×
Ad

ಭಟ್ಕಳ: ಪಾದಚಾರಿ ಮಹಿಳೆಯ ಸರ ಎಗರಿಸಿದ ಕಳ್ಳ

Update: 2016-05-04 23:08 IST

ಭಟ್ಕಳ, ಮೇ 4: ಬೇಂಗ್ರೆ ಗ್ರಾಪಂ ವ್ಯಾಪ್ತಿಯ ಉಳ್ಮಣ್‌ನಲ್ಲಿ ಪಾದಚಾರಿ ಮಹಿಳೆಯೋರ್ವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ದುಷ್ಕರ್ಮಿಯೋರ್ವ ಎಗರಿಸಿ ಪರಾರಿಯಾದ ಘಟನೆ ವರದಿಯಾಗಿದೆ.

ಬೇಂಗ್ರೆ ಉಳ್ಮಣ್ ನಿವಾಸಿ ಮಾಸ್ತಮ್ಮ ಬೈರಾ ಮೊಗೇರ ಮತ್ತು ಇನ್ನೋರ್ವ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಹಿಂಬದಿಯಿಂದ ಬಂದ ಬೈಕ್ ಸವಾರನೋರ್ವ ಕುತ್ತಿಗೆಗೆ ಕೈಹಾಕಿ ಕತ್ತಿನಲ್ಲಿದ್ದ ಸರವನ್ನು ಅಪಹರಿಸಿಕೊಂಡು ಪರಾರಿಯಾಗಿದ್ದಾನೆ.

ಮಹಿಳೆಯರು ಕೂಗಿಕೊಳ್ಳುವುದರಲ್ಲಿ ಆತ ಬೈಕ್‌ನೊಂದಿಗೆ ಪರಾರಿಯಾಗಿದ್ದಾನೆನ್ನಲಾಗಿದೆ. ಬೈಕಿನ ಚಹರೆ ಹಾಗೂ ಆತನ ಚಹರೆಯನ್ನು ಪಡೆದಿರುವ ಮುರ್ಡೇಶ್ವರ ಪೊಲೀಸರು ಪತ್ತೆ ಕಾರ್ಯವನ್ನು ಕೈಗೊಂಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಸಿಪಿಐ ಪ್ರಶಾಂತ ನಾಯಕ ಮಾಹಿತಿ ಕಲೆಹಾಕಿದ್ದು ಸರಗಳ್ಳನನ್ನು ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News