×
Ad

ಬೆಂಗಳೂರು, ಮೈಸೂರಿನಲ್ಲಿ ಭಾರೀ ಮಳೆ

Update: 2016-05-06 17:48 IST


ಬೆಂಗಳೂರು, ಮೇ 6: ಬಿಸಿಲಿನಿಂದ ಕಂಗೆಟ್ಟಿದ್ದ ಉದ್ಯಾನನಗರಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ಇಂದು ಸಂಜೆ ಭಾರೀ ಮಳೆಯಾಗಿದೆ.
ವಿಧಾನಸೌಧ ಹಲಸೂರು, ಕೆಆರ್‌ಪುರಂ, ಜೆಸಿ ರಸ್ತೆ ಲಾಲ್ಬಾಗ್‌, ಹೆಬ್ಬಾಳ, ರಾಜಾಜಿನಗರ, ಕೆಆರ್‌ನಗರ, ಆರ‍್ ಟಿ ನಗರ, ಶಿವಾಜಿನಗರ, ಯಶವಂತಪುರ, ಪೀಣ್ಯ , ಹೆಬ್ಬಾಳ , ಕೆಮಪೇಗೌಡ ವಿಮಾನ ನಿಲ್ದಾಣ, ಮತ್ತಿತರ ಸ್ಥಳಗಳಲ್ಲಿ ಮಳೆಯಾಗಿದೆ. ಭಾರೀ ಮಳೆಯಿಂದ ರಸ್ತೆಯಲ್ಲಿ ನೆರೆ ನೀರು ನುಗ್ಗಿದ ಪರಿಣಾಮವಾಗಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಹೆಬ್ಬಾಳ, ರಿಚ್ಮಂಡ್‌ ಟೌನ್‌, ಡಬಲ್‌ ರೋಡ್‌, ಶಾಂತಿನಗರ ರಸ್ತೆಯಲ್ಲಿ ನೀರು ಹರಿಯುತ್ತಿದೆ. 
ವಿಮಾನ ನಿಲ್ದಾಣದ ರಸ್ತೆಯಲ್ಲಿ ಮಳೆಯಿಂದಾಗಿ ಟ್ರಾಫಿಕ್‌  ಜಾಮ್‌ ಆಗಿದೆ. ವಿಠಲ ಮಲ್ಯ ರಸ್ತೆ ಜಲಾವೃತಗೊಂಡಿದೆ. ರಸ್ತೆಯಲ್ಲಿ ಒಂದು ಕಿ.ಮೀ ತನಕ ಮಳೆ ನೀರು ನಿಂತಿದೆ.  ಬೆಂಗಳೂರಿನಲ್ಲಿ ಇನ್ನೆರಡು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೈಸೂರಿನಲ್ಲೂ ಭಾರಿ ಮಳೆಯಾದ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News