×
Ad

ಎನ್ಐಎ ಎಸ್ಪಿಯಾಗಿ ಸೋನಿಯಾ ನಾರಂಗ್ ಸ್ವಯಂ ವರ್ಗಾವಣೆ

Update: 2016-04-30 14:23 IST

ಬೆಂಗಳೂರು, ಎ.30: ಸಿಐಡಿಯ ಡಿಐಜಿಯಾಗಿರುವ  ಸೋನಿಯಾ ನಾರಂಗ್ ಸ್ವಯಂ ಕೋರಿಕೆಯ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಎಸ್ಪಿಯಾಗಿ ನಿಯೋಜನೆಗೊಂಡಿದ್ದಾರೆ.
 ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆ  ನಡೆಸುತ್ತಿರುವ ಐಪಿಎಸ್‌ ಅಧಿಕಾರಿ ಸೋನಿಯಾ ನಾರಂಗ್‌  ಮುಂದೆ ನಾಲ್ಕು ವರ್ಷಗಳ ಕಾಲ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಎಸ್ಪಿಯಾಗಿ ಸೇವೆ ಸಲ್ಲಿಸಲಿದ್ದಾರೆ. 

ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರ ಬಯಲಿಗೆಳೆದಿದ್ದ ಸೋನಿಯಾ ನಾರಂಗ್‌ ಅವರು, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖಾ ನಡೆಸುತ್ತಿದ್ದಾರೆ. 2002ರ ತಂಡದ ಐಪಿಎಸ್ ಅಧಿಕಾರಿ ಸೋನಿಯಾ   ಕಳೆದ ಜನವರಿಯಲ್ಲಿ ಡಿಐಜಿಯಾಗಿ ಭಡ್ತಿ ಪಡೆದು ಸಿಐಡಿಗೆ ವರ್ಗಾವಣೆಗೊಂಡಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News