲು ಅಧಿಕಾರಿಗಳು ಮುಂದಾಗಬೇಕೆಂದು ಸೂಚಿಸಿದರು. ಇನ್ನೂ 15 ದಿನಗಳಲ್ಲಿ ವರುಣ ಕೃಪೆ ತೋರದಿದ್ದರೆ, ಮತ್ತಷ್ಟು ತೊಂದರೆ ತಲೆದೂರಲಿದೆ. ಆದ್ದರಿಂದ ಅಧಿಕಾರಿಗಳು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕ್ರಿಯಾಯೋಜನೆ ರೂಪಿಸಿ ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಮುಂದಾಗಬೇಕು ಎಂದು ಸೂಚಿಸಿದ ಶಾಮನ ೂರು, ತಜ್ಞರು ಅಂದಾಜು ಮಾಡಿರುವಂತೆ ಉತ್ತಮ ಮಳೆ, ಬೆಳೆಯಾಗಿ ರೈತರ ಮುಖ ಹಸನ್ಮುಖವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

 ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಅಂಬೇಡ್ಕರ್ ದಲಿತ ಏಳಿಗೆಗಾಗಿ ಶ್ರಮಿಸಿದ ಮಹಾನ್ ನಾಯಕರಾಗಿದ್ದಾರೆ. ಬಡತನದಲ್ಲಿ ಜನಸಿ, ಹಲವು ಕಷ್ಟ ಕಾರ್ಪಣ್ಯದ ಮಧ್ಯೆಯೇ ಓದಿದ ಅಂಬೇಡ್ಕರ್ ಕೊಲಂಬಿಯಾ ವಿವಿಯಲ್ಲಿ ುೀ ಅತೀ ಹೆಚ್ಚು ಅಂಕ ಪಡೆದು, ಭಾರತಕ್ಕೆ ಸಂವಿಧಾನ ಬರೆದುಕೊಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದು ಅವರ ಚಿಂತನೆಯ ಆಧಾರದ ಮೇಲೆಯೇ ಪ್ರಧಾನಿ ಮೋದಿ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದರು.

ಕೇಂದ್ರ ಸರಕಾರ ಜನಧನ್, ಸುರಕ್ಷಾ ಬಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ಯೋಜನೆ, ಅಟಲ್ ಪೆನ್ಷನ್ ಯೋಜನೆ, ಮುದ್ರಾ ಬ್ಯಾಂಕ್ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದು ನರೇಂದ್ರ ಮೋದಿ ಜನಪರ ಆಡಳಿತ ನೀಡುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಜಿಪಂ ಸದಸ್ಯ ಜಿ.ಸಿ.ನಿಂಗಪ್ಪ, ಜಿಪಂ ಸಿಇಒ ಆರ್.ಗಿರೀಶ್, ತಾಪಂ ಇಒ ಪ್ರಭುದೇವ್, ಕೈದಾಳೆ ಗ್ರಾಪಂ ಅಧ್ಯಕ್ಷ ಭೀಮಪ್ಪ, ಸದಸ್ಯ ಗುರುಬಸಪ್ಪ, ಪಿಡಿಒ ವಿದ್ಯಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News