×
Ad

ನನ್ನ ಕಚೇರಿಯಿಂದ ಕರೆ ಹೋಗಿಲ್ಲ: ರಾಮಲಿಂಗಾರೆಡ್ಡಿ

Update: 2016-04-26 23:37 IST

ಬೆಂಗಳೂರು, ಎ.26: ಪ್ರಸಕ್ತ ಸಾಲಿನ ದ್ವಿತೀಯ ಪಿಯು ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ತನ್ನ ಗೃಹ ಕಚೇರಿಯಿಂದ ಈ ಪ್ರಕರಣದ ಪ್ರಮುಖ ಆರೋಪಿ ವೈದ್ಯಕೀಯ ಶಿಕ್ಷಣ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಓಬಳರಾಜು ಮೊಬೈಲ್‌ಗೆ ಕರೆ ಹೋಗಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಸಿಐಡಿ ವಿಭಾ ಗದ ಆರಕ್ಷಕ ಮಹಾನಿರ್ದೇಶಕ ಕಿಶೋರ್‌ಚಂದ್ರ ಅವರಿಗೆ ಪತ್ರ ಬರೆದಿರುವ ಅವರು, ಓಬಳರಾಜು ಮೊಬೈಲ್‌ಗೆ ಸಾರಿಗೆ ಸಚಿವರ ಗೃಹ ಕಚೇರಿಯ ಸ್ಥಿರ ದೂರವಾಣಿ ಸಂಖ್ಯೆ: 080-2225---7 ಎಂಬ ಸಂಖ್ಯೆ ಯಿಂದ ಕರೆ ಹೋಗಿರು ವುದಾಗಿ ಆಂಗ್ಲ ದಿನಪತ್ರಿಕೆಯೊಂದು ಹಾಗೂ ಕೆಲವು ಸುದ್ದಿ ವಾಹಿನಿಗಳು ಸುದ್ದಿ ಬಿತ್ತರಿಸಿವೆ.
ಆದರೆ, ನನ್ನ ಕಚೇರಿ ದೂರವಾಣಿ ಸಂಖ್ಯೆ: 080-22371240, 22034010 ಆಗಿದ್ದು, ಗೃಹ ಕಚೇರಿಯ ದೂರವಾಣಿ ಸಂಖ್ಯೆ:080-22237240 ಆಗಿದೆ. ಸಾರ್ವಜನಿಕವಾಗಿ ತಪ್ಪು ಗ್ರಹಿಕೆಯಾಗಬಾರದು ಎಂಬ ಉದ್ದೇಶದಿಂದ ಈ ಸ್ಪಷ್ಟೀಕರಣ ನೀಡುತ್ತಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News