ಮಹಿಳೆಯರಿಗೆ ಅಧಿಕಾರ ಕೊಟ್ಟಾಗ ಸಹಕಾರ ಕ್ಷೇತ್ರ ಉನ್ನತ ದರ್ಜೆಗೆ : ಸಚಿವ ಮಹದೇವ್ ಪ್ರಸಾದ್
ಮೂಡಿಗೆರೆ, ಮೇ 2: ಮಹಿಳೆಯರ ಕೈಗೆ ಸಹಕಾರ ಸಂಸ್ಥೆಯ ಜವಾಬ್ದಾರಿ ನೀಡುವುದರಿಂದ ಸಹಕಾರ ಕ್ಷೇತ್ರದ ಘನತೆ ಮತ್ತಷ್ಟು ಹೆಚ್ಚಲಿದೆ ಎಂದು ಸಹಕಾರ ಹಾಗೂ ಸಕ್ಕರೆ ಸಚಿವ ಮಹದೇವ್ ಪ್ರಸಾದ್ ಹೇಳಿದ್ದಾರೆ.
ಅವರು ಸೋಮವಾರ ಅಡ್ಯಂತಾಯ ರಂಗಮಂದಿರದಲ್ಲಿ ಚೈತನ್ಯ ಪರಿಶಿಷ್ಟ ಜಾತಿ ಮಹಿಳಾ ಪತ್ತಿನ ಸಹಕಾರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಹಕಾರಿ ಕ್ಷೇತ್ರವನ್ನು ಉನ್ನತ ದರ್ಜೆಗೆ ಕೊಂಡೊಯ್ಯಲು ಸರಕಾರ ಉದ್ದೇಶಿಸಿದ್ದು, ಮಹಿಳೆಯರ ಕೈಗೆ ಅಧಿಕಾರ ಕೊಟ್ಟಾಗ ಸಹಕಾರ ಕ್ಷೇತ್ರ ಉನ್ನತ ದರ್ಜೆಗೆ ದಾಪುಗಾಲಿಡಲಿದೆ ಎಂಬ ಮುಂದಾಲೋಚನೆಯೊಂದಿಗೆ ಸರಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿಸಿದರು. 1905ರಲ್ಲಿ ಪ್ರಾರಂಭವಾದ ಸಹಕಾರ ಸಂಘ 2016ರ ವೇಳೆಗೆ 111 ವರ್ಷಗಳಲ್ಲಿ ಸಹಕಾರ ಕ್ಷೇತ್ರದ ಬ್ಯಾಂಕುಗಳು, ಸಹಕಾರ ಸಂಘಗಳು, ಮಹಿಳಾ ಬ್ಯಾಂಕ್‌ಗಳು, ಪತ್ತಿನ ಸಂಘಗಳು ಸೇರಿ 5,490 ರಚನೆಗೊಂಡಿವೆ 2,23,99 ಕೋಟಿ ಜನ ಸಹಕಾರಿ ಸದಸ್ಯರನ್ನು ಹೊಂದಿದೆ. ಸಹಕಾರಿ ಕ್ಷೇತ್ರದಲ್ಲಿ ಬಡವರ್ಗ ದವರನ್ನು ಗುರುತಿಸಿಕೊಳ್ಳಲು ಸರಕಾರ ಉದ್ದೇಶಿಸಿದ್ದು, ಅಂತಹವರ ಷೇರು ಹಣವನ್ನು ಸರಕಾರವೇ ಭರಿಸಿಕೊಂಡು ಸಹಕಾರಿ ಸಂಘಗಳ ಸದಸ್ಯರನ್ನಾಗಿ ಬಡವರ್ಗವನ್ನು ಸರಕಾರ ನಿಯೋಜಿಸುತ್ತದೆ ಎಂದು ತಿಳಿಸಿದರು. ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರರು ಕಾನೂನು ಸಚಿವರಾಗಿದ್ದಾಗ ಮಹಿಳೆಯರ ಸ್ವಾವಲಂಬನೆಯ ಬಗ್ಗೆ ತಾತ್ಸಾರ ಮನೋಭಾವ ಪ್ರದರ್ಶನವಾದಾಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇತ್ತೀಚೆಗೆ ಸಂಸತ್‌ನಲ್ಲಿ 73ನೆ ವಿಧಿಗೆ ತಿದ್ದುಪಡಿ ತಂದು ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ದೊರಕಿಸಿಕೊಡಲು ಮುಂದಾಗಿ ಸರಕಾರ ಯಶಸ್ವಿಯಾಗಿದ್ದು, ಇದರಿಂದಾಗಿ ಮಹಿಳೆಯರಿಗೆ ರಾಜಕೀಯ ಅಧಿಕಾರದಲ್ಲಿ ತಾರತಮ್ಯ ನೀತಿ ಇಲ್ಲದಂತಾಗಿದೆ ಎಂದು ತಿಳಿಸಿದರು. ಎಂಎಲ್‌ಸಿ ಹಾಗೂ ಸಹಕಾರ ಸಂಘದ ಅಧ್ಯಕ್ಷೆ ಮೋಟಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಚೈತನ್ಯ ಸಹಕಾರ ಸಂಘಕ್ಕೆ ಪ್ರಾರಂಭಿಕ ಹಂತವಾಗಿ 2000 ಸದಸ್ಯರನ್ನು ಸೇರ್ಪಡೆ ಗೊಳಿಸುವ ಗುರಿ ಹೊಂದಲಾಗಿದೆ. ಹೆಚ್ಚಾಗಿ ಬಡವರ್ಗದವರಾಗಿರುವುದರಿಂದ ಅಂತಹವರ ಷೇರು ಹಣವನ್ನು ಸರಕಾರವೇ ತುಂಬಲು ಮುಂದೆ ಬಂದಿದೆ. 2 ಕೋಟಿಯವರೆಗೆ ಠೇವಣಿ ಸಂಗ್ರಹಿಸಲು ಚಿಂತಿಸಬೇಕಾಗಿದೆ. ತಾವು ಒಂೊಮೆ
್ಮ ಈ ಸಹಕಾರ ಸಂಘದಲ್ಲಿದ್ದರೂ ಇಲ್ಲದಿದ್ದರೂ ತನ್ನ ಉದ್ದೇಶವನ್ನು ತಾಲೂಕಿನ ಮಹಿಳೆಯರು ಈಡೇರಿಸಿಕೊಡಬೇಕೆಂದು ಹೇಳಿದರು. ವೇದಿಕೆಯಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಸಹಿತ ನಾಲ್ವರು ಸಚಿವರಿಗೆ ಮೋಟಮ್ಮ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಬಿ.ಬಿ.ನಿಂಗಯ್ಯ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಬಿ.ಸಿ.ಗೀತಾ, ಮಾಜಿ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್, ಜಿಲ್ಲಾಧಿಕಾರಿ ಷಡಕ್ಷರಿಸ್ವಾಮಿ, ಎಸ್.ಪಿ. ಸಂತೋಷ್‌ಬಾಬು, ಮುಖಂಡರಾದ ಎಂ.ಎಸ್.ಅನಂತ್, ನೀಲಾ ಅನಂತ್, ಲಕ್ಷ್ಮೀರಾಮಯ್ಯ, ಸೀತಮ್ಮ, ಎಚ್.ಎಂ.ಜಯಲಕ್ಷ್ಮೀ, ಎಂ.ಎಚ್.ಸೀತಮ್ಮ, ಪಪಂ ಅಧ್ಯಕ್ಷೆ ಪಾರ್ವತಮ್ಮ, ಲೋಕವಳ್ಳಿ ರಮೇಶ್, ಕೆ.ಕೆ.ರಾಮಯ್ಯ, ಯು.ಬಿ.ಮಂಜಯ್ಯ, ಹೊಸಕೆರೆ ರಮೇಶ್, ರಾಮು, ಬೆಟ್ಟಗೆರೆ ಶಂಕರ್, ಕೆ.ಎಲ್. ಸಾಗರ್ ಮತ್ತಿತರರಿದ್ದರು.