ಅಂಬೇಡ್ಕರ್ ಜಗತಿ್ತಗೆ ಜನನಾಯಕರು: ರಂಜಾನ್ ದರ್ಗಾ

Update: 2016-04-25 16:48 GMT

 ಕಾರವಾರ,ಎ.25: ಮಾನವಿಯ ಮೌಲ್ಯಗಳ ಬಗ್ಗೆ ಬೆಳಕು ಚೆಲ್ಲಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗದೆ ಈಡಿ ಜಗತ್ತಿಗೆ ಬೇಕಾದ ಜನನಾಯಕರಾಗಿದ್ದಾರೆ ಎಂದು ಸಾಹಿತಿ ರಂಜಾನ್ ದರ್ಗಾ ಅವರು ಹೇಳಿದ್ದಾರೆ.

 ನಗರದ ಜಿಲ್ಲಾ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್, ಮಹತ್ಮಾ ಜ್ಯೋತಿಬಾ ಫುಲೆ ಹಾಗೂ ಡಾ. ಬಾಬು ಜಗಜೀವನರಾಂ ಅವರ ಜಯಂತಿ ಹಾಗೂ ನೆವೆಲ್ ಬೆಸ್ ಎಸ್ಸಿ, ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಂಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಅವರು ಮಾತನಾಡಿದರು.

ಉತ್ತಮ ಶಿಕ್ಷಣ ಪಡೆದ ಅಂಬೇಡ್ಕರ್ ಸಮಾನತೆಗಾಗಿ ಹಲವು ಹೋರಾಟ ನಡೆಸಿದ್ದಾರೆ. ಆದರೆ ಅಂಬೇಡ್ಕರ್ ಅವರ 125ನೆ ವರ್ಷಾಚರಣೆ ಆಚರಿಸುತ್ತಿರುವ ಈ ಸಂದರ್ಭದಲ್ಲೂ ಕೂಡ ದಲಿತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ಅನ್ಯಾಯಗಳು ಕಡಿಮೆಯಾಗದಿರುವುದು ಅತ್ಯಂತ ಬೇಸರದ ಸಂಗತಿ. ಈ ಎಲ್ಲ ಘಟನೆಗಳನ್ನು ಅವಲೋಕಿಸಿದರೆ ದಲಿತರಿಗೆ ಪ್ರಜಾಪ್ರಭುತ್ವ ಎನ್ನುವುದು ಬಹುದೂರದ ಕನಸಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಂಬೇಡ್ಕರ್ ಅವರು 16 ಅಥವಾ 17ನೆ ಶತಮಾನದಲ್ಲಿ ಜನಿಸಿದ್ದರೆ ನಮಗೆ ಅವರ ತತ್ವಾದರ್ಶಗಳು ಸಿಗುತ್ತಿರಲಿಲ್ಲ. ಆದರೆ ಇಂದು ಅವರ ವಿಚಾರಧಾರೆಗಳು ದಲಿತರಿಗೆ ಬೆಳಕಾಗಿವೆ. ತುಳಿತಕ್ಕೊಳಗಾದವರಿಗೆ ಉತ್ತಮ ಶಿಕ್ಷಣ, ಸಂಘಟನೆಗಳ ಮೂಲಕ ತಮ್ಮ ಹಕ್ಕುಗಳಿಗೆ ಹೋರಾಟ ಹಾಗೂ ಒಗ್ಗಟ್ಟಿಲ್ಲದೆ ನಮ್ಮ ಹೋರಾಟ ವ್ಯರ್ಥ ಎಂಬುದು ಎಲ್ಲರೂ ಅರಿತುಕೊಂಡಿದ್ದಾರೆ ಎಂದರು. ಎನ್‌ಎಸ್‌ಆರ್‌ವೈ ನೆವೆಲ್ ಬೆಸ್ ಕಮ್ಮೊಡೊರ್ ಯಾರ್ಡ್ ಅಧೀಕ್ಷಕ ಸಿ.ಎಸ್. ಬಾಬುರಾಜ್ ಮಾತನಾಡಿದರು.

ಮೆರವಣಿಗೆ:

ಕಾರ್ಯಕ್ರಮದ ಪೂರ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮಾ ಜ್ಯೋತಿಬಾ ಫುಲೆ ಹಾಗೂ ಡಾ. ಬಾಬು ಜಗಜೀವನರಾಂ ಅವರ ಭಾವಚಿತ್ರವನ್ನು ಇಟ್ಟುಕೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿದರು. ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ: ಹಸಿರನ್ನೆ ಉಸಿರಾಗಿಸಿಕೊಂಡು ಗಿಡ ಮರಗಳನ್ನು ಬೆಳೆಸುತ್ತಿರುವ ಅಂಕೋಲಾದ ತುಳುಸಿ ಗೌಡ ಅವರಿಗೆ ರಮಾಭಾಯಿ ಜೀವಮಾನ ಸಾಧಕ ಪ್ರಶಸ್ತಿ ಹಾಗೂ ಸಮಾಜ ಸೇವೆ ಮೂಲಕ ಗುರುತಿಸಿಕೊಂಡಿರುವ ಶಿರಸಿಯ ಚಂದ್ರಪ್ಪ ಚನ್ನಯ್ಯ ಅವರಿಗೆ ಡಾ. ಅಂಬೇಡ್ಕರ್ ಜೀವಮಾನ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂದರ್ಭದಲ್ಲಿ ವಕೀಲ ನಾಗರಾಜ ನಾಯಕ, ನಗರಸಭೆ ಎಇಇ ಮೋಹನ್‌ರಾಜ್ ಕೆ.ಎಂ, ಜಿಡಿ ಮನೋಜ್, ಪರಶುರಾಮ್ ನಾಯಕ, ಮಂಜುನಾಥ ನಾವಿ ಸೇರಿದಂತೆ ಹಲವು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News