ಜಿಶಾರ ಅಮ್ಮನನ್ನು ನೋಡಲು ಬರುವವರ ಉದ್ದೇಶ ಕೇವಲ ಪಬ್ಲಿಸಿಟಿ ಮಾತ್ರ! : ಎರ್ನಾಕುಲಂ ಜಿಲ್ಲಾಧಿಕಾರಿ

Update: 2016-05-05 10:56 GMT

ಕೊಚ್ಚಿ, ಮೇ 5: ಪೆರಂಬಾವೂರ್‌ನಲ್ಲಿ ಕೊಲ್ಲಲ್ಪಟ್ಟಿರುವ ವಿದ್ಯಾರ್ಥಿನಿ ಜಿಶಾರ ಅಮ್ಮ ರಾಜೇಶ್ವರಿಯವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಲು ಬರುವವರಲ್ಲಿ ಹೆಚ್ಚಿನವರ ಉದ್ದೇಶ ಪಬ್ಲಿಸಿಟಿಯಾಗಿದೆ ಎಂದು ಎರ್ನಾಕುಲಂ ಜಿಲ್ಲಾಧಿಕಾರಿ ಎಂಜಿ ರಾಜಮಾಣಿಕ್ಯಂ ಹೇಳಿದ್ದಾರೆ. ಫೋಟೊಗ್ರಾಫರ್‌ಗಳನ್ನೂ ವೀಡಿಯೊಗ್ರಾಫರ್‌ಗಳನ್ನು ಜೊತೆಗೆ ಕರೆದುಕೊಂಡು ಕೆಲವರು ಆಸ್ಪತ್ರೆಗೆ ಬರುತ್ತಿದ್ದಾರೆ. ಮತ್ತೆ ಕೆಲವರು ಚರ್ಚೆ ನಡೆಸಲು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪ ಹೊರಿಸಲು ನಿಲ್ಲುತ್ತಿದ್ದಾರೆ. ಹತ್ತುದಿವಸಗಳ ಕಾಲ ಈ ಆವೇಶ ಇರುತ್ತದೆ. ನಂತರ ಈ ಗಲಾಟೆ ಮಾಡುವವರು ಯಾರೂ ಈ ಅಮ್ಮನನ್ನು ಮತ್ತು ಕುಟುಂಬವನ್ನು ತಿರುಗಿ ನೋಡುವ ಸ್ಥಿತಿ ನಿರ್ಮಾಣವಾಗುತ್ತದೆ. ಫೇಸ್‌ಬುಕ್‌ನಲ್ಲಿ ಜಿಲ್ಲಾಧಿಕಾರಿ ಈ ಟೀಕೆ ಮಾಡಿರುವುದಾಗಿ ವರದಿಯಾಗಿದೆ.

ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವುದಕ್ಕಾಗಿ ಮುಂದಾಗುವವರಿಗಾಗಿ ಎರ್ನಾಕುಲಂ ಜಿಲ್ಲಾಧಿಕಾರಿ ಮತ್ತು ಜೀಷಾರ ಅಮ್ಮ ರಾಜೇಶ್ವರಿ ಜೊತೆಗೂಡಿ ಆರಂಭಿಸಿದ ಬ್ಯಾಂಕ್ ಅಕೌಂಟ್‌ಗೆ ನೆರವು ನೀಡಬೇಕೆಂದು ಮನವಿಯನ್ನೂ ಮಾಡಲಾಗಿದೆ.

ಅಕೌಂಟ್ ನಂಬರ್:35748602803

ಹೆಸರು: ದ ಡಿಸ್ಟ್ರಿಕ್ಟ್ ಕಲೆಕ್ಟರ್, ಎರ್ನಾಕುಲಂ &ಮಿಸ್ಸೆಸ್ ಕೆ.ಕೆ. ರಾಜೇಶ್ವರಿ

ಐಎಫ್‌ಎಸ್‌ಸಿ:ಎಸ್‌ಬಿಐಎನ್ 0008661

ಮೋಡ್ ಆಫ್ ಆಪರೇಶನ್: ಜಾಯಿಂಟ್ ಆಪರೇಶನ್

ಬ್ಯಾಂಕ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ, ಪೆರುಂಬಾವೂರ್

 ರಾಜೇಶ್ವರಿಯವರನ್ನು ನೋಡಲು ಬರುವ ಸಂದರ್ಶಕರನ್ನು ನಿಯಂತ್ರಿಸಬೇಕೆಂದು ಆಸ್ಪತ್ರೆ ಸುಪರಿಡೆಂಟ್ ಡಾ. ಸುಮಾ ತಿಳಿಸಿರುತ್ತಾರೆ. ಜೀಷಾರ ಅಮ್ಮನಿಗೆ ವಿಶ್ರಾಂತಿಯ ಅನಿವಾರ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ರಾಜೇಶ್ವರಿಗೆ ಮಾನಸಿಕ ಒತ್ತಡ ತಡೆಯಲು ಸಾಧ್ಯವಿಲ್ಲ. ಈ ಪರಿಸ್ಥಿತಿಯಲ್ಲಿ ಅವರನ್ನು ಕಷ್ಟಕ್ಕೀಡುಗೊಳಿಸಬಾರದುಮತ್ತು ಆರಾಮ ವಿಶ್ರಾಂತಿ ಪಡೆಯಲು ಅನುವುಮಾಡಿಕೊಡಬೇಕೆಂದು ವೈದ್ಯರು ಸೂಚಿಸಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News