×
Ad

ಶಾಂತೆಯಂಡ ಕಪ್ ಹಾಕಿ: ತೀವ್ರ ಪೈಪೋಟಿ

Update: 2016-04-24 22:00 IST

ಮಡಿಕೇರಿ, ಎ.24: ಕೊಡವ ಕುಟುಂಬಗಳ ನಡುವೆ ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಶಾಂತೆಯಂಡ ಕಪ್ ಹಾಕಿ ಪಂದ್ಯಾವಳಿಯ ರವಿವಾರದ ಪಂದ್ಯಗಳಲ್ಲಿ ಕಲಿಯಂಡ, ಮುರುವಂಡ, ಅಪ್ಪನೆರವಂಡ, ಮಣವಟ್ಟಿರ ಸೇರಿದಂತೆ 11 ತಂಡಗಳು ಮುನ್ನಡೆ ಸಾಧಿಸಿವೆ.ಕಲಿಯಂಡ ತಂಡ ಮುಳ್ಳಂಡ ತಂಡವನ್ನು 3-1 ಗೋಲುಗಳಿಂದ ಮಣಿಸಿದೆ. ಮುರುವಂಡ ತಂಡ ಮೂಕೊಂಡ ತಂಡವನ್ನು 3-1 ಗೋಲುಗಳಿಂದ ಸೋಲಿಸಿದೆ. ಅಪ್ಪನೆರವಂಡ ತಂಡ ಬಡ್ಡೀರ ತಂಡವನ್ನು 1-0 ಗೋಲಿನಿಂದ ಪರಾಭವಗೊಳಿಸಿದೆ. ಮಣವಟ್ಟಿರ ತಂಡ ನಾಯಕಂಡ ತಂಡವನ್ನು 3-2 ಗೋಲುಗಳಿಂದ ಮಣಿಸಿತು.

ಪಡೆಯಂಡ ತಂಡ ಮೊಣ್ಣಂಡ ತಂಡವನ್ನು 5-0 ಗೋಲುಗಳಿಂದ ಸೋಲಿಸಿದೆ. ಚೆಪ್ಪುಡಿರ ತಂಡ ಮಂಡೇಡ ತಂಡವನ್ನು 4-0 ಗೋಲುಗಳಿಂದ ಪರಾಭವಗೊಳಿಸಿದೆ.

ನೆಲ್ಲಮಕ್ಕಡ ತಂಡ ಚೊಟ್ಟೆಯಂಡಮಾಡ ತಂಡವನ್ನು 5-0 ಗೋಲುಗಳಿಂದ ಮಣಿಸಿದೆ. ಕೋಡಿಮಣಿಯಂಡ ತಂಡ ಕುಟ್ಟಿಚಂಡವನ್ನು ಟ್ರೈಬ್ರೇಕರ್‌ನಲ್ಲಿ 4-2 ಗೋಲುಗಳಿಂದ ಮಣಿಸಿತು. ಪಾಲಂದಿರ ತಂಡ ಬಿದ್ದಾಟಂಡ ತಂಡವನ್ನು 1-0 ಗೋಲುಗಳಿಂದ ಸೋಲಿಸಿತು.

ಮೂಡೆರ ತಂಡ ಪುದಿಯೊಕ್ಕಡ ತಂಡವನ್ನು 1-0 ಗೋಲುಗಳಿಂದ ಮಣಿಸಿತು. ಕಾಂಡಂಡ ತಂಡ ಪಟ್ಟಡ ತಂಡವನ್ನು ಟ್ರೈಬ್ರೇಕರ್‌ನಲ್ಲಿ 5-4 ಗೋಲುಗಳಿಂದ ಸೋಲಿಸಿತು. ಕುಪ್ಪಂಡ (ಕೈಕೇರಿ) ತಂಡ ಕುಚ್ಚಿಮಂಡ ತಂಡವನ್ನು 5-0 ಗೋಲುಗಳಿಂದ ಸೋಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News