ಗಮನ ಸೆಳೆದ ‘ಆಟೊಕಾ್ರಸ್’ ಸಾಹಸ ಸ್ಪ ರ್ಧೆ
ಮಡಿಕೇರಿ, ಎ.28 : ಬೇಗೂರು ಕೊಲ್ಲಿಯಲ್ಲಿ ಜೇಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ನಡೆದ ಆಟೊ ಕ್ರಾಸ್ ಸ್ಪರ್ಧೆಗಳು ಸಾಹಸ ಕ್ರೀಡಾಭಿ ಮಾನಿ ಗಳನ್ನು ಆಕರ್ಷಿಸಿತು. ದಿ್ವಚಕ್ರ ಹಾಗೂ ನಾಲ್ಕು ಚಕ್ರ ವಿಭಾಗಗಳಿಗೆ ಪ್ರತ್ಯೇಕ ವಾಗಿ ಸ್ಪರ್ಧೆಗಳು ನಡೆದವು. ಬಿಸಿಲಿನ ತಾಪದ ಪರಿಣಾ ಮವಾಗಿ ಸ್ಪರ್ಧಿಗಳು ಹಾಗೂ ಪ್ರೇಕ್ಷಕರ ಸಂಖ್ಯೆ ಕೂಡ ಇಳಿ ಮುಖವಾಗಿತ್ತು. ದ್ವಿಚಕ್ರ ವಿಭಾಗದಲ್ಲಿ 39 ಮಂದಿ ಪಾಲ್ಗೊಂಡರು.
<
<ದ್ವಿಚಕ್ರ ವಿಜೇತರು: ಕೂರ್ಗ್ ಓಪನ್ - ವೀರಾಜ ಪೇಟೆಯ ಶಾರುಕ್ ಪ್ರಥಮ, ನಿಹಾಲ್ ಖಾನ್ ದ್ವಿತೀಯ, ಸೈಯದ್ ಅರ್ಶದ್ ತೃತೀಯ. ನಾವೀಸ್ ಕ್ಲಾಸ್: ವೀರಾಜಪೇಟೆಯ ನಿಹಾಲ್ ಖಾನ್ (ಪ್ರ), ಮೈಸೂರಿನ ಶರೀಫ್ ಅಹ್ಮದ್ (ದ್ವಿ), ಚಿಕ್ಕಮಗಳೂರಿನ ಸಲ್ಮಾನ್ ಖಾನ್ (ತೃ).
<ಟೂ ಸ್ಟ್ರೋಕ್ ಓಪನ್: ಮೈಸೂರಿನ ಇಮ್ರಾನ್ ಪಾಷಾ (ಪ್ರ), ಬೆಂಗಳೂರಿನ ಸುಹೈಲ್ ಅಹ್ಮದ್ (ದ್ವಿ), ಬೆಂಗಳೂರುವಿನ ಶರೀಫ್ ಅಹ್ಮದ್ (ತೃ).
ನಾಲ್ಕು ಚಕ್ರ ವಿಜೇತರು
<ಫೋರ್ ಸ್ಟ್ರೋಕ್ ಓಪನ್: ಮೈಸೂರಿನ ಇಮ್ರಾನ್ ಪಾಷಾ (ಪ್ರ), ಬೆಂಗಳೂರಿನ ಸುಹೈಲ್ ಅಹ್ಮದ್ (ದ್ವಿ), ಬೆಂಗಳೂರಿನ ಅಜ್ಮತ್ ಶರೀಫ್ (ತೃ).
<ಎಕ್ಸ್‌ಪರ್ಟ್ ಕ್ಲಾಸ್: ಬೆಂಗಳೂರಿನ ಸುಹೈಲ್ ಅಹ್ಮದ್ (ಪ್ರ), ಬೆಂಗಳೂರಿನ ಅಜ್ಮದ್ ಶರೀಫ್ (ದ್ವಿ), ಮೈಸೂರಿನ ಇಮ್ರಾನ್ ಪಾಷಾ ತೃತೀಯ.
ಆಟೊಕ್ರಾಸ್‌ನ್ನು ಶಾಸಕ ಕೆ ಜಿ ಬೋಪಯ್ಯ ಉದ್ಘಾಟಿಸಿದರು. ಈ ಸಂದರ್ಭ ಗೋಲ್ಡನ್ ಜೇಸಿಐ ಅಧ್ಯಕ್ಷ ಪುಳ್ಳಂಗಡ ನಟೇಶ್ ಅವರ ನೇತೃತ್ವದಲ್ಲಿ ಆಟೊಕ್ರಾಸ್ ನಡೆಯಿತು.