ಸಂವಿಧಾನದಲ್ಲಿ ಸರ್ವರಿಗೂ ಅವಕಾಶ ನೀಡಿದವರು ಅಂಬೇಡ್ಕರ್: ಝಾಕೀರ್ ಹುಸೈನ್
ಮೂಡಿಗೆರೆ, ಮೇ 7: ಸಂವಿಧಾನದಲ್ಲಿ ದೇಶದ ಸರ್ವ ಜನರಿಗೂ ಅವಕಾಶ ನೀಡಿದ ಮೇರು ವ್ಯಕ್ತಿತ್ವ ಡಾ.ಬಿ.ಆರ್.ಅಂಬೇಡ್ಕರ್ ಅವರದು ಎಂದು ಬಿಎಸ್ಪಿ ಜಿಲ್ಲಾದ್ಯಕ್ಷ ಝಾಕೀರ್ ಹುಸೈನ್ ಹೇಳಿದ್ದಾರೆ.
ಅವರು ಪಟ್ಟಣದ ಶಾದಿಮಹಲ್‌ನಲ್ಲಿ ಮಲೆನಾಡು ಮುಸ್ಲಿಂ ವೇದಿಕೆ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್‌ರವರ 125ನೆ ಜನ್ಮ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಸಂವಿಧಾನವನ್ನು ಕೊಟ್ಟ ಅಂಬೇಡ್ಕರ್‌ರವರಿಗೆ ಸರಿ ಸಾಟಿಯಾದವರನ್ನು ಹುಡುಕಿದರೂ ಸಿಗುವುದು ಕಷ್ಟ. ಜಗತ್ತು ವಿವಿಧ ರೀತಿಯಲ್ಲಿ ಬದಲಾದರೂ ಭಾರತ ದೇಶ ಮಾತ್ರ ಸಂಸ್ಕೃತಿಯ ವೈವಿಧ್ಯತೆಯಿಂದಲೇ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿರುವುದು ಸಂವಿಧಾನದ ಆಶಯದಿಂದ ಎಂದರು.
ಕರ್ನಾಟಕ ಬ್ಯಾರಿ ಅಕಾಡಮಿ ಸದಸ್ಯ ಕಿರುಗುಂದ ಅಬ್ಬಾಸ್ ಮಾತನಾಡಿ, ನಾಗರಿಕ ಸಮಾಜವನ್ನು ಉತ್ತಮ ರೀತಿಯಲ್ಲಿ ಒಂದು ಗೂಡಿಸಿ ಮುನ್ನಡೆಸಲು ವೇದಿಕೆಯನ್ನು ಹುಟ್ಟು ಹಾಕಲಾಗಿದೆ. ಶಿಕ್ಷಣ, ಆರೋಗ್ಯ, ಆತ್ಮವಿಶ್ವಾಸ ಭೌತಿಕ ಬಲಾಢ್ಯತೆ ಮತ್ತಿತರೆ ಉದ್ದೇಶಗಳನ್ನು ಸಾಧಿಸಲಿದೆ ಎಂದರು.
ಎಸೆಸೆಲ್ಸಿ, ಪಿಯುಸಿ ನಂತರ ಮುಂದೇನು? ಎಂಬ ವಿಷಯದ ಬಗ್ಗೆ ಪತ್ರಕರ್ತ ವಾಸುದೇವ್ ಮತ್ತು ಮಂಗಳೂರಿನ ಯು.ಎಚ್.ಉಮರ್, ಚಿತ್ರದುರ್ಗ ಮುಸ್ಲಿಂ ಕಮೀಟಿ ಅಧ್ಯಕ್ಷ ಮುಹಮ್ಮದ್ ಸಾದಿಕುಲ್ಲಾ ಸಾಹೇಬ್ ಉಪನ್ಯಾಸ ನೀಡಿದರು. ಕಾರ್ಯಕ್ರಮವನ್ನು ವೇದಿಕೆಯ ಕಾರ್ಯಾಧ್ಯಕ್ಷ ಬಿದರಹಳ್ಳಿ ಅಬ್ರಾರ್ ಉಧ್ಘಾಟಿಸಿದರು. ವೇದಿಕೆ ಅಧ್ಯಕ್ಷ ಸಿ.ಕೆ ಇಬ್ರಾಹೀಂ ಅಧ್ಯಕ್ಷತೆ ವಹಿಸಿದ್ದರು.
ದಸಂಸ ಮುಖಂಡ ಲೋಕವಳ್ಳಿ ರಮೇಶ್, ಕೋಸೌವೇ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿಯುದ್ದೀನ್, ಜಾಮಿಯಾ ಮಸೀದಿ ಅಧ್ಯಕ್ಷ ಕಲೀಮುಲ್ಲಾ, ಜದೀದ್ ಮಸೀದಿ ಅಧ್ಯಕ್ಷ ಪ್ಯಾರಿಜಾನ್, ಬದ್ರಿಯಾ ಮಸೀದಿ ಅಧ್ಯಕ್ಷ ಎಂ.ಎ.ಹಮ್ಮಬ್ಬ, ಉದ್ಯಮಿ ಅಕ್ರಂ ಹಾಜಿ, ಅಯ್ಯೂಬ್ ಹಾಜಿ, ಚಕ್ಕಮಕ್ಕಿ ಮಜೀದ್, ವೌಲಾನ ಶಫಿವುಲ್ಲಾ, ಶಬ್ಬೀರ್, ಮೈಸ್ ಕಂಪ್ಯೂಟರ್‌ನ ಶರೀಫ, ಜೋಹರ್ ಅಲಿ, ಯಾಕೂಬ್, ಫಿಶ್ ಮೋಣು, ಅಹ್ಮದ್ ಬಾವ ಬಿಳಗುಳ, ರಝಾಕ್ ಹಂಡುಗುಳಿ ಸಹಿತ ವಿವಿಧ ವಿದ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.