ಬೇಲೇನಹಳ್ಳಿಗೆ ಕುಡಿಯುವ ನೀರು ಒದಗಿಸಿದ ಗೋಪಿಕೃಷ್ಣ
<ಅಝೀಝ್ ಕಿರುಗುಂದ
ಚಿಕ್ಕಮಗಳೂರು, ಮೇ 8: ರಾಜ್ಯದ ವಿವಿಧೆಡೆಗಳಲ್ಲಿ ಹನಿ ನೀರಿಗೂ ಜನರು ಪರದಾಡುವಂತ ಪರಿಸ್ಥಿತಿ ಇದೆ. ಹಾಗೆಯೇ ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕುಗಳಲ್ಲಿ ಬರಗಾಲದ ಕರಿಛಾಯೆ ಮೇಳೈಸಿದೆ. ತರೀಕೆರೆ ತಾಲೂಕಿನ ಬೇಲೇನಹಳ್ಳಿ ್ರಾಮದಲ್ಲಿ ಬರಗಾಲದಿಂದ ತತ್ತರಿಸಿದ ಜನರಿಗೆ ಹೃದಯ ಶ್ರೀಮಂತಿಕೆ ಮೆರೆಯುತ್ತಿರುವ ಸಮಾಜ ಸೇವಕ ಗೋಪಿಕೃಷ್ಣ ಎಂಬವರು ಸ್ವಂತ ಹಣದಿಂದ ಬೋರ್‌ವೆಲ್ ಕೊರೆಸಿ ಕುಡಿಯುವ ನೀರು ಒದಗಿಸಲು ಮುಂದಾಗಿರುವುದು ಜನರ ಸಂತಸಕ್ಕೆ ಕಾರಣವಾಗಿದೆ.
ಾಜ್ಯದಲ್ಲಿ ಹಿಂದೆಂದೂ ಕಾಣದ ರೀತಿಯ ಬರ ಗಾಲ ಬಂದಿದೆ. 137 ತಾಲೂಕುಗಳಲ್ಲಿ ಹನಿ, ಹನಿ ನೀರಿಗೂ ಜನರು ಪರದಾಡುತ್ತಿರುವ ಪರಿಸ್ಥಿತಿ ಕಂಡು ಬರುತ್ತಿದೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗದ ತಾಲೂಕುಗಳಲ್ಲಿ ಬ ಗಾಲ ಜನರನ್ನು ಅಕ್ಷರಶಃ ತಬ್ಬಿಬ್ಬುಗೊಳಿಸಿದೆ. ಜನ, ಜಾನು ವಾರುಗಳಿಗೂ ಕುಡಿಯಲು ನೀರು ಸಿಗದ ಪರಿಸ್ಥಿತಿ ಇಲ್ಲಿನದಾಗಿದೆ. ಹಾಗೆಯೇ ತರೀಕೆರೆ ತಾಲೂಕಿನ ಬೇಲೇನಹಳ್ಳಿ ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿವೆ. ಆ ಎಲ್ಲಾ ಮನೆಗಳ ಮಂದಿಯೂ ಕುಡಿಯುವ ನೀರಿಗೆ ಹಪಹಪಿಸುವುದನ್ನು ಕಂಡ ಗೋಪಿಕೃಷ್ಣ ಸ್ವಂತ ಹಣದಲ್ಲಿ ಬೋರ್‌ವೆಲ್ ಕೊರೆಯಿಸಿ ಸದ್ಯ ಜನರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಿಕೊಟ್ಟಿದ್ದಾರೆ. ಗ್ರಾಮದ ಜನರು ಕೊನೆಯತನಕ ನೆನಪಿಟ್ಟುಕೊಳ್ಳುವಂತಹ ಕಾರ್ಯವನ್ನು ಸಮಾಜ ಸೇವಕ ಗೋಪಿಕೃಷ್ಣ ಮಾಡಿಕೊಟ್ಟಿದ್ದಾರೆ.
ಬೇಲೇನಹಳ್ಳಿ ಗ್ರಾಮದ ಜನರು ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಯಿಂದ ಬಳಲುತ್ತಿದ್ದರು. ಆದರೆ ಯಾವುದೇ ಜನಪ್ರತಿನಿಧಿಗಳು, ಅಧಿಕಾರಿಗಳಾಗಲೀ ಇಲ್ಲಿನ ಜನರ ಸಮಸ್ಯೆಗೆ ಪರಿಹಾರೋಪಾಯ ಕಂಡುಕೊಳ್ಳಲು ಪ್ರಯತ್ನಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸದ್ಯದ ಬರಗಾಲದ ಪರಿಸ್ಥಿತಿಯಲ್ಲಿ ಬೇಲೇನಹಳ್ಳಿ ಗ್ರಾಮದ ಜನರು ಕುಡಿಯುವ ನೀರಿಲ್ಲದೇ ಅಕ್ಷರಶಃ ಕಂಗಾಲಾಗುವಂತಾಗಿದ್ದರು. ಗ್ರಾಮದ ಜನರಿಗೆ ಒಂದು ಕೊಳವೆ ಬಾವಿ ಕೊರೆಯಿಸಿ ನೀರು ಪೂರೈಸಿದರೆ ಸಾಕಿತ್ತು. ಆದರೆ ಆ ಕಾರ್ಯವನ್ನು ಮಾಡುವವರು ಇರಲಿಲ್ಲ.
ಕುಡಿಯುವ ನೀರಿನ ಸಮಸ್ಯೆಗೆ ಜನರು ಬಳಲು ತ್ತಿದ್ದಂತೆ ಗ್ರಾಮದ ಕೆಲವರು ಗೋಪಿಕೃಷ್ಣರವರ ಬಳಿ ತೆರಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನೆರವಾಗುವಂತೆ ಮನವಿ ಮಾಡಿದ್ದರು. ಗ್ರಾಮದ ಜನರ ಮನವಿಗೆ ಸ್ವತಃ ಸ್ಪಂಧಿಸಿದ ಗೋಪಿಕೃಷ್ಣ, 24 ಗಂಟೆ ಅವಧಿಯೊಳಗೆ ಒಂದು ಲಕ್ಷಕ್ಕೂ ಅಧಿಕ ರೂ. ವ್ಯಯಿಸಿ ಬೋರ್‌ವೆಲ್ ಕೊರೆಯಿಸಿದ್ದಾರೆ. ಬೋರ್‌ವೆಲ್‌ನಲ್ಲಿ 5.50 ಇಂಚು ನೀರು ಹರಿಯುತ್ತಿದ್ದು, ಬೇಲೇನಹಳ್ಳಿಯ 200 ಕುಟುಂಬಗಳಿಗೆ ದಿನದ 24 ಗಂಟೆಗಳಲ್ಲಿ ನೀರು ಸಿಗುವಂತೆ ಮಾಡುವ ಮೂಲಕ ಮಾನವೀಯತೆಯಿಂದ ಮೆರೆದಿದ್ದಾರೆ.ಇದಲ್ಲದೇ ಸ್ವತಃ ಗೋಪಿಕೃಷ್ಣರವರು ಸುತ್ತಮುತ್ತಲ ಹತ್ತಾರು ಹಳ್ಳಿಗಳ ಜನರಿಗೆ ಟ್ಯಾಂಕರ್‌ಗಳ ಮೂಲಕ ಸ್ವತಃ ಹಣ ವ್ಯಹಿಸಿ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ. ಒಟ್ಟಾರೆ ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಕಂಗೆಟ್ಟಿರುವ ಜನರಿಗೆ ಕುಡಿಯುವ ನೀರು ಒದಗಿಸಿ ಜನರ ಶ್ಲಾಘನೆಗೆ ಗೋಪಿಕೃಷ್ಣ ಪಾತ್ರವಾಗಿದ್ದಾರೆ.