×
Ad

ಯುವ ಪೀಳಿಗೆಗೆ ಮಾರ್ಗದರ್ಶನ ಅಗತ್ಯ: ಸಚಿವ ಶಾಮನೂರು

Update: 2016-05-02 22:13 IST

ದಾವಣಗೆರೆ, ಮೇ 2: ನಮ್ಮ ದೇಶ ಆರ್ಥಿಕವಾಗಿ ಸದೃಢವಾಗಬೇಕಾದರೆ ಇಂದಿನ ಯುವ ಪೀಳಿಗೆಗೆ ಅಗತ್ಯ ಮಾರ್ಗದರ್ಶನದ ಅವಶ್ಯ ಕತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಸೋಮವಾರ ಬಾಪೂಜಿ ಬಿ ಸ್ಕೂಲ್ಸ್‌ನಲ್ಲಿ ಪ್ರಚಲಿತ ವಾಣಿಜ್ಯ ಕ್ಷೇತ್ರದಲ್ಲಿನ ಬದಲಾವಣೆ ಹಾಗೂ ವ್ಯಾವಹಾರಿಕ ಶಿಕ್ಷಣದ ಮೇಲಿನ ಪರಿಣಾ ಮಗಳು ಕುರಿತು ಏರ್ಪಡಿಸಿದ್ದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಭಾರತ ಬಹಳ ಸಂಪನ್ಮೂಲ ಹೊಂದಿರುವ ದೇಶವಾಗಿದೆ. ಪ್ರಸ್ತುತ ಆನ್‌ಲೈನ್, ಟೆಲಿಕಾಂ ಸೇರಿದಂತೆ ಎಲ್ಲಾ ರೀತಿಯ ವ್ಯವಹಾರ ಸುವ್ಯವಸ್ಥಿತವಾಗಿ ನಡೆಯುತ್ತಿದೆ. ಇದಕ್ಕೆ ತಕ್ಕಂತೆ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಿಕೊಂಡು ಮುನ್ನಡೆಯಬೇಕಿದೆ. ಆದ್ದರಿಂದ ಯುವ ಸಮುದಾಯಕ್ಕೆ ಇದರ ಬಗ್ಗೆ ತಿಳುವಳಿಕೆ ಬೆಳೆಸಬೇಕಿದೆ ಎಂದರು. ವ್ಯವಹಾರ, ವಾಣಿಜ್ಯ ನಿರ್ವಹಣೆಯಲ್ಲಿ ಭಾರತ ದೇಶ ಮಹತ್ತರ ಬೆಳವಣಿಗೆ ಸಾಧಿಸಿರುವುದು ಶ್ಲಾಘನೀಯ. ಈ ಮೊದಲೆಲ್ಲಾ ಬ್ಯಾಂಕ್ ವ್ಯವಹಾರ ಅತ್ಯಂತ ಕಷ್ಟಕರವಾಗಿತ್ತು. ಆದರೆ ಇದೀಗ ಕೆಲವೇ ನಿಮಿಷಗಳಲ್ಲಿ ವ್ಯವಹಾರವನ್ನು ಸುಲಭ ವಾಗಿ ನಿಭಾಯಿಸುವಂತಹ ವ್ಯವಸ್ಥೆ ಜಾರಿ ಯಲಿ ್ಲದೆ. ತಂತ್ರಜ್ಞಾನ ಇಂದು ಸಾಕಷ್ಟು ಮುಂದುವರಿದಿದೆ. ಯುವ ಜನರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಪರಿವರ್ತಿಸುವ ಕೆಲಸವಾಗಬೇಕಾಗಿದೆ. ಆ ನಿಟ್ಟಿನಲ್ಲಿ ಆರ್ಥಿಕ ತಜ್ಞರ ಪಾತ್ರ ಮುಖ್ಯವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ.ಬಿ.ಬಕ್ಕಪ್ಪ, ಸುರೇಶ್ ರಾಘವೇಂದ್ರ, ಡಾ.ರಾಮ ಚಂದ್ರೇಗೌಡ, ವೆಂಕಟೇಶ್ ಬಾಬು, ಕೆ.ಟಿ.ಗೋವಿ

ಂದಪ್ಪ, ಶಿವಪ್ರಕಾಶ್, ಮಲ್ಲೇಶಪ್ಪ, ಜಯರಾಜು, ಜಯಪ್ಪ, ಅರುಣ ಕುಮಾರ್ ಗರಗ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News