ದಾವಣಗೆರೆ ಜಿಲ್ಲೆಯಿಂದ 1,040 ಪರೀಕ್ಷಾರ್ಥಿಗಳು

Update: 2016-05-04 16:53 GMT

ದಾವಣಗೆರೆ, ಮೇ 4: ಮುಂಬರುವ ವೃತ್ತಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಬುಧವಾರ ಸಿಇಟಿ ಪರೀಕ್ಷೆಯು ನಗರದ 17 ಪರೀಕ್ಷಾ ಕೇಂದ್ರಗಳಲ್ಲಿ ಬಂದೋಬಸ್ತ್‌ನಲ್ಲಿ ನಡೆಯಿತು.

 ಜಿಲ್ಲಾದ್ಯಂತ ಪರೀಕ್ಷೆಗೆ ನೋಂದಾ ಯಿಸಿದ್ದ 7,280 ವಿದ್ಯಾರ್ಥಿಗಳಲ್ಲಿ ಒಟ್ಟು 1,040 ವಿದ್ಯಾರ್ಥಿಗಳು ಗೈರು ಹಾಜರಾ ಗಿದ್ದಾರೆ. ಉಳಿದಂತೆ ಗಣಿತ ಪರೀಕ್ಷೆಯು ಮಧ್ಯಾಹ್ನ 2:30ರಿಂದ 3:50ರವರೆಗೂ ಜರಗಿತು. ಪರೀಕ್ಷಾ ಕೇಂದ್ರಗಳ ಸುತ್ತಲೂ ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಬೆಳಗ್ಗೆ 10:30ರಿಂದ 11:50ರ ವರೆಗೂ ನಡೆದ ಜೀವಶಾಸ್ತ್ರ ಪರೀಕ್ಷೆಯನ್ನು 6,240 ವಿದ್ಯಾರ್ಥಿಗಳು ಬರೆದರು. ಈ ಬಾರಿ ಪರೀಕ್ಷೆಯಲ್ಲಿ ಕೈಗಡಿಯಾರ ನಿಷೇಧಿಸಲಾಗಿತ್ತು. ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ನಡೆಯಲು ಹಾಗೂ ಅವ್ಯವಹಾರ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಎ ಮತ್ತು ಬಿ ದರ್ಜೆಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗಿತ್ತು.ಪರೀಕ್ಷಾ ವೀಕ್ಷಣೆಗಾಗಿ ನಾಲ್ಕು ಮಂದಿ ಮಾರ್ಗಾಧಿಕಾರಿಗಳು ನೇಮಕಗೊಂಡಿದ್ದರು. ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಿಜಯಾನಂದ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News