ಚಿಕ್ಕಮಗಳೂರು: ಪೊಲೀಸರಿಂದ ದೌರ್ಜನ್ಯ ಆರೋಪ; ಮೇ 6ರಂದು ಧರಣಿ

Update: 2016-05-03 18:22 GMT

ಚಿಕ್ಕಮಗಳೂರು, ಮೇ 3: ಮರ್ಲೆ ಗ್ರಾಮದಲ್ಲಿ ಅಂಬೇಡ್ಕರ್ ಯುವ ಚೇತನ ಸಂಘದ ಕಾರ್ಯಕರ್ತರು ಅಂಬೇಡ್ಕರ್ ಜಯಂತಿ ಹಮ್ಮಿಕೊಂಡಿದ್ದ ವೇಳೆ ಗ್ರಾಮಾಂತರ ಠಾಣಾಧಿಕಾರಿ ಏಕಾಏಕಿ ನುಗ್ಗಿ ದೌರ್ಜನ್ಯ ಎಸಗಿ ಸುಳ್ಳು ಆರೋಪ ಹೊರಿಸಿದ್ದು, ಮೇ.6ರಂದು ಜಿಲ್ಲಾಧಿಕಾರಿ ಕಛೇರಿ ಎದುರು ಧರಣಿ ನಡೆಸುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಮರ್ಲೆ ಅಣ್ಣಯ್ಯ ತಿಳಿಸಿದ್ದಾರೆ.

  ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.20ರಂದು ನಡೆದ ಅಂಬೇಡ್ಕರ್ ಜಯಂತಿ ವೇಳೆ ಗ್ರಾಮಾಂತರ ಠಾಣೆಯ ಪಿಎಸ್ಸೈ ರಾಕೇಶ್ ಮತ್ತು ಸಿಬ್ಬಂದಿ ವಿನ್ ಮತ್ತಿತರರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿ ಕಾರ್ಯಕರ್ತರಾದ ರವಿಪ್ರಕಾಶ್, ಎಂ.ವಿ.ಗೋಪಿ ಮತ್ತಿತರರ ಮೇಲೆ ಹಲ್ಲೆ ನಡೆಸಿದ್ದಾರೆ. ಹಾಗೂ ಸುಳ್ಳು ಆರೋಪ ಹೊರಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

  ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಮೇ 6ರಂದು ಪೂರ್ವಾಹ್ನ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಟನೆ ನಡೆಸಲಿದ್ದೇವೆ ಎಂದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News