ಮುಂಗಡ ಹಣ ಪಾವತಿಗೆ ಅವಧಿ ವಿಸ್ತರಣೆ
ಬೆಂಗಳೂರು, ಎ.26: ಪ್ರಸಕ್ತ ಸಾಲಿನ ಪವಿತ್ರ ಹಜ್‌ಯಾತ್ರೆಗೆ ಆಯ್ಕೆಯಾಗಿರುವ ಯಾತ್ರಿಗಳು ತಲಾ 81 ಸಾವಿರ ರೂ.ಮುಂಗಡ ಹಣವನ್ನು ತಮ್ಮ ಮೂಲ ಪಾಸ್‌ಪೋರ್ಟ್(ಎರಡು ಝೆರಾಕ್ಸ್ ಪ್ರತಿಗಳೊಂದಿಗೆ) ಹಾಗೂ ಒಂದು ಬಣ್ಣದ ಭಾವಚಿತ್ರ(ಬಿಳಿ ಬಣ್ಣ ಹಿಂಬದಿ ಇರುವಂತಹ) ಮತ್ತು ಪೇಯ್ ಇನ್ ಸ್ಲಿಪ್ ಪ್ರತಿಯನ್ನು ಸಲ್ಲಿಸಲು ಅವಧಿಯನ್ನು ಎ.30ರವರೆಗೆ ವಿಸ್ತರಿಸಲಾಗಿದೆ.
ಇವೆಲ್ಲಾ ದಾಖಲಾತಿಗಳೊಂದಿಗೆ ಆರೋಗ್ಯ ಪ್ರಮಾಣ ಪತ್ರವನ್ನು ನಗರದ ರಿಚ್ಮಂಡ್ ರಸ್ತೆಯಲ್ಲಿರುವ ರಾಜ್ಯ ಹಜ್ ಸಮಿತಿಯ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗೆ ಎ.30ರೊಳಗೆ(ಕಚೇರಿಯ ಕೆಲಸದ ಅವಧಿ ಬೆಳಗ್ಗೆ 10:30ರಿಂದ ಸಂಜೆ 5 ಗಂಟೆಯವರೆಗೆ) ಸಲ್ಲಿಸುವಂತೆ ಪ್ರಕಟಣೆಯಲ್ಲಿ ಸೂಚನೆ ನೀಡಲಾಗಿದೆ.
ನಿಗದಿತ ಅವಧಿಯೊಳಗೆ ಮುಂಗಡ ಹಣ, ಪಾಸ್‌ಪೋರ್ಟ್ ಸೇರಿದಂತೆ ಇನ್ನಿತರ ದಾಖಲಾತಿಗಳನ್ನು ಸಲ್ಲಿಸದಿದ್ದರೆ, ಅಂತಹವರ ಆಯ್ಕೆಯನ್ನು ರದ್ದುಗೊಳಿಸಿ ನಿರೀಕ್ಷಣಾ ಪಟ್ಟಿ(ವೇಟಿಂಗ್‌ಲೀಸ್ಟ್)ಯಲ್ಲಿರುವವರಿಗೆ ಆದ್ಯತೆ ನೀಡಲಾಗುವುದು ಎಂದು ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್‌ಖಾನ್ ತಿಳಿಸಿದ್ದಾರೆ.