ಸಿದ್ದಾಪುರ ಚಾಂಪಿಯನ್ಸ್, ಕುಶಾಲನಗರ ರನ್ನರ್ ಅಪ್

Update: 2016-05-06 16:51 GMT

ಸಿದ್ದಾಪುರ, ಮೇ 6: ಇಲ್ಲಿನ ಸಿಟಿ ಬಾಯ್ಸಾ ಯುವಕ ಸಂಘದ ಆಶ್ರಯದಲ್ಲಿ ಐಪಿಎಲ್ ಮಾದರಿಯಲ್ಲಿ ನಡೆದ ಕೊಡಗು ಚಾಂಪಿಯನ್ಸ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಿದ್ದಾಪುರದ ಟೀಂ ಕೂಲ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ.

 ಜೂನಿಯರ್ ಕಾಲೇಜು ಮೈದಾನದಲ್ಲಿ 5 ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ 12 ತಂಡಗಳು ಪಾಲ್ಗೊಂಡಿದ್ದು, ಪ್ರಥಮ ಸ್ಥಾನ ಗಳಿಸಿದ ಟೀಂ ಕೂಲ್ ತಂಡ 1ಲಕ್ಷ ರೂ. ಮತ್ತು ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಪಡೆದ ರಂಜಿತ್ ಫ್ರೆಂಡ್ಸ್ ಕುಶಾಲನಗರ ತಂಡ 50 ಸಾವಿರ ರೂ. ಹಾಗೂ ಟ್ರೋಫಿಯನ್ನು ಪಡೆದುಕೊಂಡಿದೆ.

ಫೈನಲ್ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಕೂಲ್ ಸಿದ್ದಾಪುರ ತಂಡ 10 ಓವರ್‌ನಲ್ಲಿ ಪ್ರವೀಣ್ (13) ಮತ್ತು ಇಬ್ರಾಹೀಂ (31) ಅವರ ಬ್ಯಾಟಿಂಗ್ ನೆರವಿನೊಂದಿಗೆ 5ವಿಕೆಟ್ ನಷ್ಟಕ್ಕೆ 72ರನ್ ಗಳಿಸಿದರು. ರಂಜಿತ್ ಫ್ರೆಂಡ್ಸ್ ತಂಡದ ಪರವಾಗಿ ಸುದರ್ಶನ್ 3ವಿಕೆಟ್ ಪಡೆದರು. ಗುರಿ ಬೆನ್ನಟ್ಟಿ ಬ್ಯಾಟಿಂಗ್ ನಡೆಸಿದ ಕುಶಾಲನಗರ ತಂಡ 10 ಓವರ್‌ನಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 39ರನ್ ಗಳಿಸಿದರು. ತಂಡದ ಪರವಾಗಿ ಫಯಾಝ್ 17ರನ್ ಗಳಿಸಿದರು. ಸಿದ್ದಾಪುರ ತಂಡದ ಪ್ರವೀಣ್ 4, ಶಾಹಿರ್ 2ವಿಕೆಟ್ ಪಡೆದರು. ಸಮಾರೋಪ ಸಮಾರಂಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ತಾಪಂ ಮಾಜಿ ಅಧ್ಯಕ್ಷ ವಿ.ಕೆ ಲೋಕೇಶ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಪಾಲಿಬೆಟ್ಟ ಗ್ರಾಪಂ ಅಧ್ಯಕ್ಷ ಪುಲಿಯಂಡ ಬೋಪಣ್ಣ, ಸಿದ್ದಾಪುರ ಠಾಣಾಧಿಕಾರಿ ಸಂತೋಷ್ ಕಶ್ಯಪ್, ಚಾನೆಲ್ 24 ಸುರೇಶ್ ಬಿಳಿಗೇರಿ, ಸಿಟಿ ಬಾಯ್ಸಾ ಯುವಕ ಸಂಘದ ಅಧ್ಯಕ್ಷ ಹಾರಿಸ್, ಸಿದ್ದಾಪುರ ಗ್ರಾಪಂ ಸದಸ್ಯರಾದ ಶೌಕತ್ ಅಲಿ, ಅಬ್ದುಲ್ ಶುಕೂರ್, ರಜಿತ್ ಕುಮಾರ್, ಅಬ್ದುಲ್ ಕಾದರ್, ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಮಾಜಿ ಗ್ರಾಪಂ ಅಧ್ಯಕ್ಷ ವಿ.ಕೆ.ಬಶೀರ್, ಬೆಳೆಗಾರರಾದ ವಾಟೇರಿರ ಸುರೇಶ್, ಮುಸ್ತಫಾ, ನೆಲ್ಯಹುದಿಕೇರಿ ಪಿಡಿಒ ನಂಜುಂಡಸ್ವಾಮಿ, ದಾನಿಗಳಾದ ಸಬಾಸ್ಟಿನ್, ಕ್ರಿಯಟಿವ್ ಕಲೀಲ್, ಶಮೀರ್, ಮುನೀರ್, ಶಿಹಾಬ್, ರಹೀಸ್, ಮನ್ಸೂರ್ ಮತ್ತಿತರರು ಉಪಸ್ಥಿತರಿದ್ದರು, ಪಂದ್ಯಾವಳಿ ತೀರ್ಪುಗಾರರಾಗಿ ಕೆಎಸ್‌ಸಿಎ ತೀರ್ಪುಗಾರರಾದ ಪ್ರಕಾಶ್, ಪ್ರಭಾಕರ್, ದಿನೇಶ್, ರವಿ ಮತ್ತು ಸ್ಕೋರರಾಗಿ ಮಂಗಳೂರಿನ ಕುಶನ್ ಹಾಗೂ ವೀಕ್ಷಕ ವಿವರಣೆಯನ್ನು ಅಮ್ಮತ್ತಿಯ ಆಶಿಫ್ ನೀಡಿದರು.

ಮಾಲ್ದಾರೆಯ ಮುತ್ತಪ್ಪನ್ ಚೆಂಡ ಮೇಳ ಹಾಗೂ ಕರಡಿಗೋಡಿನ ಸಂತೋಷ್ ಅವರ ಕಾರ್ ಶೋ ಕ್ರೀಡಾಭಿಮಾನಿಗಳಿಗೆ ರಸ ದೌತಣ ನೀಡಿತು. ಅಚ್ಚು ಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ ಸಂಘದ ಪದಾಧಿಕಾರಿಗಳಿಗೆ ಹಾಗೂ ಶುಚಿತ್ವಕ್ಕೆ ಆದ್ಯತೆ ನೀಡಿದ ದೋಮಿನೋಸ್ ಯುವಕ ಸಂಘವನ್ನು ಗಣ್ಯರು ಪ್ರಶಂಸಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News