×
Ad

ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Update: 2016-05-07 22:07 IST

 ಶಿವಮೊಗ್ಗ, ಮೇ 7: ಶಿವಮೊಗ್ಗ ತಾಲೂಕಿನ ಮತ್ತೂರು ಗ್ರಾಮದ ಬಳಿ ಇತ್ತೀಚೆಗೆ ನಡೆದ ಸೋಮಯಾಗದಲ್ಲಿ ಆಡು ಬಲಿ ಕೊಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದರ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪ್ರಭಾರ ತಹಶೀಲ್ದಾರ್ ಸತ್ಯನಾರಾಯಣರವರು ಈ ಕುರಿತಂತೆ ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮತ್ತೂರು ಹೊರವಲಯದ ತಮಿಳರ ಕ್ಯಾಂಪ್ ಪ್ರದೇಶದ ಅಡಕೆ ಕಣದಲ್ಲಿ ಎ. 22ರಿಂದ 27ರವರೆಗೆ ನಡೆದ ಸೋಮಯಾಗದಲ್ಲಿ ಆಡುಗಳನ್ನು ಬಲಿಕೊಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕುರಿತಂತೆ ಸೂಕ್ತ ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಪ್ರಕರಣದ ಬಗ್ಗೆ ಶಿವಮೊಗ್ಗ ಉಪ ವಿಭಾಗದ ಡಿವೈಎಸ್ಪಿ ಡಾ. ರಾಮ್ ಎಲ್. ಅರೆಸಿದ್ದಿ ನೇತೃತ್ವದ ಪೊಲೀಸ್ ತಂಡವನ್ನು ತನಿಖೆಗೆ ನಿಯೋಜಿಸಲಾಗಿದ್ದು, ಈಗಾಗಲೇ ಈ ತಂಡ ತನಿಖೆ ಆರಂಭಿಸಿದೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ. ತಂಡದಿಂದ ವರದಿ ಸಲ್ಲಿಕೆ: ಸೆ

ಮಯಾಗದಲ್ಲಿ ಮೇಕೆ ಬಲಿ ಕೊಡಲಾಗಿದೆಯೇ ಎಂಬುದರ ಕುರಿತಂತೆ ತನಿಖೆ ನಡೆಸಲು ಜಿಲ್ಲಾಡಳಿತವು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರಾಕೇಶ್‌ಕುಮಾರ್ ನೇತೃತ್ವದಲ್ಲಿ ರಚಿಸಿದ್ದ ತನಿಖಾ ತಂಡವು ಜಿಲ್ಲಾಡಳಿತಕ್ಕೆ ತನ್ನ ಪ್ರಾಥಮಿಕ ಹಂತದ ತನಿಖಾ ವರದಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಈ ತಂಡದಲ್ಲಿದ್ದ ಕಂದಾಯ ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಇತ್ತೀಚೆಗೆ ಮತ್ತೂರಿನಲ್ಲಿ ಯಾಗ ನಡೆದ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದೆ. ಮೇಕೆ ಬಲಿ ಕೊಟ್ಟಿರುವ ಕುರಿತಂತೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಈ ತಂಡವು ಜಿಲ್ಲಾಡಳಿತಕ್ಕೆ ನೀಡಿರುವ ವರದಿಯಲ್ಲಿ ತಿಳಿಸಿದೆ ಎಂದು ಹೇಳಲಾಗಿದೆ. ಈ ನಡುವೆ ಜಿಪಂ ಸಿಇಒ ಕೆ.ರಾಕೇಶ್‌ಕುಮಾರ್ ನೇತೃತ್ವದ ತಂಡ ಸಲ್ಲಿಸಿರುವ ವರದಿಗೆ ಪ್ರಗತಿಪರ ಸಂಘಟನೆಗಳ ಮುಖಂಡರ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಮರ್ಪಕ ತನಿಖೆ ನಡೆಸದೆ ವರದಿ ನೀಡಿರುವ ಸಾಧ್ಯತೆಯಿದ್ದು, ಇಷ್ಟೊಂದು ಆತುರಾತುರವಾಗಿ ವರದಿ ಸಲ್ಲಿಸಲು ಕಾರಣವೇನು ಎಂದು ಮುಖಂಡರು ಪ್ರಶ್ನಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News