×
Ad

ಚಿಕ್ಕಮಗಳೂರು: ಬರಪರಿಹಾರ ನಿಧಿಯಿಂದ 18 ಬೋರ್‌ವೆಲ್:ಎಂ.ಆರ್.ದೇವರಾಜಶೆಟ್ಟಿ

Update: 2016-04-26 22:17 IST

 ಚಿಕ್ಕಮಗಳೂರು, ಎ.26: ನಗರದಲ್ಲಿ ಬರಪರಿಹಾರ ನಿಧಿಯಿಂದ ತುರ್ತು ನೀರಿನ ಅಗತ್ಯವಿರುವ ಕಡೆ 18 ಬೋರ್‌ವೆಲ್‌ಗಳನ್ನು ಕೊರೆಸಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ ತಿಳಿಸಿದ್ದಾರೆ.

ಅವರು ಮಂಗಳವಾರ ನಗರ ಹೊರ ವಲಯದ ಗವನಹಳ್ಳಿಯಲ್ಲಿ 5 ಲಕ್ಷ ರೂ. ಎಸ್‌ಎಫ್‌ಸಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ರಸ್ತೆ ಕಾಂಕ್ರಿಟೀಕರಣಕ್ಕೆ ಚಾಲನೆ ನೀಡಿ ಮಾತನಾಡಿದರು. ನಗರದಲ್ಲಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಉಪ್ಪಳ್ಳಿ, ಆದರ್ಶನಗರ, ಉಂಡೇದಾಸರಹಳ್ಳಿ, ಗವನಹಳ್ಳಿಗಳಲ್ಲಿ ಬರಪರಿಹಾರ ನಿಧಿಯಿಂದ 18 ಬೋರ್‌ವೆಲ್ ತೆಗೆಯಲು ಮುಂದಾಗಿದ್ದೇವೆ. ಈಗಾಗಲೇ ತಜ್ಞರಿಂದ ನೀರಿನ ಮೂಲಕ ಗುರುತು ಪತ್ತೆಕಾರ್ಯ ಮಾಡಲಾಗಿದ್ದು, ಬೋರ್‌ವೆಲ್‌ಕೊರೆದ ನಂತರ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಕನೆಕ್ಷನ್ ನೀಡಿ ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರು ಪೂರೈಸಲಾಗುತ್ತದೆ ಎಂದರು.

ಹಲವು ದಶಕಗಳ ಬೇಡಿಕೆಯಾದ ಪಾಯಸ್ ಕಾಂಪೌಂಡ್ ರಸ್ತೆ ಅಗಲೀಕರಣ ಕಾರ್ಯ ಆರಂಭವಾಗಿದ್ದು, 22 ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕರಿಗೆ ಅನೂಕೂಲವಾಗುವ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದರು.

ಗವನಹಳ್ಳಿ ಶ್ರೀನಿವಾಸ್ ಮಾತನಾಡಿ, ಗವನಹಳ್ಳಿಯಲ್ಲಿ ನಗರಸಭೆಯಿಂದ ಹಲವು ರಸ್ತೆ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ಶಾಸಕರ ನಿಧಿಯಿಂದ 10 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾರ್ಯವಾಗುತ್ತಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಂಡು ಸಾರ್ವಜನಿಕರಿಗೆ ಸಮರ್ಪಣೆಯಾಗಲಿದೆ ಎಂದರು.

ಇಲ್ಲಿನ ಕೊಪ್ಪಲಾಳ ಬಡಾವಣೆಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಸಹಕರಿಸುವಂತೆ ಅಧ್ಯಕ್ಷರಿಗೆ ಮನವಿ ಮಾಡಲಾಗಿತ್ತು. ಈ ಸಂಬಂಧ ಅನುದಾನ ನೀಡುವುದಾಗಿ ಹೇಳಿದ್ದಾರೆ. ಅಂದಾಜು 4 ಲಕ್ಷ ರೂ. ವೆಚ್ಚದಲ್ಲಿ ಜನತಾ ಮನೆಯಿಂದ ಕೊಪ್ಪಲಾಳಕ್ಕೆ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸುವ ಕಾರ್ಯ 2 ದಿನಗಳಲ್ಲಿ ಆರಂಭವಾಗಲಿದೆ. ಇದರಿಂದ 150 ಮನೆಗಳಿಗೆ ಅನುಕೂಲವಾಗುತ್ತದೆ ಎಂದರು.

ಮುಖಂಡರಾದ ಪರಮೇಶ್, ವೇಣು, ಪ್ರೇಮ್‌ಕುಮಾರ್, ಬಾಬಣ್ಣ, ದಶರಥ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News