ಮನೆ, ನಿವೇಶನ ದಾಖಲೆ ಆನ್‌ಲೈನ್‌ನಲ್ಲಿ ಪಡೆದುಕೊಳ್ಳಲು ಮನವಿ
ಮಡಿಕೇರಿ, ಎ.29: ವೀರಾಜಪೇಟೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಆಸ್ತಿ ಮಾಲಕರಿಗೆ ಪೌರ ಸುಧಾರಣಾ ಕೋಶದ ವತಿಯಿಂದ ಇ-ಆಸ್ತಿ ತಂತ್ರಾಂಶ ಅಭಿವೃದ್ಧಿಪಡಿಸಿ ಆನ್‌ಲೈನ್‌ಗೊಳಿಸಿದೆ, ಇನ್ನು ಮುಂದೆ ನಮೂನೆ-3ನ್ನು ಪಡೆದುಕೊಳ್ಳಲು ಕಡ್ಡಾಯವಾಗಿ ನಿಗದಿತ ನಮೂನೆಯಲ್ಲಿ ಅರ್ಜಿ, ಮಾಲಕರ ಭಾವಚಿತ್ರ ಹಾಗೂ ದೂರವಾಣಿ ಸಂಖ್ಯೆ, ಸ್ವತ್ತಿನ ಅಂದರೆ ಮನೆ, ವಾಣಿಜ್ಯ ಕಟ್ಟಡದ ಪೋಟೋ(ಖಾಲಿ ನಿವೇಶನವಾಗಿದ್ದಲ್ಲಿ ಮಾಲೀಕರು ಖಾಲಿ ನಿವೇಶನದ ಮುಂದೆ ನಿಂತು ತೆಗೆಸಿದ ಭಾವಚಿತ್ರ), ಅನುಭೋಗದಾರರ ವಿವರ(ಕಟ್ಟಡವನ್ನು ಬಾಡಿಗೆ ಕೊಟ್ಟಿದ್ದಲ್ಲಿ), ಆಸ್ತಿಯ ಕ್ರಯಪತ್ರ/ದಾನಪತ್ರ/ವ್ಯವಸ್ಥಾಪತ್ರ ಪಾಚಪಾಣಿ ಪತ್ರ, ಕರಾರಿನ ರಿಜಿಸ್ಟರ್ ನಕಲು ಪ್ರತಿ, ಇತರೆ ಎಲ್ಲ ಸ್ವತ್ತಿಗೆ ಸಂಬಂಧಿಸಿದ ದಾಖಲೆಗಳು, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಜೆರಾಕ್ಸ್, ಚೆಕ್ಕುಬಂದಿ, ಮೀಟರಿನ ಆರ್.ಆರ್.ನಂಬರ್ ಮತ್ತು ಚಾಲ್ತಿ ಆಸ್ತಿ ತೆರಿಗೆ ಪಾವತಿ ರಶೀದಿ ಈ ದಾಖಲೆಗಳನ್ನು ವೀರಾಜಪೇಟೆ ಪಪಂ ಕಚೇರಿಗೆ ಸಲ್ಲಿಸಿ ತಮ್ಮ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಪಡೆದುಕೊಳ್ಳಬಹುದು ಎಂದು ವೀರಾಜಪೇಟೆ ಪಪಂ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.