×
Ad

ನೀರಿನ ಬರದ ನಡುವೆ ತನ್ನ ಅಸ್ತಿತ್ವ ಕಾಪಾಡಿಕೊಂಡ ಕದ್ರಾ ಜಲಾಶಯ

Update: 2016-05-06 22:04 IST

ಶ್ರಿನಿವಾಸ ಬಾಡಕರ್

 ಕಾರವಾರ, ಮೇ 6: ರಾಜ್ಯಾದ್ಯಂತ ಜಲಾಶಯಗಳು ಖಾಲಿಯಾಗಿದ್ದು ಬರಗಾಲ ಆವರಿಸಿದೆ. ಜಿಲ್ಲೆಯಲ್ಲಿ ಮಾತ್ರ ಕದ್ರಾ ಜಲಾಶಯದಲ್ಲಿ ಜೂನ್ ತಿಂಗಳ ಅಂತ್ಯದವರೆಗೆ ಸಾಕಾಗುವಷ್ಟು ನೀರಿದ್ದು ಮೇ ಅಂತ್ಯ ಅಥವಾ ಜೂನ್ ಒಳಗೆ ಮಳೆ ಬಾರದೇ ಇದ್ದರೆ ಸಮಸ್ಯೆ ಯಾಗಲಿದೆ. ನೀರಿಗೆ ಮುಂದೆ ಮೇ ತಿಂಗಳಲ್ಲಿ ಸಮಸ್ಯೆಯಾಗದಂತೆ ಕಳೆದ ಡಿಸೆಂಬರ್ ತಿಂಗಳಲ್ಲಿ ವಿದ್ಯುತ್ ಉತ್ಪಾದನೆಗಾಗಿ ಕಡಿಮೆ ನೀರು ಬಳಸಿಕೊಳ್ಳಲಾಗಿದ್ದು ಕೆಪಿಸಿ ಇಂಜಿನಿಯರ್‌ಗಳ ಮುಂದಾಲೋಚನೆಯ ಫಲವಾಗಿ ವ್ಯವಸ್ಥಿತವಾಗಿ ಯೋಜನಾಬದ್ಧವಾಗಿ ನೀರನ್ನು ಸದ್ಬಳಕೆ ಮಾಡಿಕೊಂಡಿದ್ದರಿಂದ ತಕ್ಕಮಟ್ಟಿನ ನೀರಿನ ಸಮಸ್ಯೆ ನಿವಾರಣೆಯಾಗಿದೆ ಎಂದು ನಿವೃತ್ತ ಅಧಿಕಾರಿ ಅಶ್ವತ್ಥ್ ನಾರಾಯಣ ತಿಳಿಸುತ್ತಾರೆ.

 ಕದ್ರಾ ಜಲಾಶಯದಲ್ಲಿ ಸಂಗ್ರಹವಿರುವ ನೀರು ವಿದ್ಯುತ್ ಉತ್ಪಾದನೆಗೆ ಹಾಗೂ ಕೈಗಾ ಅಣುಸ್ಥಾವರಕ್ಕೆ ಜೂನ್ ಅಂತ್ಯದವರೆಗೆ ಪೂರೈಕೆ ಮಾಡಬಹುದಾಗಿದೆ. ಸಮಯಕ್ಕೆ ಸರಿಯಾಗಿ ಮಳೆ ಬಾರದೇ ಇದ್ದರೆ ಮಾತ್ರ ಸಮಸ್ಯೆ ಉಲ್ಬಣಗೊಳ್ಳಲಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ನಾಲ್ಕು ಮುಖ್ಯ ಜಲಾಶಯ:   ಕಾಳಿ ನದಿಗೆ ಕದ್ರಾ, ಸುಪಾ ಗಣೇಶಗುಡಿ, ಬೊಮ್ಮನಳ್ಳಿ, ಕೊಡಸಳ್ಳಿ ಮುಖ್ಯವಾದ ನಾಲ್ಕು ದೊಡ್ಡ ಜಲಾಶಯಗಳನ್ನು ನಿರ್ಮಿಸಲಾಗಿದೆ. ತಟ್ಟಿಹಳ್ಳ ಹಾಗೂ ಕಾನೇರಿ ಉಪ ಜಲಾಶಯಗಳಾಗಿವೆ. ಕದ್ರಾ ಜಲಾಶಯವನ್ನು ಕಾಳಿ ನದಿ ಅಂತಿಮವಾಗಿ ಅರಬ್ಬೀ ಸಮುದ್ರ ಸಂಗಮಿಸುವ ಕಾರವಾರದಿಂದ 45 ಕೀ.ಮೀ.ದೂರದ ಪೂರ್ವಕ್ಕಿದ್ದು, ಮೂರು ಮುಖ್ಯ ಜಲಾಶಯ ಹಾಗೂ ಎರಡು ಉಪಜಲಾಶಯಗಳಿಂದ ಹರಿದು ಬರುವ ನೀರನ್ನು ಹಿಡಿದಿಟ್ಟುಕೊಂಡು ಬ್ಯಾಲೆನ್ಸ್ ಮಾಡುವ ಪ್ರಕ್ರಿಯೆ ಕದ್ರಾ ಜಲಾಶಯದ್ದಾಗಿದೆ.

ನೀರು ಪೂರೈಸುವಲ್ಲಿ ವಿಫಲ:  ವಿದ್ಯುತ್ ಉತ್ಪಾದನೆಯ ಮುಖ್ಯ ಗುರಿಯೊಂದಿಗೆ ಮತ್ತು ಜಿಲ್ಲೆಯ ಅನೇಕ ತಾಲೂಕುಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ನಿರ್ಮಿಸಲಾಗಿತ್ತು. ಆದರೆ ವಿದ್ಯುತ್ ಉತ್ಪಾದನೆಯ ಉದ್ದೇಶ ಈಡೇರಿದೆ. ಕಾರವಾರದ ಗ್ರಾಮೀಣ ಭಾಗಕ್ಕೆ ನೀರು ಪೂರೈಸುವ ಯೋಜನೆ ಮಾತ್ರ ಸಂಪೂರ್ಣವಾಗಿ ವಿಫಲವಾಗಿದೆ.

ನೀರಾವರಿ ಯೋಜನೆಯನ್ವಯ ತಾಲೂಕಿನ ಗೋಟೆಗಾಳಿ ಗ್ರಾಮದಲ್ಲಿ ಜಲಾಶಯದಿಂದ ಪೂರೈಕೆಯಾಗುವ ನೀರನ್ನು ಶುದ್ಧ್ದೀಕರಣಗೊಳಿಸುವ ಘಟಕ ಸ್ಥಾಪಿಸಲಾಗಿದೆ. ಆದರೆ ಅದು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ. ಸದ್ಯ ಜಲಾಶಯದ ನೀರನ್ನು ಕದ್ರಾದ ಕೆಪಿಸಿ ಹಾಗೂ ಮಲ್ಲಾಪುರದಲ್ಲಿರುವ ಕೈಗಾ ಕಾಲನಿಗಳಿಗೆ ಸರಬರಾಜು ಮಾಡಲಾಗುತ್ತಿದೆ.

 ಸದ್ಯ ಜಲಾಶಯದಿಂದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡುವುದನ್ನು ನಿಲ್ಲಿಸಲಾಗಿದೆ. ಒಂದೇ ಗೇಟ್ ಮೂಲಕ ನೀರು ಸಣ್ಣಪ್ರಮಾಣದಲ್ಲಿ ಹೊರ ಬಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಪ್ರಕೃತಿ ಸೌಂದರ್ಯದ ಖಣಿ: ಜಲಾಶಯದಲ್ಲಿ ನೀರು ಖಾಲಿಯಾಗಿರುವ ಬಗ್ಗೆ ಜಲಾಶಯದ ಮೇಲೆ ಮೂಡಿರುವ ಗೆರೆಗಳು ಹಾಗೂ ವಿರ್ಜೆ ಹಾಗೂ ಬಾಳೆಮನೆ ಗ್ರಾಮಗಳ ಕೆಳಗಡೆ ಮರಗಿಡಗಳ ಒಣಬೇರುಗಳು, ಹೆಬ್ಬಂಡೆಗಳು ಎದ್ದು ಕಾಣುತ್ತವೆ. ಜಲಾಶಯದೊಳಗಿನ ತೀರದ ಗುಂಟ ನೀರು ಒಣಗಿದ ಭಾಗದಲ್ಲಿನ ರಮಣೀಯವಾದ ಪ್ರಕೃತಿ ಮನಮೋಹಕ ದೃಶ್ಯಮಾತ್ರ ಮರಳುಗಾಡಿನಲ್ಲಿ ಓಯಸಿಸ್‌ನಂತೆ, ಬರಗಾಲದಲ್ಲೂ ಸೌಂದರ್ಯ ಸವಿಯುವಂತೆ ಇಲ್ಲಿನ ಜಲಾಶಯದ ಒಳಗಿನ ಸೌಂದರ್ಯ ಪ್ರಕೃತಿ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ.

   ವಿರ್ಜೆ ಗ್ರಾಮದ ಸಮೀಪವಂತೂ ನೀರು ಇಳಿದ ಪರಿಣಾಮ ಹಸಿರು ಹೊತ್ತ ನಡುಗಡ್ಡೆಗಳು, ನೀರಿನಿಂದ ತಲೆ ಎತ್ತಿ ನಿಂತ ಒಣಗಿದ ಮರಗಿಡಗಳ ಬೇರುಗಳ ದೃಶ್ಯ ಕಣ್ಮನ ಸೆಳೆಯುತ್ತಿವೆ. ಈಗ ಇವು ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಪಿಕ್‌ನಿಕ್ ಹೊರಡಲು ಯೋಗ್ಯ ಸ್ಥಳಗಳಾಗಿವೆ. ಇಂತಹ ಮನಮೋಹಕ ಅಪರೂಪದ ದೃಶ್ಯ ಸವಿಯುವ ಭಾಗ್ಯ ಮಳೆಗಾಲದ ನಂತರ ನೋಡಲು ಸಿಗುವುದಿಲ್ಲ. ಇಂತಹ ಪ್ರಕೃತಿ ಸೊಬಗು ಹೊಂದಿರುವ ಹಾಗೂ ನಾಡಿಗೆ ವಿದ್ಯುತ್ ಮತ್ತು ಕುಡಿಯುವ ನೀರು ಪೂರೈಸುವ ಕದ್ರಾ ಜಲಾಶಯವನ್ನು ಸರಕಾರ ಜತನದಿಂದ ಕಾಯಬೇಕಾಗಿದೆ. ಕದ್ರಾ ಜಲಾಶಯದಲ್ಲಿ 2015-16ನೆ ಸಾಲಿನಲ್ಲಿ ವಾರ್ಷಿಕ ಅಂದರೆ 2015 ಎಪ್ರಿಲ್ 1ರಿಂದ 2016ರ ಮಾರ್ಚ್ 31ರ ತನಕ 195.54306 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸಲಾಗಿದೆ. ಮಾಸಿಕವಾಗಿ ಉತ್ಪಾದನೆಯಾಗುವ ಸರಾಸರಿ ವಿದ್ಯುತ್‌ನ್ನು ಪರಿಗಣಿಸಿದಾಗ 2015ರ ಎಪ್ರಿಲ್‌ನಲ್ಲಿ 19.8478 ದಶ ಲಕ್ಷ ಯುನಿಟ್, ಮೇ ನಲ್ಲಿ 14.1664 ದಶಲಕ್ಷ ಯುನಿಟ್, ಜೂನ್‌ನಲ್ಲಿ 30.3283 ದಶಲಕ್ಷ ಯುನಿಟ್., ಜುಲೈನಲ್ಲಿ 37.9319 ದಶಲಕ್ಷ ಯುನಿಟ್, ಆಗಸ್ಟ್‌ನಲ್ಲಿ 54.49096 ದಶಲಕ್ಷ ಯುನಿಟ್, ಸೆಪ್ಟಂಬರ್‌ನಲ್ಲಿ 19.4777 ದಶಲಕ್ಷ ಯುನಿಟ್, ಅಕ್ಟೋಬರ್‌ನಲ್ಲಿ 9.71651 ದಶಲಕ್ಷ ಯುನಿಟ್,ನವೆಂಬರ್‌ನಲ್ಲಿ .025943 ದಶಲಕ್ಷ ಯುನಿಟ್, ಡಿಸೆಂಬರ್‌ನಲ್ಲಿ 2449 ದಶಲಕ್ಷ ಯುನಿಟ್ ಇದು ಅತ್ಯಂತ ಕನಿಷ್ಠ ಉತ್ಪಾದನೆಯಾಗಿದೆ.

\shpinstshapeType202fFlipH0fFlipV0lTxid65536dxWrapDistLeft0dxWrapDistRight0posh2posrelh3posv2posrelv3dhgt251660288fLayoutInCell0fLayoutInCell0

  

2016ರ ಜನವರಿ ತಿಂಗಳಲ್ಲಿ 1.2112 ದಶಲಕ್ಷ ಯುನಿಟ್, ಫೆಬ್ರವರಿಯಲ್ಲಿ 8.2014 ದಶಲಕ್ಷ ಯುನಿಟ್ ಆದರೆ ಮಾರ್ಚ್ ತಿಂಗಳಲ್ಲಿ 21.8312 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆ ದಾಖಲಾಗಿದೆ. *ಕದ್ರಾ ಜಲಾಶಯದಿಂದ ನಿರಂತರವಾಗಿ ನೀರನ್ನು ಸ್ವಲ್ಪಸ್ವಲ್ಪಪ್ರಮಾಣದಲ್ಲಿ ಬಿಡುತ್ತಿರಬೇಕಾಗುತ್ತದೆ. ಇಲ್ಲದಿದ್ದರೆ ಸಮುದ್ರದ ಉಪ್ಪುನೀರು ಭರತದ ವೇಳೆಯಲ್ಲಿ ಡ್ಯಾಮ್‌ನ ಸಮೀಪ ಬರುವ ಸಾಧ್ಯತೆ ಇರುತ್ತದೆ. ಈಗಾಗಲೇ ಉಪ್ಪು ನೀರು ಉಳಗಾ ಸಮೀಪ ಬಂದಿದೆ. ಡ್ಯಾಮ್ ಕೆಳಗಿನ ಗ್ರಾಮಗಳ ಕೆರೆ ಬಾವಿಗಳಿಗೆ ಉಪ್ಪು ನೀರು ಸೇರಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತದೆ. ಅದಕ್ಕಾಗಿ ಜನರ ಹಿತಕ್ಕಾಗಿ ಡ್ಯಾಮ್ ನೀರು ಬಿಡುತ್ತಿರುತ್ತೇವೆ. ಮಳೆಯಾದರೆ ಉಪ್ಪು ನೀರಿನ ಈ ಸ್ಥಿತಿ ಬದಲಾಗುವ ಸಾಧ್ಯತೆ ಇದೆ.

                        &AÍÜÌñ…§ ®ÝÃÝ¿á|, ¯ÊÜêñܤ A˜PÝÄ,Pæ²Ô PܨÝÅ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News