×
Ad

ಪಿಆರ್ ಕಾರ್ಡ್ ಮಾಡಿಸದ ಸ್ಥಿರಾಸ್ತಿ ಆಗಲಿದೆ ಸರಕಾರಿ ಆಸ್ತಿ: ವೌನೀಷ್ ವೌದ್ಗಿಲ್

Update: 2016-05-06 22:13 IST

ಶಿವಮೊಗ್ಗ, ಮೇ 6: ಶಿವಮೊಗ್ಗ ನಗರದ ಸ್ಥಿರಾಸ್ತಿ ಮಾಲಕರೇ ಎಚ್ಚರ... ಕಟ್ಟೆಚ್ಚರ... ಮೇ ತಿಂಗಳಾಂತ್ಯದಲ್ಲಿ ತಮ್ಮ ಸ್ಥಿರಾಸ್ತಿಗೆ ಸಂಬಂಧಿಸಿದ ದಾಖಲಾತಿಗಳನ್ನು ಯುಪಿಒಆರ್ (ನಗರ ಆಸ್ತಿ ಮಾಲಕತ್ವ ದಾಖಲೆ) ಕಚೇರಿಗೆ ಸಲ್ಲಿಸಿ. ಪ್ರಾಪರ್ಟಿ ಕಾರ್ಡ್ (ಪಿ.ಆರ್.) ಪಡೆದುಕೊಳ್ಳಿ. ಒಂದು ವೇಳೆ ದಾಖಲೆ ಸಲ್ಲಿಸದಿದ್ದರೆ ನಿಮ್ಮ ಆಸ್ತಿಗೆ ಮಹಾನಗರ ಪಾಲಿಕೆ ಖಾತೆಯಿದ್ದರೂ, ಎಲ್ಲ ದಾಖಲೆಗಳು ನಿಮ್ಮ ಹೆಸರಿನಲ್ಲಿದ್ದರೂ ಅದು ಸರಕಾರಿ ಭೂಮಿ ಎಂದು ಘೋಷಿತವಾಗಲಿದೆ. ಹೌದು. ಕಂದಾಯ ಇಲಾಖೆಯ ಸರ್ವೇ ಹಾಗೂ ಭೂ ದಾಖಲೆ ವಿಭಾಗದ ಆಯುಕ್ತ ಮನೀಷ್ ವೌದ್ಗಿಲ್‌ರವರೇ ಈ ವಿಷಯ ತಿಳಿಸಿದ್ದಾರೆ. ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಶಿವಮೊಗ್ಗ ನಗರದಲ್ಲಿ ಉಪಗ್ರಹ ಆಧಾರಿತ ಯುಪಿಒಆರ್ ಯೋಜನೆ ಜಾರಿಗೊಳಿಸಲಾಗಿದೆ. ಸ್ಥಿರಾಸ್ತಿಗಳಿಗೆ ಪಿಆರ್ ಕಾರ್ಡ್ ನೀಡಲಾಗುತ್ತಿದೆ. ಈ ಕಾರ್ಡ್ ಹೊಂದಿದವರೂ ಮಾತ್ರ ಸ್ಥಿರಾಸ್ತಿ ನೋಂದಣಿ, ಪರಭಾರೆ ಮಾಡಲು ಸಾಧ್ಯವಾಗಲಿದೆ. ಈಗಾಗಲೇ ಪಿಆರ್ ಕಾರ್ಡ್‌ಗೆ ಸಂಬಂಧಿಸಿದಂತೆ ಶಿವಮೊಗ್ಗ ನಗರದಲ್ಲಿ ಸಾಕಷ್ಟು ಪ್ರಚಾರ ನಡೆಸಲಾಗಿದೆ. ನಾಗರಿಕರಿಗೆ ಮಾಹಿತಿ ಕೊಡಲಾಗಿದೆ. ಆದಾಗ್ಯೂ ನಿರೀಕ್ಷಿತ ಮಟ್ಟದಲ್ಲಿ ಸ್ಥಿರಾಸ್ತಿ ಮಾಲಕರು ತಮ್ಮ ಸ್ಥಿರಾಸ್ತಿಗಳಿಗೆ ಪಿಆರ್ ಕಾರ್ಡ್ ಪಡೆಯಲು ಮುಂದೆ ಬರುತ್ತಿಲ್ಲ. ದಾಖಲೆಗಳನ್ನು ಸಲ್ಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪಿಆರ್ ಕಾರ್ಡ್ ಪಡೆಯದ ಸ್ಥಿರಾಸ್ತಿಗಳನ್ನು ಸರಕಾರಿ ಆಸ್ತಿಯಾಗಿ ಘೋಷಣೆ ಮಾಡಲಾಗುವುದು ಎಂದು ಮನೀಷ್ ವೌದ್ಗಿಲ್ ಘೋಷಿಸಿದ್ದಾರೆ. ನಗರದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

*ಕಾಯ್ದೆಯಂತೆ ಕ್ರಮ: ಶಿವಮೊಗ್ಗ ನಗರದಲ್ಲಿ ಸು ಾರು 93 ಸರಕಾರಿ ಹಾಗೂ ಖಾಸಗಿ ಸ್ಥಿರಾಸ್ತಿಗಳ ಸರ್ವೇ ನಡೆಸಲಾಗಿದೆ. ಇದರಲ್ಲಿ ಇಲ್ಲಿಯವರೆಗೂ ಸುಮಾರು 53 ಸಾವಿರ ಸ್ಥಿರಾಸ್ತಿ ಮಾಲಕರು ಪಿಆರ್ ಕಾರ್ಡ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಉಳಿದ ಸುಮಾರು 40 ಸಾವಿರ ಸ್ಥಿರಾಸ್ತಿ ಮಾಲಕರು ಪಿಆರ್ ಕಾರ್ಡ್ ಕೋರಿ ಅರ್ಜಿ ಸಲ್ಲಿಸಿಲ್ಲ ಎಂದು ಮನೀಷ್ ಮಾಹಿತಿ ನೀಡಿದ್ದಾರೆ. ಇಂತಹ ಸ್ಥಿರಾಸ್ತಿ ಮಾಲಕರಿಗೆ ಮತ್ತೊಮ್ಮೆ ನೋಟಿಸ್ ನೀಡಲಾಗುವುದು. ನೋಟಿಸ್ ಜೊತೆಗೆ ಅವರ ಸ್ಥಿರಾಸ್ತಿಯ ವಿವರವನ್ನೊಳಗೊಂಡ ಡ್ರಾಪ್ಟ್ ಕಾರ್ಡ್ ಕೂಡ ನೀಡಲಾಗುವುದು. ಈ ರೀತಿ ನೋಟಿಸ್ ಪಡೆದ ಸ್ಥಿರಾಸ್ತಿ ಮಾಲಕರು ಮೆ  

 ೀ ಅಂತ್ಯದೊಳಗೆ ತಮ್ಮ ಸ್ಥಿರಾಸ್ತಿಗೆ ಸಂಬಂಧಿಸಿದ ದಾಖಲಾತಿಗಳನ್ನು ಯುಪಿಒಆರ್ ಕಚೇರಿಗೆ ನೀಡಬೇಕು. ಒಂದು ವೇಳೆ ನೀಡದಿದ್ದರೆ ಇಂತಹ ಸ್ಥಿರಾಸ್ತಿಯನ್ನು ಸರಕಾರಿ ಆಸ್ತಿಯಾಗಿ ಘೋಷಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 67ರ ಅಡಿ ಸಮರ್ಪಕ ದಾಖಲೆ ಸಲ್ಲಿಸದ ಸ್ಥಿರಾಸ್ತಿಯನ್ನು ಸರಕಾರಿ ಆಸ್ತಿಯಾಗಿ ಘೋಷಣೆ ಮಾಡುವ ಅವಕಾಶವಿದೆ. ಅದರಂತೆ ಶಿವಮೊಗ್ಗ ನಗರದಲ್ಲಿಯೂ ಪಿಆರ್ ಕಾರ್ಡ್ ಮಾಡಿಸಲು ದಾಖಲೆ ಸಲ್ಲಿಸದ ಸ್ಥಿರಾಸ್ತಿಯನ್ನು ಸರಕಾರಿ ಆಸ್ತಿಯಾಗಿ ಘೋಷಣೆ ಮಾಡಲಾಗುವುದು. ಇದಕ್ಕೆ ಸ್ಥಿರಾಸ್ತಿ ಮಾಲಕರು ಅವಕಾಶ ಮಾಡಿಕೊಡಬಾರದು. ಕಾಲಮಿತಿಯೊಳಗೆ ಪಿಆರ್ ಕಾರ್ಡ್ ಮಾಡಿಸಲು ಅಗತ್ಯ ದಾಖಲಾತಿಗಳನ್ನು ಸಲ್ಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. *ಅಮಾನತು: ಪಿಆರ್ ಕಾರ್ಡ್ ಮಾಡಿಸದ ಸ್ಥಿರಾಸ್ತಿ ಮಾಲಕರಿಗೆ ನೋಟಿಸ್ ತಲುಪಿಸಿ, ಸೂಕ್ತ ಹಿಂಬರಹ ಸಿದ್ಧ್ದಪಡಿಸಬೇಕು. ಇದರಲ್ಲಿ ಏನಾದರೂ ಲೋಪವಾದರೇ ಸಂಬಂಧಿಸಿದ ಅಧಿಕಾರಿಯನ್ನು ಅಮಾನತುಗೊಳಿಸಲಾಗುವುದು ಎಂದು ಸರ್ವೇ ಇಲಾಖೆ ಹಾಗೂ ಯುಪಿಒಆರ್ ಕಚೇರಿ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಶಿವಮೊಗ್ಗದಲ್ಲಿ ಪೂರ್ಣ ಪ್ರಮಾಣದಲ್ಲಿ ಪಿಆರ್ ಕಾರ್ಡ್ ಮಾಡಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ಪ್ರತಿ ವಾರ ತಾವು ನಗರಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಲು ನಿರ್ಧರಿಸಿದ್ದೇನೆ. ಸರಕಾರದ ಈ ಯೋಜನೆಯ ಪ್ರಾಮಾಣಿಕ ಅನುಷ್ಠಾನಕ್ಕೆ ಮುಂದಾಗಲಾಗುವುದು. ಯಾವುದೇ ಒತ್ತಡಗಳಿಗೆ ಮಣಿಯದೆ ಕಾರ್ಯನಿರ್ವಹಣೆ ಮಾಡಲಾಗುವುದು ಎಂದರು. ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ಜಾರಿಗೆ ಕ್ರಮ: ಉ

ಪಗ್ರಹ ಆಧಾರಿತ ನಗರ ಆಸ್ತಿ ಮಾಲಕತ್ವ ದಾಖಲೆ (ಯುಪಿಒಆರ್) ಯೋಜನೆಯನ್ನು ಬೆಂಗಳೂರು, ಮಂಗಳೂರು, ಮೈಸೂರು ನಗರಗಳಲ್ಲಿ ಅನುಷ್ಠಾನಕ್ಕೆ ತರಲು ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಮೈಸೂರಿನಲ್ಲಿ ಸ್ಥಿರಾಸ್ತಿಗಳ ಸರ್ವೇ ಕಾರ್ಯ ನಡೆಯುತ್ತಿದೆ ಎಂದು ಸರ್ವೇ ಇಲಾಖೆಯ ಆಯುಕ್ತ ಮನೀಷ್ ವೌದ್ಗಿಲ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಯೋಜನೆ ಜಾರಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಹಂತಹಂತವಾಗಿ ರಾಜ್ಯದ ಇತರ ನಗರಗಳಲ್ಲಿಯೂ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು. ಇದರಿಂದ ಸರಕಾರಿ ಆಸ್ತಿಗಳ ಸಂರಕ್ಷಣೆ ಸಾಧ್ಯವಾಗಲಿದೆ. ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಬೀಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News