×
Ad

ಆ್ಯಂಬುಲೆನ್ಸ್- ಟಾಟಾ ಏಸ್ ಢಿಕ್ಕಿ: ನಾಲ್ವರು ಸಾವು

Update: 2016-04-24 23:25 IST

ಬೆಳಗಾವಿ, ಎ. 24: ಆ್ಯಂಬುಲೆನ್ಸ್ ಮತ್ತು ಟಾಟಾ ಏಸ್ ನಡುವೆ ಮುಖಾಮುಖಿ ಢಿಕ್ಕಿಯಾಗಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿ, ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಬೈಲಹೊಂಗಲ ತಾಲೂಕಿನ ಮೇಕಲಮರಡಿ ಕ್ರಾಸ್ ಬಳಿ ಸಂಭವಿಸಿದೆ.
 ಮೃತರನ್ನು ಜಮಖಂಡಿ ಮೂಲದ ಅಬಾಲಿ ಗ್ರಾಮದ ಮಹದೇವ ಭೀಮಾ (35), ನಾಗೇಶ್ (32), ಬಸವ್ವ ಮತ್ತು ಕಮಲವ್ವ ಎಂದು ಗುರುತಿಸಲಾಗಿದೆ.
ಇವರೆಲ್ಲ ರೋಗಿಯೋರ್ವನನ್ನು ಜಮಖಂಡಿಯಿಂದ ಬೆಳಗಾವಿಗೆ ಕರೆ ದೊಯ್ಯುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದೇ ಸ್ಥಳದ ಬಳಿ ಇದಕ್ಕೂ ಮೊದಲು ಒಂದು ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿತ್ತು. ತದನಂತರ ಬಂದ ಆ್ಯಂಬುಲೆನ್ಸ್ ಹಾಗೂ ಟಾಟಾ ಏಸ್ ಮುಖಾಮುಖಿ ಢಿಕ್ಕಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News