×
Ad

ಪೂಜಗೇರಿ ಹಳ್ಳ ಅತಿಕ್ರಮಣ: ತಾಲೂಕು ಆಡಳಿತದಿಂದ ತೆರವು

Update: 2016-05-04 22:06 IST

ಅಂಕೋಲಾ, ಮೇ 4: ಪೂಜಗೇರಿ ಹಳ್ಳದ ಕೆಲವು ಪ್ರದೇಶಗಳನ್ನು ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಣ ಮಾಡಿಕೊಂಡ ಹಿನ್ನೆಲೆಯಲ್ಲಿ ತೆಂಕಣಕೇರಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರು.

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕು ಆಡಳಿತ ಬುಧವಾರ 2 ಜೆಸಿಬಿ ಯಂತ್ರವನ್ನು ಬಳಸಿ ಅತಿಕ್ರಮಣವಾದ ಸ್ಥಳವನ್ನು ಖಾಲಿ ಮಾಡಿಸಿದ ಘಟನೆ ನಡೆದಿದೆ. ಪೂಜಗೇರಿ ಹಳ್ಳದ ಪಕ್ಕದ ಜಮೀನಿನ ಮಾಲಕ 2.8 ಗುಂಟೆ ಜಾಗವನ್ನು ಅತಿಕ್ರಮಣ ಮಾಡಿಕೊಂಡು ರಸ್ತೆ ಸಂಚಾರಕ್ಕೆ ತೊಡಕುಂಟು ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಈ ಕ್ರಮ ಕೈಗೊಂಡಿದೆ.

ಈ ಸಂದರ್ಭದಲ್ಲಿ ತಹಶೀಲ್ದಾರ್ ವಿ.ಜಿ.ಲಾಂಜೇಕರ್, ಕಂದಾಯ ನಿರೀಕ್ಷಕ ಅಮರ ನಾಯ್ಕ, ಪಿಎಸ್ಸೈ ಎಚ್. ಓಂಕಾರಪ್ಪ, ಬೊಬ್ರುವಾಡ ಗ್ರಾಪಂ ಪಿಡಿಒ ರಾಜೇಂದ್ರಬಾಬು, ಗ್ರಾಮ ಲೆಕ್ಕಾಧಿಕಾರಿ ಲಲಿತಾ ಆಗೇರ, ಬೊಬ್ರುವಾಡ ಅಧ್ಯಕ್ಷ ಚಂದ್ರಕಾಂತ ನಾಯ್ಕ, ಪ್ರಮುಖರಾದ ರಾಜೇಶ್ ಮಿತ್ರ ನಾಯ್ಕ, ಪೊಲೀಸ್ ಸಿಬ್ಬಂದಿ ವಸಂತ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News