×
Ad

ಶ್ರೀಲಂಕಾದಲ್ಲಿ ನಡೆಯುತ್ತಿರುವ ಕರಾಟೆ ಸ್ಪರ್ಧೆಗೆ ಶಿವಮೊಗ್ಗದ ಕ್ರೀಡಾಪಟುಗಳು

Update: 2016-05-03 22:24 IST

ಶಿವಮೊಗ್ಗ,ಮೇ 3: ಶ್ರೀಲಂಕಾದ ಕ್ಯಾಂಡಿಯಲ್ಲಿ ಏಷ್ಯಾ ಕರಾಟೆ ಫೆಡರೇಷನ್ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಅಂತಾ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ನಗರದ ವಿವಿಧ ಕರಾಟೆ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಬಾಲಕ-ಬಾಲಕಿಯರು ತೆರಳಲಿದ್ದಾರೆ. ಈ ಕುರಿತು ಮಂಗಳವಾರ ನಗರದಲ್ಲಿ ಜಿಲ್ಲಾ ಕರಾಟೆ ಕುಬುಡೋ ಅಸೋಸಿಯೇಷನ್ ಹಾಗೂ ಜಿಲ್ಲಾ ಕರಾಟೆ ಸಂಘದ ಮುಖಂಡರು ಪ್ರತ್ಯೇಕವಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿ ಕ್ರೀಡಾಪಟುಗಳ ವಿವರ ನೀಡಿದರು. ಕುಬುಡೋ ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ್ ಜಿ.ಭಟ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಜಿ.ಎನ್. ಷಣ್ಮುಖ, ಆನವಟ್ಟಿ ಯವರಾನ್ ಸ್ಕೂಲ್‌ನ ಎಚ್.ಎಸ್.ಶ್ರೇಯಸ್, ಎಸ್.ಜಿ. ಧ್ರುವ, ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಎಸ್. ಓಂಕಾರ್, ಅನನ್ಯ ವಿದ್ಯಾಪೀಠದ ಜೆ. ಶ್ರೀಜೈ, ದುರ್ಗಿಗುಡಿ ಸರಕಾರಿ ಪ್ರೌಢಶಾಲೆಯ ಕೆ. ತ್ರಿವೇಣಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News