ಜಗತ್ತಿನಲ್ಲಿ ಶಾಲೆ ನಿರಾಕರಿಸಲ್ಪಟ್ಟ 7.5 ಕೋಟಿ ಮಕ್ಕಳು!

Update: 2016-05-05 08:43 GMT

ನ್ಯೂಯಾರ್ಕ್, ಮೇ 5: ಸಂಘರ್ಷ ಸ್ಫೋಟವಾಗಿರುವ ಜಗತ್ತಿನ ವಿವಿಧ ಭಾಗಗಳಲ್ಲಿ ಶಾಲೆ ನಿರಾಕರಿಸಲ್ಪಟ್ಟ 7.5 ಕೋಟಿ ಮಕ್ಕಳು ಇದ್ದಾರೆ ಎಂದು ಯುನಿಸೆಫ್ ವರದಿ ತಿಳಿಸಿದೆ. ಮೂರರಿಂದ ಹದಿನೆಂಟು ವಯೋಮಿತಿಯ 46.2 ಕೋಟಿ ಮಕ್ಕಳು ಕಠಿಣ ಘರ್ಷಣೆನಡೆಯುತ್ತಿರುವ ಪ್ರದೇಶಗಳಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ನಿಯಮಿತವಾಗಿ ಶಾಲೆಗೆ ಹೋಗುವುದಿಲ್ಲ ಎಂದು ಅದು ತಿಳಿಸಿರುವುದಾಗಿ ವರದಿ ತಿಳಿಸಿದೆ.

ಐದು ವರ್ಷಗಳಿಂದ ಆಂತರಿಕ ಸಂಘರ್ಷ ಮುಂದುವರಿಯುತ್ತಿರುವ ಸಿರಿಯಾದಲ್ಲಿ 6,000 ಶಾಲೆಗಳು ಧ್ವಂಸ ಅಥವಾ ನಿರುಪಯುಕ್ತವಾಗಿದೆ.

 ಪೂರ್ವ ಯುಕ್ರೇನ್‌ನಲ್ಲಿ ಐದರಲ್ಲಿ ಒಂದು ಶಾಲೆಗಳನ್ನು ಮುಚ್ಚಲಾಗಿದೆ. ನಿರಾಶ್ರಿತರಲ್ಲಿ ಬಹುಭಾಗವೂ ಅಕ್ಷರ ಕಲಿಯುವ ಸೌಭಾಗ್ಯ ನಿರಾಕರಿಸಲ್ಪಟ್ಟಿರುವವರು ಆಗಿದ್ದಾರೆ. ಇತರರಿಗೆಹೋಲಿಸಿದರೆ ಇವರಿಗೆ ಶಿಕ್ಷಣ ನಿರಾಕರಣೆ ಐದು ಪಟ್ಟುಸಾಧ್ಯತೆಗಳಿವೆ. ಇಸ್ತಾಂಬುಲ್‌ನಲ್ಲಿ ಮೇ 22,23 ತಾರೀಕಿಗೆ ನಡೆಯುವಜಾಗತಿಕ ಸಮ್ಮೇಳನಕ್ಕೆಮುಂಚಿತವಾಗಿ ಹೊರಬಿಡಲಾದ ಲೆಕ್ಕ ತಿಳಿಸುತ್ತಿದೆ.

ಒಂದುವರ್ಷದಷ್ಟು ಕಾಲ ಶಾಲೆಯಿಂದ ದೂರ ಉಳಿದ ವಿದ್ಯಾರ್ಥಿಗಳಲ್ಲಿ ಯಾರು ಮತ್ತೆ ಶಾಲೆಗೆ ಬರುವುದಿಲ್ಲ. ಬಾಲಕರಿಗೆ ಹೋಲಿಸಿದರೆ ಬಾಲಕಿಯರು ವಿದ್ಯಾಭ್ಯಾಸ ನಿಲ್ಲಿಸುವುದು ಐದು ಪಟ್ಟು ಹೆಚ್ಚು ಸಾಧ್ಯತೆಯಿದೆ ಎಂದು ವರದಿ ಸೂಚಿಸುತ್ತಿದೆ. ವಿದ್ಯಾಭ್ಯಾಸ ನಿರಾಕರಿಸಲ್ಪಟ್ಟ ಮಕ್ಕಳಿಗೆ ಪರಮಾವಧಿ ಸಹಾಯ ತಲುಪಿಸುವ ಉದ್ದೇಶದೊಂದಿಗೆ 400 ಕೋಟಿ ಡಾಲರ್ ಪ್ರಾಥಮಿಕ ಫಂಡ್ ಸಮ್ಮೇಳನದಲ್ಲಿ ಘೋಷಿಸಲಾಗುವುದು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News